ಮೈಸೂರಲ್ಲಿ  ಕಿದ್ವಾಯಿ, ಏಮ್ಸ್ ಸ್ಥಾಪನೆಗೆ ಮನವಿ
ಮೈಸೂರು

ಮೈಸೂರಲ್ಲಿ ಕಿದ್ವಾಯಿ, ಏಮ್ಸ್ ಸ್ಥಾಪನೆಗೆ ಮನವಿ

February 14, 2021

ಗ್ರಂಥಾಲಯ ಪುಸ್ತಕ ಖರೀದಿ ಸಂಬಂಧ ಪ್ರಕಾಶಕರ ಕೋರಿಕೆ

ಮೈಸೂರು, ಫೆ.13(ಎಸ್‍ಬಿಡಿ)- ಮೈಸೂ ರಿನಲ್ಲಿ ಕಿದ್ವಾಯಿ(ಕ್ಯಾನ್ಸರ್ ಆಸ್ಪತ್ರೆ) ಹಾಗೂ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮೈಸೂರು ಕೈಗಾರಿಕೆ ಗಳ ಸಂಘದ ಅಧ್ಯಕ್ಷರೂ ಆದ ಮಾಜಿ ಶಾಸಕ ವಾಸು, ಮುಖ್ಯಮಂತ್ರಿ ಯಡಿ ಯೂರಪ್ಪನವರಿಗೆ ಮನವಿ ಮಾಡಿದರು.

ಮೈಸೂರಿನ ಕಲಾಮಂದಿರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಕೈಗಾರಿಕೆಗಳ ಸಂಘದ ವತಿ ಯಿಂದ ಸಿಎಂಗೆ ಮನವಿ ಸಲ್ಲಿಸಿ ಮಾತನಾ ಡಿದ ವಾಸು, ಮೈಸೂರು ನಗರ ಹೆಲ್ತ್ ಸಿಟಿ ಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಈಗಿ ರುವ ಹಲವು ಆರೋಗ್ಯ ಕೇಂದ್ರಗಳ ಜೊತೆಗೆ ಕಿದ್ವಾಯಿ ಹಾಗೂ ಏಮ್ಸ್ ಘಟಕಗಳನ್ನು ಆರಂಭಿಸುವುದು ಅವಶ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಶೀಘ್ರ ಕ್ರಮಕ್ಕೆ ಸೂಚಿಸಬೇಕೆಂದು ಒತ್ತಾಯಿಸಿದರು.

ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ, ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ, ಸೂಕ್ಷ್ಮ ಉದ್ಯಮಗಳಿಗೆ ಪೂರೈಕೆ ವೆಚ್ಚ ಅನುಗುಣ ವಾಗಿ ವಿದ್ಯುತ್, ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆ ಪೂರೈಕೆ, ಕೈಗಾ ರಿಕಾ ಪ್ರದೇಶಗಳಿಗೆ ಸೋಲಾರ್ ಬೀದಿದೀಪ ಅಳವಡಿಕೆ, ಸಣ್ಣ ಕೈಗಾರಿಕೆಗಳಿಗೆ ಕೆಐಎ ಡಿಬಿ ಪ್ರದೇಶ ಮೀಸಲು, ಕೈಗಾರಿಕಾ ಘನ ತ್ಯಾಜ್ಯ ಸಂಗ್ರಹಗಾರ, ರೋಗಗ್ರಸ್ತ ಕೈಗಾರಿಕೆ ಗಳ ಪುನಶ್ಚೇತನಾ ಯೋಜನೆ, ಕೈಗಾರಿಕಾ ಪ್ರದೇಶದ ಕೆರೆ ರಕ್ಷಣೆ, ಸುಸಜ್ಜಿತ ರಫ್ತು ಕೇಂದ್ರ, ಟ್ರಕ್ ಟರ್ಮಿನಲ್, ಪ್ರತ್ಯೇಕ ಹೆಲಿಪ್ಯಾಡ್, ನೀರು ದರ ವರ್ಗ ಪರಿಷ್ಕರಣೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ವಾಸು ಅವರು, ಈವರೆಗೆ ಮುಖ್ಯಮಂತ್ರಿ ಗಳಾದವರೆಲ್ಲಾ ಮೈಸೂರಿಗೆ ಸ್ಮರಣೀಯ ಕೊಡುಗೆ ನೀಡಿದ್ದಾರೆ. ಯಡಿಯೂರಪ್ಪ ನವರಿಂದಲೂ ನಿರೀಕ್ಷಿಸುತ್ತಿದ್ದೇವೆ ಎಂದರು.

ಪ್ರಕಾಶಕರ ಮನವಿ: ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳ ಸಗಟು ಖರೀದಿಗೆ ಸರ್ಕಾರ ಆದ್ಯತೆ ನೀಡಬೇಕು. ನಾಲ್ಕು ದಶಕ ಗಳಿಂದ ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪ್ರತಿ ಪುಸ್ತಕದ 300 ಪ್ರತಿಗಳನ್ನು ಖರೀ ದಿಸಿ, ರಾಜ್ಯದ ಸಾರ್ವಜನಿಕ ಗ್ರಂಥಾಲಯ ಗಳಿಗೆ ಸರಬರಾಜು ಮಾಡುವ ಮಹತ್ವದ ಯೋಜನೆ ಜಾರಿಯಲ್ಲಿದೆ. ಆದರೆ 2018-19ರಲ್ಲಿ ಆಯ್ಕೆ ಮಾಡಿದ ಪುಸ್ತಕಗಳನ್ನು ಹಣದ ಕೊರತೆಯಿಂದ ಈವರೆಗೂ ಖರೀದಿ ಮಾಡಲಾಗಿಲ್ಲ. ಆದಾಗ್ಯೂ 2019-2020ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಎರಡೂ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳ ಖರೀ ದಿಗೆ ಕನಿಷ್ಟ 30 ಕೋಟಿ ರೂ. ಅಗತ್ಯವಿದೆ. ಈ ಮೊತ್ತದಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗದಿರುವುದರಿಂದ ಮುಂಬರುವ ಬಜೆಟ್‍ನಲ್ಲಿ ಅನುದಾನ ಕಲ್ಪಿಸಬೇಕು ಎಂಬ ಅಖಿಲ ಕರ್ನಾಟಕ ಪುಸ್ತಕ ಪ್ರಕಾಶ ಕರ ಸಂಘದ ಮನವಿಯನ್ನು ಸಂಘದ ಗೌರವಾಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹಾಗೂ ಅಧ್ಯಕ್ಷ ಡಿ.ಎನ್.ಲೋಕಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಿದರು.

ಹೋಟೆಲ್ ಮಾಲೀಕರ ಒತ್ತಾಯ: ದಸರಾ ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಪ್ರವಾಸೋದ್ಯಮ ಪ್ರಾಧಿಕಾರ, ಪ್ರವಾಸೋ ದ್ಯಮ ಅಭಿವೃದ್ಧಿಗೆ ರಾಯಭಾರಿ ನೇಮಕ, ಚಾಮುಂಡಿಬೆಟ್ಟಕ್ಕೆ ರೋಪ್‍ವೇ, ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮದ ಕಟ್ಟಡಗಳಿಗೆ ಎರಡು ವರ್ಷ ಕಂದಾಯ ವಿನಾಯ್ತಿ, ನೆರೆ ರಾಜ್ಯಗಳ ಮಾದರಿ ಪ್ರವಾಸಿ ಬಸ್ಸುಗಳಿಗೆ ತೆರಿಗೆ ಜಾರಿ, ಹೋಟೆಲ್ ನೌಕರರ ತರಬೇತಿ ಕೇಂದ್ರ ಸ್ಥಾಪನೆ, ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪಿಸುವಂತೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ ಸಿಎಂಗೆ ಮನವಿ ಸಲ್ಲಿಸಿದರು.

 

Translate »