ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ

March 30, 2021

ಮೈಸೂರು, ಮಾ.29- ವಿಶ್ವ ಕಿಡ್ನಿ ದಿನದ ಅಂಗವಾಗಿ ಮೈಸೂರಿನ ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಮೂತ್ರಪಿಂಡ ಕಸಿಮಾಡಿಸಿಕೊಂಡ ನಾರಾಯಣ ಮತ್ತು ಮೂತ್ರಪಿಂಡ ದಾನಿ ಶ್ರೀಮತಿ ಲಕ್ಷ್ಮಿ, ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಈ ವೇಳೆ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಮಾಡಿಕೊಂಡ ರೋಗಿಗಳು, ಮೂತ್ರಪಿಂಡ ದಾನಿಗಳು ಮತ್ತು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಉಪ ಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೂತ್ರಪಿಂಡ ದಾನಿಗಳನ್ನು ಸನ್ಮಾನಿಸಲಾಯಿತು.

ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಮಾತನಾಡಿ, ದಾನಗಳಲ್ಲಿ ಮೂತ್ರಪಿಂಡ ದಾನವು ಮಹಾಪ್ರಧಾನ ಮತ್ತು ಅತ್ಯಂತÀ ಶ್ರೇಷ್ಠವಾದುದು ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕ ಹಾಗೂ ನೆಫ್ರೋ-ಯೂರೋ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮಾದಪ್ಪ ಮಾತನಾಡಿ, ಸಿಗ್ಮಾ ಆಸ್ಪತ್ರೆಯು ಪ್ರಾರಂಭ ವಾಗಿ 6 ವರ್ಷದ ಅವಧಿಯಲ್ಲಿ ನೆಫ್ರೋ-ಯೂರೋ ವಿಭಾಗದಲ್ಲಿ ಡಯಾಲಿಸಿಸ್À ಘಟಕವನ್ನು ಅಭಿವೃದ್ಧಿಪಡಿಸಿ ತಿಂಗಳಿಗೆ ಸುಮಾರು 500 ಡಯಾಲಿಸಿಸ್ ನಡೆಸುವ, ಎ.ಬಿ.ಓ ರಕ್ತದ ಗುಂಪಿನ ರೋಗಿಗೆ ಮೂತ್ರಪಿಂಡ ಕಸಿ ಮಾಡುವ ಮತ್ತು ಲ್ಯಾಪ್ರೋ ಸ್ಕೋಪಿಕ್ (ರಂಧ್ರ) ಶಸ್ತ್ರಚಿಕಿತ್ಸೆಯ ಮೂಲಕ ದಾನಿಗಳಿಂದ ಮೂತ್ರಪಿಂಡವನ್ನು ತೆಗೆಯುವ ಮೂಲಕ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದೆÉ ಎಂದರು. ಮೂತ್ರಪಿಂಡ ಶಾಸ್ತ್ರಜ್ಞ ಡಾ.ಅನಿಕೇತ್ ಪ್ರಭಾಕರ್, ಮೂತ್ರಪಿಂಡ ಸಮಸ್ಯೆಗಳು ಹಾಗೂ ರೋಗಯುಕ್ತ ಮೂತ್ರಪಿಂಡ ವಿದ್ದರೂ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವ ಸರಳ ವಿಧಾನಗಳನ್ನು ವಿವರಿಸಿದರು.

Translate »