ಬೆಂಗಳೂರು,ಫೆ.21-ಕೆಪಿಸಿಸಿ ಕಾರ್ಯಾ ಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯ ಕ್ರಮ ಭಾನುವಾರ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಿತು. ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ನೂತನ ಕಾರ್ಯಾ ಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಧ್ರುವನಾರಾಯಣ್ ವಿದ್ಯಾರ್ಥಿ ನಾಯಕರಾಗಿ ಬಂದವರು. ಬಳಿಕ ಲೋಕ ಸಭೆಗೆ ಆಯ್ಕೆಯಾದವರು. ಹೆಚ್ಚಿನ ಜವಾ ಬ್ದಾರಿಯನ್ನು ನಾವೆಲ್ಲ ಒಗ್ಗಟ್ಟಾಗಿ ನಿರ್ವಹಿಸ ಬೇಕಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ಮೇಲೆ ನಂಬಿಕೆ ಇಟ್ಟಿ ದ್ದಾರೆ. ನಿಂಬೆಹಣ್ಣಿನ ಹುಳಿ ಇತರ ಹಣ್ಣು ಗಳ ಹುಳಿಗಿಂತ ಶ್ರೇಷ್ಠ. ಮಲ್ಲಿಕಾರ್ಜುನ ಖರ್ಗೆ ಅವರು ಹತ್ತು ಬಾರಿ ಚುನಾವಣೆ ಗೆದ್ದಿದ್ದಾರೆ. ಅವರ ಸಾಮರ್ಥ್ಯ ಗುರುತಿಸಿ ಅವರನ್ನು ವಿರೋಧ ಪಕ್ಷದ ನಾಯಕರ ನ್ನಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕದ ನಾಯಕರು ಸಮರ್ಥರು ಅನ್ನೋದನ್ನು ನಮ್ಮ ನಾಯಕರು ತೋರಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇಬ್ಬರು ನಾಯಕರು ಪದಗ್ರಹಣ ಮಾಡಿ ದ್ದಾರೆ. ನೂತನ ಮಾದರಿಯಲ್ಲಿ ಸೋನಿಯಾ ಗಾಂಧಿ ಟೀಂ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ ಬಿಬಿಎಂಪಿ ಸದಸ್ಯರಾಗಿ ಬಂದವರು. 7 ಬಾರಿ ಶಾಸಕರಾಗಿ ಆಯ್ಕೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದಾರೆ. ಯಾರೂ ಗೆಲ್ಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ ಗೆಲುವು ಸಾಧಿಸಿ ದ್ದರು. ಪಕ್ಷದ ಆಧಾರಸ್ತಂಭವಾಗಿ ನಿಂತ ಅವರನ್ನು ಕಾಂಗ್ರೆಸ್ ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ಅವರಿಗೆ ಜವಾ ಬ್ದಾರಿ ಹಂಚಲಾಗಿದೆ ಎಂದರು. ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದವರಿಗೆ ಮರಳಿ ಆಹ್ವಾನ
ನೀಡಲಾಗುವುದು. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್‍ಗೆ ಬಂದರೆ, ಸಂತೋಷದಿಂದ ಅವರನ್ನು ಬರಮಾಡಿಕೊಳ್ಳಲಾಗು ವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಾಲಿಗೆ ಈ ವರ್ಷ ಸಂಘಟನೆಯ, ಹೋರಾಟದ ವರ್ಷವಾಗಿದೆ. ಕಾಂಗ್ರೆಸ್ ಶಾಸಕರಿಲ್ಲದ 100 ವಿಧಾನ ಸಭಾ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟಿಸಲಾಗುವುದು ಎಂದರು. ಕಾಂಗ್ರೆಸ್ ಕಚೇರಿ, ಪಕ್ಷದ ದೇವಸ್ಥಾನ ಇದ್ದಂತೆ. ಎಲ್ಲ ಸ್ಥಳೀಯ ನಾಯಕರು ಕಾಂಗ್ರೆಸ್ ಕಚೇರಿ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೇ ಸಭೆ ನಡೆಸಬೇಕು. ನಾಯಕರ ಮನೆಗಳಲ್ಲಿ ಸಭೆ ನಡೆಸಬಾರದು ಎಂದರು.
ವ್ಯಕ್ತಿ ಪೂಜೆ ಮಾಡುವುದು, ಜೈಕಾರ ಹಾಕುವುದು ಬೇಡ. ಪಕ್ಷ ಪೂಜೆ ಇರಲಿ. ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದ ಕ್ಕಿಂತ, ಆ ವ್ಯಕ್ತಿ ಎಷ್ಟು ಜನರನ್ನು ಬೆಳೆಸುತ್ತಾನೆ ಎಂಬುದು ಮುಖ್ಯ ಎಂದರು. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ನಾನು ಮುಖ್ಯಮಂತ್ರಿ ಯಾಗುವುದು ಮುಖ್ಯವಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ’ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂ ರಾವ್, ಎಸ್.ಆರ್.ಪಾಟೀಲ್, ಡಿ.ಕೆ.ಸುರೇಶ್, ಬಿ.ಸಿ. ಚಂದ್ರ ಶೇಖರ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು.