ಸಿಡಿ ಪ್ರಕರಣ: ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು  ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ
ಮೈಸೂರು

ಸಿಡಿ ಪ್ರಕರಣ: ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ

March 30, 2021

ಮೈಸೂರು,ಮಾ.29(ಎಂಟಿವೈ)- ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜನರ ಗಮನ ಬೇರೆಡೆ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋ ಪಿಸಿ ಹಾಗೂ ಅತ್ಯಾಚಾರ ಪ್ರಕರಣ ದಾಖ ಲಿಸಿ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿ ಮುಂಭಾಗ ದಲ್ಲಿ ಸೋಮವಾರ ಮಧ್ಯಾಹ್ನ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗ, ಮೈಸೂರು ನಗರ ಹಾಗೂ ಗ್ರಾಮಾಂ ತರ ಕಾಂಗ್ರೆಸ್ ಘಟಕÀದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಘೋಷಣೆ ಕೂಗಿ ದರಲ್ಲದೆ ಯುವತಿ ನೀಡಿರುವ ಹೇಳಿಕೆ ಆಧರಿಸಿ, ಆತ್ಯಾಚಾರ ಪ್ರಕರಣ ದಾಖಲಿಸಿ ಕೊಂಡು ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಆಗ್ರಹಿಸಿದರು.

ಲೈಂಗಿಕ ದೌರ್ಜನ್ಯದಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದರೆ ಪ್ರಕರಣ ದಾಖ ಲಿಸಿ ಆರೋಪಿಗಳನ್ನು ಬಂಧಿಸುವ ಪೊಲೀ ಸರು, ರಮೇಶ್ ಜಾರಕಿಹೊಳಿ ಪ್ರಕರಣ ಬೆಳಕಿಗೆ ಬಂದು 24 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಮೀನಾ ಮೇಷ ಎಣಿಸುತ್ತಿದ್ದಾರೆ. ಒತ್ತಡಕ್ಕೆ ಒಳಗಾಗಿ ಪ್ರಕರಣದಿಂದ ರಮೇಶ್ ಜಾರಕಿಹೊಳಿ ಯನ್ನು ರಕ್ಷಿಸುವ ಸಂಚು ನಡೆಸಲಾಗುತ್ತಿದೆ. ಸಂತ್ರಸ್ತೆ ಯುವತಿ ತನ್ನ ಮೇಲೆ ಪ್ರಭಾವಿ ಸಚಿವರು ನಡೆಸಿರುವ ಲೈಂಗಿಕ ದೌರ್ಜ ನ್ಯದ ವಿವರಣೆ ನೀಡಿದ್ದರೂ, ಎಸ್‍ಐಟಿ ದೌರ್ಜನ್ಯಕೊಳಗಾದ ಯುವತಿ ವಿರುದ್ಧವೇ ಕ್ರಮ ಕೈಗೊಳ್ಳಲು ಸಂಚು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸ ಬೇಕು. ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ರಮೇಶ್ ಜಾರಕಿಹೊಳಿಯನ್ನು ಬಂಧಿ ಸದೆ, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆ ನೀಡದೆ, ಸ್ವೇಚ್ಛಾಚಾರವಾಗಿ ತಿರು ಗಾಡಲು ಬಿಟ್ಟಿದ್ದಾರೆ. ಇಂತಹ ಪ್ರಕರಣ ದಲ್ಲಿ ಜನಸಾಮಾನ್ಯರು ಸಿಲುಕಿದ್ದರೆ ಅಂತ ಹವರನ್ನು ಒಂದೇ ದಿನದಲ್ಲಿ ಬಂಧಿಸಿ ಜೈಲಿ ಗಟ್ಟುತ್ತಿದ್ದರು. ಆದರೆ ರಮೇಶ್ ಜಾರಕಿ ಹೊಳಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಒಂದು ಮೊಕ ದ್ದಮೆ ದಾಖಲಾದ ಮೇಲೆ ಎಫ್‍ಐಆರ್ ದಾಖಲಾದ ಮೇಲೆ ಬಂಧಿಸಬೇಕು. ನಮ್ಮ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಮೇಶ್ ಜಾರಕಿಹೊಳಿಯವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಪೊಲೀಸರ ನಡೆ ಕಾನೂನಿಗೆ ಮಾಡಿದ ಅಪಚಾರ. ರಮೇಶ್ ಜಾರಕಿಹೊಳಿಗೆ ನೈತಿಕತೆ ಇದ್ದಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದರು. ರಾಜ್ಯ ಪಾಲರು ಮಧ್ಯಪ್ರವೇಶಿಸಿ ಶಾಸಕ ಸ್ಥಾನ ದಿಂದ ಅವರನ್ನು ಅನರ್ಹಗೊಳಿಸಬೇಕು. ಈ ಪ್ರಕರಣ ತೀರ್ಮಾನವಾಗುವವರೆಗೂ ಅವರೆಲ್ಲೂ ಶಾಸಕ ಎಂದು ಹೇಳಿಕೊಳ್ಳಲು ಹಕ್ಕಿಲ್ಲ. ರಾಜ್ಯಪಾಲರು ಶಾಸಕ ಸ್ಥಾನ ದಿಂದಲೂ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಾಸು, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಶ್ರೀನಾಥ್ ಬಾಬು, ಉಪಾಧ್ಯಕ್ಷ ಜಿ.ರಾಘವೇಂದ್ರ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಎಡತಲೆ ಮಂಜು ನಾಥ್, ಜಿಲ್ಲಾ ಕಾಂಗ್ರೆಸ್ ವಕೀಲರ ತಂಡ ದಿಂದ ಶಿವಪ್ರಸಾದ್, ಕವಿತಾ ಕಾಳೆ, ಸುರೇಶ್ ಪಾಳ್ಯ, ಕಾಂತರಾಜ್, ತಿಮ್ಮಯ್ಯ, ಶಿವಕುಮಾರ್, ಗಂಗಾಧರ್, ಮಂಜುನಾಥ್, ಮಹೇಶ್, ಸುರೇಶ್, ಚರಣ್‍ರಾಜ್, ಕಾಂಗ್ರೆಸ್ ಮುಖಂಡ ರಾದ, ಚಂದ್ರು, ರಾಣಿ, ಬಸವಣ್ಣ, ರವಿ ಚಂದ್ರ, ಎನ್.ಆರ್.ಮೊಹಲ್ಲಾ ಮಂಜು, ಲಕ್ಷ್ಮಣ, ಮಲೆಯೂರು ಸಂತೋಷ್, ಬಸವರಾಜ್, ಡೈರಿ ವೆಂಕಟೇಶ್, ಈಶ್ವರ್ ಚಕಡಿ, ಡೊನಾಲ್ಡ್, ಎಂ.ಪಿ.ಹೇಮಂತ್, ರಾಹುಲ್, ಮಹೇಶ್ ಸಿದ್ದರಾಜು, ಜಮೀರ್, ಪುಟ್ಟಸ್ವಾಮಿ, ಜೈರಾಮ್, ಅಪ್ಪು, ಗಿಣಿ ಸ್ವಾಮಿ, ಕನಕರಾಜ, ತಿಮ್ಮರಾಜು, ಹುಚ್ಚಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡರು.

Translate »