ವಿಪಕ್ಷಗಳ ಟೀಕೆಗೆ ರಾಜ್ಯ ಬಜೆಟ್ ಉತ್ತರಿಸಲಿದೆ: ಬಿಎಸ್‍ವೈ
ಮೈಸೂರು

ವಿಪಕ್ಷಗಳ ಟೀಕೆಗೆ ರಾಜ್ಯ ಬಜೆಟ್ ಉತ್ತರಿಸಲಿದೆ: ಬಿಎಸ್‍ವೈ

February 14, 2021

ಅಭಿವೃದ್ಧಿ ಕಾರ್ಯ ನಿಂತಿಲ್ಲ, ಅಂದುಕೊಂಡಂತೆಯೇ ಆಗುತ್ತಿವೆ: ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ

ಮೈಸೂರು, ಫೆ.13(ವೈಡಿಎಸ್)- `ವಿರೋಧ ಪಕ್ಷಗಳ ಟೀಕೆಗೆ ರಾಜ್ಯ ಬಜೆಟ್ ಉತ್ತರ ನೀಡಲಿದೆ’ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿ ಕ್ರಿಯಿಸಿ, ಟೀಕೆ ಮಾಡುವವರಿಗೆ ಸದ್ಯದಲ್ಲೇ ನಾನು ಮಂಡಿಸಲಿರುವ ಬಜೆಟ್ ಉತ್ತರ ನೀಡಲಿದೆ. ರಾಜ್ಯದಲ್ಲಿ ಯಾವುದೇ ಅಭಿ ವೃದ್ಧಿ ಕೆಲಸಗಳು ನಿಂತಿಲ್ಲ, ಎಲ್ಲವೂ ಅಂದುಕೊಂ ಡಂತೆಯೇ ಆಗುತ್ತಿವೆ. ವಿಪಕ್ಷದವರು ಟೀಕೆ ಮಾಡುವುದು ಸ್ವಾಭಾ ವಿಕ. ಅದಕ್ಕೆ ನಾನು ಪ್ರತಿ ಕ್ರಿಯೆ ನೀಡುವುದಿಲ್ಲ ಎಂದರು. ಬಜೆಟ್ ಸಿದ್ಧತೆ ಕುರಿತು ಸಿಎಂ ಪ್ರತಿ ಕ್ರಿಯಿಸಿ, ಬಜೆಟ್ ಸಿದ್ಧತಾ ಸಭೆಗಳು ಸಂಬಂಧ ಪಟ್ಟ ಸಚಿವರು, ಇಲಾಖಾ ಅಧಿಕಾರಿ ಗಳೊಂದಿಗೆ ನಡೆಯು ತ್ತಿವೆ. ನಾನು ಇನ್ನೆರಡು ದಿನ ಬೆಂಗಳೂರಲ್ಲಿ ಇರು ವುದಿಲ್ಲ. ವಾಪಸ್ಸಾದ ನಂತರ ಇನ್ನೆರಡು ದಿನ ಸಭೆ ನಡೆಸಿದರೆ ಪೂರ್ವಭಾವಿ ಸಭೆ ಗಳು ಮುಕ್ತಾಯವಾ ದಂತೆ. ಈಗಿರುವ ಹಣ ಕಾಸಿನ ಸ್ಥಿತಿಯ ನಡುವೆಯೇ ಮಂತ್ರಿ, ಶಾಸ ಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರೊಂದಿಗೆ ಚರ್ಚಿಸಿ, ಬಜೆಟ್ ಮಂಡಿ ಸುವೆ ಎಂದರು. ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, `ಎಲ್ಲರಿಗೂ ನ್ಯಾಯ ಒದಗಿಸಿಕೊಡು ವುದು ಮುಖ್ಯಮಂತ್ರಿಯಾಗಿ ನನ್ನ ಜವಾ ಬ್ದಾರಿ. ಅದಕ್ಕೆ ಬೇಕಾದ ಚಿಂತನೆ ನಡೆದಿದ್ದು, ತಜ್ಞರೊಂದಿಗೆ ಚರ್ಚಿಸುತ್ತಿದ್ದೇನೆ. ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸುವ ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ. ನನಗೆ ಇಂಥ ಸವಾಲುಗಳು ಬಂದಾಗ ಖುಷಿಯೇ ಆಗುತ್ತದೆ. ಬಹಳ ಹುಮ್ಮಸ್ಸಿನಿಂದಲೇ ಅವುಗಳನ್ನು ಎದುರಿಸುತ್ತೇನೆ’ ಎಂದು ಉತ್ತರಿಸಿದರು.

Translate »