ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಅಭಿಯಾನ
ಮೈಸೂರು

ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಅಭಿಯಾನ

March 30, 2021

ಮೈಸೂರು, ಮಾ.29(ಎಂಟಿವೈ)- ಬೇಸಿಗೆ ಯಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಜನತೆ, ಜಾನುವಾರು ಮತ್ತು ಪಕ್ಷಿಗಳಿಗೆ ಆಹಾರ ಹಾಗೂ ಕುಡಿ ಯುವ ನೀರು ಪೂರೈಸಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರಿನ ರಮಾವಿಲಾಸ ರಸ್ತೆಯ ಮರ ಗಳಲ್ಲಿ ತೂಗು ಹಾಕಿದ ಡಬ್ಬಿಗಳಲ್ಲಿ ಪಕ್ಷಿ ಗಳಿಗೆ ಆಹಾರ, ನೀರು ಒದಗಿಸಲು ಮೈಸೂರು ಯುವ ಬಳಗ ಹಾಗೂ ದೇವರಾಜ ಯುವ ಬ್ರಿಗೇಡ್ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿದ ಮಹದೇವಸ್ವಾಮಿ, ಬದಲಾದ ಕಾಲಘಟ್ಟದಲ್ಲಿ ಜಗದ ನಿಯ ಮಕ್ಕೆ ಅನುಗುಣವಾಗಿ ಹೊಂದಿಕೊಂಡು ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ. ಇದರಿಂದಾಗಿ ಎಲ್ಲರೂ ಪ್ರಾಣಿ-ಪಕ್ಷಿಗಳ ಹಿತ ಕಾಯು ವುದರೊಂದಿಗೆ ಪರಿಸರ ಸಂರಕ್ಷಿಸುವ ಸೇವಾ ಮನೋಭಾವವನ್ನೂ ಬೆಳಸಿ ಕೊಳ್ಳಬೇಕು. ಪರಿಸರದ ಸಮತೋಲನಕ್ಕೆ ಮರಗಳ ಹನನ ತಡೆಗಟ್ಟಿ, ಹೆಚ್ಚು ಗಿಡ ನೆಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ನಮ್ಮ ಸುತ್ತ್ತಲಿನ ಪ್ರದೇಶದಲ್ಲಿ ಗಿಡ-ಮರ ಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನುಷ್ಯರಿಗೆ ಮಾತ್ರವಲ್ಲದೆ ಪಕ್ಷಿ ಸಂಕುಲಕ್ಕೂ, ಜಾನುವಾರುಗಳಿಗೂ ನೆರಳು, ತಂಪು ಹವೆ, ಆಮ್ಲಜನಕ ಸಿಗುತ್ತದೆ. ಪಕ್ಷಿ ಸಂತತಿ ಸಂರಕ್ಷ ಣೆಗೆ ಹೆಚ್ಚು ಮರಗಳಿದ್ದರೆ ಸಹಕಾರಿ ಎಂದರು.
ಬೇಸಿಗೆಯಲ್ಲಿ ಪಕ್ಷಿಗಳು, ಜಾನುವಾರು ಗಳಿಗೆ ನಗರದಲ್ಲಿ ಕುಡಿಯಲು ನೀರು ಸುಲಭ ಲಭ್ಯವಿಲ್ಲ. ಹಾಗಾಗಿ, ಪ್ರತಿಯೊ ಬ್ಬರೂ ತಮ್ಮ ಮನೆಯ ಛಾವಣಿ ಮೇಲೆ, ಮನೆಯ ಅಂಗಳದಲ್ಲಿ ಜಾನುವಾರು, ಪಕ್ಷಿ ಗಳಿಗೆ ನೀರೊದಗಿಸಲು ವ್ಯವಸ್ಥೆ ಮಾಡಬೇಕು. ಇದರಿಂದ ದಾಹ ನೀಗಿಸುವ ಪುಣ್ಯದ ಕೆಲಸ ಮಾಡಿದ ತೃಪ್ತಿ ನಿಮ್ಮದಾಗಲಿದೆ ಎಂದು ಗಮನ ಸೆಳೆದರÀು.

ಮುಡಾ ಸದಸ್ಯ ಎಂ.ಎನ್.ನವೀನ್ ಕುಮಾರ್ ಮಾತನಾಡಿ, ನಗರ ಪ್ರದೇಶ ಗಳಲ್ಲಿ ಮರಗಳ ಹನನ ಹೆಚ್ಚಾಗುತ್ತಿದೆ. ಇದ ರಿಂದ ವಾತಾವರಣದಲ್ಲಿ ಏರುಪೇರಾಗು ತ್ತಿದೆ. ಇದನ್ನು ಮನಗಂಡು ರಮಾವಿಲಾಸ ರಸ್ತೆಯ ಮರಗಳಿಗೆ ಪ್ಲಾಸ್ಟಿಕ್ ಬಟ್ಟಲನ್ನು ನೇತು ಹಾಕಿ ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ, ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆ ವಿದಾನ ಮತ್ತು ಪಕ್ಷಿ, ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮರಿಮಲ್ಲಪ್ಪ ಪಿಯು ಕಾಲೇಜು ಪ್ರಾಂಶು ಪಾಲ ನೀಲಕಂಠ, ರೇಣುಕಾರಾಜ್, ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಪರಮೇಶ್ ಗೌಡ, ಬಿಜೆಪಿ ಯುವ ಮೋರ್ಚಾ ನರಸಿಂಹರಾಜ ಕ್ಷೇತ್ರ ಅಧ್ಯಕ್ಷ ಲೋಹಿತ್, ನವೀನ್, ಸುಚೇಂದ್ರ, ಚಕ್ರಪಾಣಿ, ಆನಂದ್ ನಾಯಕ್, ಮಂಜು ನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Translate »