ಗತಿಸಿದ ನಾಡಿನ ರಂಗಭೂಮಿ ಸಾಧಕರಿಗೆ ನುಡಿ ನಮನ
ಮೈಸೂರು

ಗತಿಸಿದ ನಾಡಿನ ರಂಗಭೂಮಿ ಸಾಧಕರಿಗೆ ನುಡಿ ನಮನ

March 30, 2021

ಮೈಸೂರು,ಮಾ.29(ಪಿಎಂ)- ಬೆಂಗ ಳೂರಿನ ರಂಗರತ್ನಾಕರ ವೃತ್ತಿರಂಗಭೂಮಿ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ 16 ರಂಗಸಾಧಕರಿಗೆ ರಂಗನಮನ, ರಂಗ ಗೀತೆಗಳ ಗಾಯನ, ರಂಗದೃಶ್ಯಗಳು ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಗಳ ಉದ್ಘಾಟನೆಯನ್ನು ಮೈಸೂರು ವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಕೆ.ಟಿ.ವೀರಪ್ಪ ನೆರವೇರಿಸಿದರು.

ಮೈಸೂರಿನ ಕಲಾಮಂದಿರ ಆವ ರಣದ ಕಿರು ರಂಗಮಂದಿರದಲ್ಲಿ, ಗತಿಸಿದ ರಂಗಭೂಮಿ ಕಲಾವಿದರ ಸ್ಮರಣೆ ಯೊಂದಿಗೆ ರಂಗಭೂಮಿಗೆ ಸಂಬಂಧಿ ಸಿದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೆ.ಟಿ.ವೀರಪ್ಪ, ಗತಿಸಿದ ರಂಗಭೂಮಿ ಕಲಾವಿದರ ಸೇವೆ ಹಾಗೂ ಅಭಿರುಚಿ ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

1940ರಿಂದ ರಂಗಭೂಮಿ ಕಲಾವಿದರ ನಡುವೆ ಇರುವ ಯೋಗ ನನಗೆ ದೊರೆ ತಿದೆ. ಹಲವು ಪಾತ್ರಗಳಲ್ಲಿ ಅಭಿನಯಿಸುವ ಅವಕಾಶವೂ ನನಗೆ ಲಭಿಸಿದೆ. ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭ ದಲ್ಲಿ ನಮ್ಮೂರಿನಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನಕ್ಕೆ ಅಂದಿನ ರಂಗಭೂಮಿಯ ದಿಗ್ಗಜ ಗುಬ್ಬಿವೀರಣ್ಣ ಅತಿಥಿಯಾಗಿ ಆಗಮಿ ಸಿದ್ದರು. ನಾಲ್ಕೂವರೆ ಗಂಟೆ ಪ್ರದರ್ಶನ ವೀಕ್ಷಿಸಿದ ಅವರು ಕಲಾವಿದರ ಅಭಿನಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ನಾಟಕ ಕಂಪನಿಯಲ್ಲಿ ಆಸಕ್ತರಿಗೆ ಅವಕಾಶ ಕಲ್ಪಿಸು ವುದಾಗಿಯೂ ತಿಳಿಸಿದ್ದರು ಎಂದರು.

16 ಮಂದಿ ರಂಗಭೂಮಿ ಕಲಾವಿದರ (ದಿವಂಗತರು) ಕುರಿತಂತೆ ಹೊರತಂದಿ ರುವ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ರಂಗ ಭೂಮಿ ಮುಖ್ಯ ಉದ್ದೇಶ ಸತ್ಯಶೋಧನೆ. ಸಮಾಜದ ಬದುಕು ಸರಿ ದಾರಿಯಲ್ಲಿ ಸಾಗಲು ಸಂದೇಶ ನೀಡುವ ಪ್ರಭಾವಿ ಮಾಧ್ಯಮ ರಂಗಭೂಮಿ. ಇಲ್ಲಿ ಮನರಂಜನೆ ಎಂಬುದು ಮುಖ್ಯವಾದರೂ ಸಂದೇಶ ಅಡಕವಾಗಿದ್ದರೆ ಮಾತ್ರವೇ ಅದರಿಂದ ಮಾನವನ ಮನೋವಿಕಾಸ ಸಾಧ್ಯವಾಗು ತ್ತದೆ. ಹೀಗಾಗಿ ನಾಟಕ ಪ್ರದರ್ಶನದಲ್ಲಿ ಮನೋಲ್ಲಾಸದೊಂದಿಗೆ ಮನೋವಿಕಾಸದ ಅಂಶವೂ ಇರಬೇಕು ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ರಂಗರತ್ನಾ ಕರ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಸ್. ಗೋವಿಂದಗೌಡ, ಪೌರಾಣಿಕ ನಾಟಕ ಪ್ರದರ್ಶನದ ವೃತ್ತಿರಂಗಭೂಮಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗರತ್ನಾಕರ ಸ್ಥಾಪಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಪೌರಾಣಿಕ ನಾಟಕದ ರಂಗ ಸಂಗೀತ ಹಾಗೂ ರಂಗ ಸಾಹಿತ್ಯ ಉಳಿಸುವ ಉದ್ದೇಶದೊಂದಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾ ಗಿದೆ. ನೂರಾರು ಪೌರಾಣಿಕ ನಾಟಕಗಳ ಪ್ರದರ್ಶನದೊಂದಿಗೆ ಸಾವಿರಕ್ಕೂ ಹೆಚ್ಚು ರಂಗಗೀತೆಗಳನ್ನು ಸಾದರಪಡಿಸಲಾಗಿದೆ ಎಂದರು. ಗತಿಸಿದ 16 ರಂಗಭೂಮಿ ಕಲಾ ವಿದರಿಗೆ ಇದೇ ವೇಳೆ ನುಡಿನಮನ ಸಲ್ಲಿಸ ಲಾಯಿತು. ಚಿತ್ರನಟ ಡಿಂಗ್ರಿ ನಾಗರಾಜ್ ಅವರ ಸಹೋದರಿ ರಂಗನಾಯಕಮ್ಮ, ಮೈಸೂರಿನ ಬಾಪುರಾವ್ ಗೋವಿಂದ ರಾಜ್ (ಬಿ.ಜಿ.ರಾವ್), ಕೋಲಾರ ಮೂಲದ ಕಲಾರತ್ನ ಕೆ.ಎನ್. ಬಸವರಾಜು, ಮೈಸೂ ರಿನ `ಕಲಾಪ್ರಿಯ’ ಹವ್ಯಾಸಿ ರಂಗತಂಡದ ಸಂಸ್ಥಾಪಕ ಶ್ರೀಕಂಠ ಗುಂಡಪ್ಪ, ಗುಂಡ್ಲು ಪೇಟೆ ತಾಲೂಕಿನ ದೇವರಹಳ್ಳಿ ಮೂಲದ ಡಿ.ವಿ.ಚನ್ನಬಸಪ್ಪ, ಮೈಸೂರಿನ ಎಸ್.ಎಸ್. ಗಾಯಿತ್ರಿ, ಸಿಂಗಾನಲ್ಲೂರು ಮೂಲದ ಜಿ.ಆರ್. ರಾಮಚಂದ್ರ, ಕೊಳ್ಳೇಗಾಲ ತಾಲೂಕಿನ ಸಾಗರೆ ವೆಂಕಟಪ್ಪ, ರಂಗನಟ ಡಿಕ್ಕಿಮಾಧ ರಾವ್ ಅವರ ಸಹೋದರನ ಪುತ್ರ ಎಂ.ನಾಗ ರಾಜ್ (ಡಿಕ್ಕಿ), ಮಂಡ್ಯ ಜಿಲ್ಲೆಯ ಬಿ.ಜಿ.ವಾಸು ದೇವನ್, ಚಾಮರಾಜನಗರ ಜಿಲ್ಲೆಯ ತಬಲ ಮಹದೇವಣ್ಣ, ತಬಲ ರಾಮಕೃಷ್ಣ, ಮೈಸೂ ರಿನ ರಂಗವಾಣಿ ಮಹದೇವನ್, ಮೈಸೂ ರಿನ ರಂಗ ಪ್ರಗತಿ ಮಹದೇವ್, ದೊಡ್ಡ ಬಳ್ಳಾಪುರದ ರಾಧಾಮೂರ್ತಿ, ಮೋಹನ್ ದಾಸ್ ಅವರಿಗೆ ನುಡಿ ನಮನ ಸಲ್ಲಿಸ ಲಾಯಿತು. ಮೈಸೂರು ನಗರ ಮತ್ತು ಜಿಲ್ಲಾ ಕಲಾವಿದರ ಕೇಂದ್ರ ಸಮಿತಿ ಅಧ್ಯಕ್ಷ ಮೈ.ಮ. ನಾಗರಾಜ್, ರಂಗಪ್ರಭ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಹೆಚ್.ವಿ.ಗಣೇಶ್, ರಂಗಭೂಮಿಯ ಹಿರಿಯ ನಟಿ ಸರೋಜಮ್ಮ, ರಂಗರತ್ನಾ ಕರದ ಅಧ್ಯಕ್ಷ ಕಿರಗಸೂರು ರಾಜಪ್ಪ ಮತ್ತಿತರರು ಹಾಜರಿದ್ದರು.

Translate »