ಸಣ್ಣಪುಟ್ಟ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು
ಮೈಸೂರು

ಸಣ್ಣಪುಟ್ಟ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು

April 18, 2020

ಮೈಸೂರು, ಏ.17(ಎಂಟಿವೈ)- ಕೇಂದ್ರ ಸರ್ಕಾರ ಜನ್‍ಧನ್ ಯೋಜನೆಯಡಿ 500 ರೂ., ಕಟ್ಟಡ ಕಾರ್ಮಿಕರ ಖಾತೆಗೆ 2000 ರೂ ಹಾಕಿದ್ದಾರೆ ಅಷ್ಟೇ. ಆದರೆ ಚಿಲ್ಲರೆ ಅಂಗಡಿ, ಸವಿತಾ ಸಮಾಜದ ಕ್ಷೌರಿಕರು, ಟೈಲರಿಂಗ್, ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸು ವವರು, ಮಧ್ಯಮ ವರ್ಗದವರು, ಪ್ರತಿನಿತ್ಯ ಕೂಲಿ ಮಾಡುವವರ ಪಾಡೇನು? ಅವರ ಸ್ಥಿತಿ ಸರ್ಕಾರಕ್ಕೆ ತಿಳಿಯುತ್ತಿಲ್ಲವೇ? ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲೆಯಲ್ಲಿ ಟಾಸ್ಕ್‍ಫೋರ್ಸ್ ರಚಿಸಲಾಗಿದ್ದು, ಲಾಕ್‍ಡೌನ್ ಜಾರಿಯಾದ ಸಂದರ್ಭ ದಿಂದಲೂ ಅನೇಕ ಬಡವರಿಗೆ ಆಹಾರ ಕಿಟ್‍ಗಳನ್ನು ನೀಡುತ್ತಾ ಬಂದಿದ್ದೇವೆ. ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುತ್ತಿದ್ದೇವೆ. ಆದರೆ ಸರ್ಕಾರ ಕೂಲಿ ಕಾರ್ಮಿ ಕರ ನೆರವಿಗೆ ಧಾವಿಸಿಲ್ಲ ಎಂದು ಆರೋಪಿ ಸಿದರು. ಕೂಡಲೇ ಅವ ರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ 150 ಮಂದಿ ಡಯಾಲಿಸಿಸ್ ಮಾಡಿಸಿಕೊಳ್ಳುವವರಿದ್ದಾರೆ. ಆದರೆ ಅವರಿ ಗೆಲ್ಲಾ ತಾಲೂಕು ಆಸ್ಪತ್ರೆಗಳಲ್ಲಿರುವ ಒಂದು ಆಂಬುಲೆನ್ಸ್ ಸಾಕಾಗುತ್ತಿಲ್ಲ. ಹಾಗಾಗಿ ಪ್ರತಿ ತಾಲೂಕಿಗೂ ಇಂತಿಷ್ಟು ಸರ್ಕಾರಿ ವಾಹನ ಗಳನ್ನು ತುರ್ತು ಸಂದರ್ಭಗಳಿಗೆ ಒದಗಿಸ ಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮದ್ಯದಂಗಡಿಗಳನ್ನು ತೆರೆ ಯಲು ಚಿಂತನೆ ನಡೆಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಒಂದೊತ್ತಿನ ಊಟಕ್ಕೂ ಜನರು ಪರದಾಡುತ್ತಿದ್ದಾರೆ. ಹಾಗಾಗಿ ದುಡಿಮೆ ಇಲ್ಲದೆ ಹಣವಿಲ್ಲದೇ ಇರುವ ಇಂತಹ ಸಂದರ್ಭದಲ್ಲಿ ಮದ್ಯದಂಡಿಗಳನ್ನು ತೆರೆಯಬಾರದು. ಇದ ರಿಂದ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ಎಂ.ಕೆ.ಸೋಮಶೇಖರ್ ತಿಳಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ರಾಜ್ಯದಲ್ಲಿ ಲಾಕ್‍ಡೌನ್ ಇರುವ ಸಮಯ ದಲ್ಲಿಯೇ ರಾಜ್ಯ ಸರ್ಕಾರವು ರಾಜ್ಯಾದಂತ 10 ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಸುಮಾರು 19 ಸಾವಿರ ಮೂಲ ನಿವೇ ಶನಗಳನ್ನು ಮಾರಾಟ ಮಾಡಲು ನಿರ್ಧ ರಿಸಿರುವುದು ದೊಡ್ಡ ಮಾಫಿಯಾ ಮಾಡಲು ಸಂಚು ರೂಪಿಸಿದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

Translate »