ಮೈಸೂರಲ್ಲಿ ಉದ್ಯಮಿಗಳಿಗೆ ಅಲ್ಪಮಟ್ಟಿನ ರಿಲೀಫ್: ‘ಸೂಪರ್  ಕಮರ್ಷಿಯಲ್ ತೆರಿಗೆ’ ಈಗ ‘ಕಮರ್ಷಿಯಲ್-ಬಿ’ಆಗಿ ಮಾರ್ಪಾಡು
ಮೈಸೂರು

ಮೈಸೂರಲ್ಲಿ ಉದ್ಯಮಿಗಳಿಗೆ ಅಲ್ಪಮಟ್ಟಿನ ರಿಲೀಫ್: ‘ಸೂಪರ್ ಕಮರ್ಷಿಯಲ್ ತೆರಿಗೆ’ ಈಗ ‘ಕಮರ್ಷಿಯಲ್-ಬಿ’ಆಗಿ ಮಾರ್ಪಾಡು

March 30, 2021

ಮೈಸೂರು, ಮಾ.29(ಎಂಕೆ)- ಮೈಸೂ ರಿನ ಹೋಟೆಲ್, ಲಾಡ್ಜ್, ಚಿತ್ರಮಂದಿರ, ಕಲ್ಯಾಣಮಂಟಪ ಹಾಗೂ ಶಾಪಿಂಗ್ ಮಾಲ್‍ಗಳ ಮೇಲೆ ವಿಧಿಸುತ್ತಿದ್ದ ‘ಸೂಪರ್ ಕಮರ್ಷಿಯಲ್ ತೆರಿಗೆ’ಯನ್ನು ತೆಗೆದು ‘ಕಮ ರ್ಷಿಯಲ್-ಬಿ’ ಎಂಬುದಾಗಿ ಮಾರ್ಪಾಡು ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಕಂದಾಯ ಆಯುಕ್ತ ಡಾ.ನಾಗರಾಜ್ ತಿಳಿಸಿದರು.

ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಸಿಂಧೂರ ಕಲ್ಯಾಣ ಮಂಟಪದಲ್ಲಿ ಹೋಟೆಲ್, ಲಾಡ್ಜ್, ಚಿತ್ರಮಂದಿರ, ಕಲ್ಯಾಣಮಂಟಪ, ಶಾಪಿಂಗ್ ಮಾಲ್‍ಗಳ ಮಾಲೀಕರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ದಲ್ಲಿ ಮೈಸೂರು ಹೊರತು ಬೇರೆ ಎಲ್ಲಿಯೂ ‘ಸೂಪರ್ ಕಮರ್ಷಿಯಲ್ ತೆರಿಗೆ’ ಎಂಬು ದಿಲ್ಲ. ಇದನ್ನು ತೆಗೆದು ಹಾಕಿ ‘ಕಮರ್ಷಿ ಯಲ್ ತೆರಿಗೆ’ಯನ್ನು ಮಾತ್ರ ಕಟ್ಟಿಸಿಕೊಳ್ಳು ವಂತೆ ಹಲವು ಬಾರೀ ಮನವಿ ಮಾಡಿದ್ದರಿಂದ ‘ಕಮರ್ಷಿಯಲ್-ಬಿ’ ಎಂದು ಮಾರ್ಪಾಡು ಮಾಡಲಾಗಿದೆ. ಇದರಿಂದ ವಾರ್ಷಿಕ 70ರಿಂದ 80 ಸಾವಿರ ಉಳಿತಾಯವಾಗಲಿದೆ ಎಂದರು.

ಭೂಮಿ ಮತ್ತು ಕಟ್ಟಡದ ಮೂಲ ಮೌಲ್ಯ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಸೂಪರ್ ಕಮರ್ಷಿಯಲ್ ಎಂದು ವಾರ್ಷಿಕ ಶೇ.2. 2816ರಷ್ಟು ತೆರಿಗೆಯನ್ನು ವಿಧಿಸಲಾಗು ತ್ತಿತ್ತು. ಅದನ್ನು ಕಮರ್ಷಿಯಲ್-ಬಿ ಎಂದು ಮಾರ್ಪಾಡು ಮಾಡಿ ಶೇ.1.70ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ಇದರಿಂದ ಶೇ.0. 5816ರಷ್ಟು ತೆರಿಗೆಯನ್ನು ಕಡಿತಗೊಳಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ವಿಧಾನ ಮಂಡಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆ ಕುರಿತು ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಹಿಂದಿನ ವರ್ಷ ವಿಧಿಸಿರುವ ತೆರಿಗೆ ಗಿಂತ ಕಡಿಮೆ ತೆರಿಗೆ ವಿಧಿಸದಂತೆಯೂ ಸೂಚಿಸಲಾಗಿದೆ. ಅದರಂತೆ ಈ ವರ್ಷ ಯಾವುದೇ ರೀತಿಯಲ್ಲೂ ತೆರಿಗೆ ಹೆಚ್ಚಿಸದೆ ಸಾಧ್ಯವಾದಷ್ಟು ಕಡಿಮೆ ಮಾಡಲಾಗಿದೆ. ಮುಂದಿನ ವರ್ಷದಿಂದ ಶೇ.3ರಿಂದ 5ರಷ್ಟು ಮಾತ್ರ ತೆರಿಗೆ ಹೆಚ್ಚಳವಾಗಲಿದೆ ಎಂದರು.
ವಾಪಸ್ ಇಲ್ಲ: 2008ರಿಂದ ಸೂಪರ್ ಕಮರ್ಷಿಯಲ್ ತೆರಿಗೆ ಎಂಬುದು ಜಾರಿ ಯಲ್ಲಿತ್ತು. ಅಂದಿನಿಂದ ಇಲ್ಲಿಯವರೆಗೆ ಅದೇ ಮಾದರಿಯಲ್ಲಿ ತೆರಿಗೆ ಕಟ್ಟಿಸಿಕೊಳ್ಳಲಾಗಿದೆ. ಈಗಾಗಲೇ ಕಟ್ಟಿಸಿಕೊಂಡಿರುವ ತೆರಿಗೆ ಹಣವನ್ನು ವಾಪಸ್ ನೀಡಲು ಸಾಧ್ಯವಿಲ್ಲ. ಬದಲಿಗೆ ತೆರಿಗೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲೂ ಇಲ್ಲ: ಚಿತ್ರಮಂದಿರ ಮಾಲೀಕರ ಸಂಘದ ರಾಜಾರಾಂ ಮಾತ ನಾಡಿ, ಮೈಸೂರಿನಲ್ಲಿರುವ ಸೂಪರ್ ಕಮ ರ್ಷಿಯಲ್ ತೆರಿಗೆ ಎಂಬುದು ಬೆಂಗಳೂ ರಿನಲ್ಲಿಯೂ ಇಲ್ಲ. ಮೈಸೂರು ಬೆಂಗಳೂ ರಿಗಿಂತ ದೊಡ್ಡದೆ? ಅಲ್ಲದೆ ಮೈಸೂರಿನಲ್ಲಿ ಬೆಂಗಳೂರಿನ ಮಟ್ಟಕ್ಕೆ ವ್ಯಾಪಾರ-ವಹಿ ವಾಟು ನಡೆಯುವುದಿಲ್ಲ. ಇಷ್ಟಾದರೂ ಹೆಚ್ಚಿನ ತೆರಿಗೆಯನ್ನು ವಸೂಲಿ ಮಾಡಲಾಗಿದೆ. ಮೈಸೂರಿನಲ್ಲಿ ವ್ಯಾಪಾರಸ್ಥರೂ ಯಾವುದೇ ವಹಿವಾಟು ಮಾಡದಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ: ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಕಾರ್ಯದರ್ಶಿ ವಿನಯ್ ವೆಂಕಟೇಶ್ ಮಾತ ನಾಡಿ, ಸೂಪರ್ ಕಮರ್ಷಿಯಲ್ ಹೆಸರಿ ನಲ್ಲಿ ಕಳೆದ 13 ವರ್ಷದಿಂದ ವಸೂಲಿ ಮಾಡಿ ರುವ ತೆರಿಗೆಯನ್ನು ವಾಪಸ್ ನೀಡುವ ಕುರಿತು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬೇಕು. ಕೊರೊನಾದಿಂದಾಗಿ ಕಳೆದೊಂದು ವರ್ಷ ದಿಂದ ಶೇ.30ರಷ್ಟು ವ್ಯಾಪಾರವಿಲ್ಲ ಎಂದು ಅಳಲು ತೋಡಿಕೊಂಡರು. ನಗರಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್, ವಲಯ ಆಯುಕ್ತ ಸತ್ಯಮೂರ್ತಿ, ಸೇಫ್ ವೀಲ್ಸ್‍ನ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

Translate »