ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ
ಮೈಸೂರು

ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ

November 8, 2021

ಎಂ.ಟಿ.ಯೋಗೇಶ್‌ಕುಮಾರ್

ಮೈಸೂರು, ನ.೭ – ಸಂಭವನೀಯ ಕೊರೊನಾ ಮೂರನೇ ಅಲೆ ಜನರ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ, ಜನರು ಮಾತ್ರ ಎರಡು ಡೋಸ್ ಲಸಿಕೆ ಪಡೆದು ಅಪಾಯದಿಂದ ಪಾರಾಗಲು ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿ ಣಮಿಸಿದೆ. ಜನರನ್ನು ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಾ ದ್ಯಂತ ಮನೆ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕುವ ಅಭಿಯಾನ ಆರಂಭಿಸಿದೆ. ಕೊರೊನಾ ಎರಡನೇ ಅಲೆಯಿಂ ದಾಗಿ ಸಾಕಷ್ಟು ಪ್ರಮಾಣದಲ್ಲಿ ಸಾವು-ನೋವು ಸಂಭ ವಿಸಿದ್ದರಿಂದ ಸೋಂಕಿಗೆ ಬಲಿಯಾಗುವುದರಿಂದ ಪಾರಾ ಗಲು ಲಸಿಕೆ ಪಡೆಯಲು ಮುಗಿಬೀಳುತ್ತಿದ್ದ ಜನರು ಇದೀಗ ವರಸೆ ಬದಲಿಸಿದ್ದಾರೆ. ಲಸಿಕೆ ಹಾಕುವುದಾಗಿ ಕರೆದರೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರೊಂದಿಗೆ ಒಂದು ಡೋಸ್ ಪಡೆದು ೮೪ ದಿನ ಕಳೆ ದಿದ್ದರೂ ೨ನೇ ಡೋಸ್ ಪಡೆಯಲು ಹಿಂಜರಿಯುತ್ತಿ ರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿರುವುದು ಆರೋಗ್ಯ ಇಲಾಖೆಗೆೆ ತಲೆ ನೋವಾಗಿ ಪರಿಣಮಿಸಿದೆ.

ಕಳೆದ ೩ ತಿಂಗಳಿಂದ ಸೋಂಕು ನಿಯಂತ್ರಣಕ್ಕೆ ಬಂದಿ ರುವುದರಿಂದ ಜನಜೀವನ ಸಹಜ ಸ್ಥಿತಿಗೆ ತಿರುಗಿದೆ. ಸೋಂಕು ಹರಡುವಿಕೆಯಿಂದಾಗಿ ಈ ಹಿಂದೆ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ. ಇದರಿಂದ ವಾಣಿಜ್ಯ-ವಹಿವಾಟು, ಮನರಂಜನೆ, ಸಂಚಾರ, ಪ್ರವಾಸ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಜನರಲ್ಲಿ ಕೊರೊನಾ ಆತಂಕ ನಿವಾರಣೆಯಾಗಿದೆ. ಈ ಮನೋಭಾವವೇ ಲಸಿಕೆ ಪಡೆ ಯಲು ಹಿಂದೇಟು ಹಾಕುವಂತೆ ಮಾಡಿದೆ. ತಜ್ಞ ವೈದ್ಯರ ಅಭಿಪ್ರಾಯದಂತೆ ಜನವರಿಯಲ್ಲಿ ಮೂರನೇ ಅಲೆ ಕಾಡು ವುದು ಖಚಿತವಾಗಿದೆ. ಮಕ್ಕಳು ಮಾತ್ರವಲ್ಲದೆ, ಹಿರಿಯ ನಾಗರಿಕರು, ವಯಸ್ಕರು, ಯುವಜನರಿಗೂ ೩ನೇ ಅಲೆ ದುಷ್ಪರಿಣಾಮ ಬೀರಲಿದೆ.

ಈ ಅನಾಹುತದಿಂದ ತಪ್ಪಿಸಿಕೊಳ್ಳಲು ಲಸಿಕೆ ಪಡೆಯುವುದು ಅಂತಿಮ ಮಾರ್ಗ. ಆದರೆ ಶೇ.೧೦ರಷ್ಟು ಮಂದಿ ಇನ್ನೂ ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ೬೦೦ ತಂಡ: ಮೈಸೂರು ಪಾಲಿಕೆ ವ್ಯಾಪ್ತಿಯೊಳಗೆ ೬೫ ಮೊಬೈಲ್ ಯೂನಿಟ್ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆಸಲು ಒಟ್ಟು ೬೦೦ ತಂಡ ರಚಿಸಲಾಗಿದೆ. ಅದರಲ್ಲಿ ೧೩೦ ತಂಡ ಸಂಚಾರಿ ತಂಡವಾಗಿದೆ. ಜನನಿಬಿಡ ಪ್ರದೇಶಕ್ಕೆ ಹೋಗಿ ಯಾರು ಲಸಿಕೆ ಹಾಕಿಸಿಕೊಂಡಿ ಲ್ಲವೋ ಅಂತಹವರನ್ನು ಗುರುತಿಸಿ ಲಸಿಕೆ ಹಾಕಲಾಗುತ್ತದೆ. ಈ ಅಭಿಯಾನ ಸದುಪ ಯೋಗ ಪಡೆದುಕೊಂಡು ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರಲ್ಲೇ ಶೇ.೧೦ರಷ್ಟು ಲಸಿಕೆ ಪಡೆದಿಲ್ಲ: ಮೈಸೂರು ನಗರದಲ್ಲಿ ಇದುವರೆಗೀ ಶೇ.೯೩ರಷ್ಟು ಲಸಿಕೆ ನೀಡಲಾಗಿದೆ. ಆದರೆ ಎಲ್ಲರೂ ನಗರ ಪ್ರದೇಶದಲ್ಲಿ ವಾಸಿಸುವವ ರಲ್ಲ. ಗ್ರಾಮೀಣ ಪ್ರದೇಶ ಹಾಗೂ ವಿವಿಧ ತಾಲೂಕಲ್ಲಿ ವಾಸಿಸುವವರು ಮೈಸೂರು ನಗರದಲ್ಲೇ ಲಸಿಕೆ ಪಡೆದಿರುವವರ ಸಂಖ್ಯೆ ಹೆಚ್ಚಿದೆ. ಈ ಎಲ್ಲಾ ಅಂಶವನ್ನು ಅವಲೋಕಿಸಿದಾಗ ನಗರ ಪ್ರದೇಶದಲ್ಲಿ ಇನ್ನು ಶೇ.೧೦ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿಲ್ಲ ಎಂದು ಡಿಹೆಚ್‌ಓ ವಿಷಾದಿಸಿದರು.

೨ನೇ ಡೋಸ್ ಪಡೆಯದೇ ೨ ಲಕ್ಷ ಮಂದಿ: ಮೊದಲ ಡೋಸ್ ಪಡೆದು ೮೪ ದಿನ ಆಗಿದ್ದರೂ ಎರಡನೇ ಡೋಸ್ ಪಡೆಯದೇ ಇರುವ ಒಂದು ಲಕ್ಷ ಮಂದಿ ಮೈಸೂರು ನಗರದಲ್ಲೇ ಇದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಒಂದು ಲಕ್ಷ ಮಂದಿ ನಿಗಧಿತ ಅವಧಿಯೊಳಗೆ ಎರಡನೇ ಡೋಸ್ ಲಸಿಕೆ ಪಡೆಯದೇ ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದು ೮೪ ದಿನ ಆಗಿದ್ದರೂ ಎರಡನೇ ಡೋಸ್ ಪಡೆಯಲು ನಿರಾಕರಿಸುತ್ತಿರುವ ೨ ಲಕ್ಷ ಮಂದಿ ಇದ್ದಾರೆ. ಕೊರೊನಾ ಎರಡನೇ ಅಲೆಯಿಂದ ಸಾಕಷ್ಟು ಹಾನಿಯಾಗಿದ್ದರೂ ಜನರು ಮಾತ್ರ ಲಸಿಕೆ ಪಡೆಯಲು ಮುಂದೆ ಬರದೇ ಇರುವುದು ಇಲಾಖೆಗೆ ಸವಾಲಾಗಿದೆ ಎಂದರು.

ಜಿಲ್ಲೆಯಲ್ಲಿ ಲಸಿಕೆ ಲಸಿಕೆ ಪಡೆದ ಪ್ರಮಾಣ ಶೇ.೮೯ರಷ್ಟಿದೆ. ಅದರಲ್ಲಿ ಶೇ.೫೫ರಷ್ಟು ಎರಡನೇ ಡೋಸ್ ಪಡೆದಿದ್ದಾರೆ. ಜನವರಿಯಲ್ಲಿ ಮೂರನೇ ಅಲೆ ಬರುವುದು ಖಚಿತ. ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ಬಂದರೂ ಪ್ರಾಣಾಪಾಯವಾಗುವುದಿಲ್ಲ. ಸೋಂಕು ತಗುಲಿದರೆ ಜ್ವರದಂತೆ ಬಂದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ೧೪೦ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಹಾಗೂ ಮೊಬೈಲ್ ಯೂನಿಟ್‌ಗಳಲ್ಲೂ ಲಸಿಕೆ ಪಡೆದುಕೊಳ್ಳಬೇಕು ಎಂದು ಕೋರಿದರು.

Translate »