ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಓ ಸಹಿ ಸಂಗ್ರಹ ಅಭಿಯಾನ
ಮೈಸೂರು

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಓ ಸಹಿ ಸಂಗ್ರಹ ಅಭಿಯಾನ

March 30, 2021

ಮೈಸೂರು,ಮಾ.29(ಪಿಎಂ)- ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡ ಬೇಕು. ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತ ವಾಗಿ ಪೂರ್ಣಗೊಳಿಸಬೇಕು ಹಾಗೂ ಉದ್ಯೋಗವನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾ ಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಎಐಡಿವೈಓ ದೇಶದಾದ್ಯಂತ ನಿರು ದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿ ಯಾನ ಹಮ್ಮಿಕೊಂಡಿದ್ದು, ಅದರ ಭಾಗ ವಾಗಿ ಚಿಕ್ಕಗಡಿಯಾರ ವೃತ್ತದಲ್ಲಿ ಸಂಘ ಟನೆ ಕಾರ್ಯಕರ್ತರು ಇಂದು ಸಾರ್ವ ಜನಿಕರಿಂದ ಸಹಿ ಸಂಗ್ರಹಿಸಿದರು.

ಕಳೆದೆರಡು ವರ್ಷಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಲಕ್ಷಾಂ ತರ ಸಣ್ಣಪುಟ್ಟ ಕೈಗಾರಿಕೆಗಳು ದೇಶಾ ದ್ಯಂತ ಮುಚ್ಚಿವೆ. ಕೊರೊನಾ ಹಿನ್ನೆಲೆ ಯಲ್ಲಿ ಕೋಟ್ಯಾಂತರ ವಲಸೆ ಕಾರ್ಮಿ ಕರು ಕೆಲಸ ಕಳೆದುಕೊಂಡು ತಮ್ಮ ಸ್ವಸ್ಥಳಕ್ಕೆ ಮರಳಿದರು. ಅಂದಾಜು 11 ಕೋಟಿ ಮಂದಿ ಉದ್ಯೋಗ ಕಳೆದು ಕೊಂಡರು. ಅವರಲ್ಲಿ ಅತಿ ಹೆಚ್ಚು ಯುವ ಜನರು ಎಂದು ಸಂಘಟನೆ ಕಾರ್ಯ ಕರ್ತರು ಆತಂಕ ವ್ಯಕ್ತಪಡಿಸಿದರು.

ಮತ್ತೊಂದೆಡೆ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಶಿಕ್ಷಣ, ಆರೋಗ್ಯ, ಸಾರಿಗೆ, ವಸತಿ ಮೊದಲಾದ ಮೂಲ ಭೂತ ಸೇವೆ ವಲಯಗಳಲ್ಲೇ ಅವಶ್ಯಕ ಸಂಖ್ಯೆ ಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಯಂ ಸ್ವರೂಪದ ಹುದ್ದೆಗಳಿರುವಲ್ಲಿಯೂ ದಿನ ಗೂಲಿ, ಗುತ್ತಿಗೆ ಹಾಗೂ ಅತಿಥಿ ಮಾದರಿ ನೇಮಕಾತಿ ನಡೆಸಿ, ಉದ್ಯೋಗಾಕಾಂಕ್ಷಿ ಗಳನ್ನು ನಿರಂತರ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

`ಅಚ್ಛೆ ದಿನ್’ ಎಂದು ಆಸೆ ತೋರಿಸಿದ ಕೇಂದ್ರ ಬಿಜೆಪಿ ಸರ್ಕಾರ, ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ 2014ರಲ್ಲಿ ಅಧಿಕಾರಕ್ಕೆ ಬಂದಿತು. ಆದರೆ 6 ವರ್ಷಗಳು ಕಳೆದರೂ ಇದೂ ಸೇರಿದಂತೆ ದೇಶದ ಜನತೆಯ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕೇವಲ ಕಾರ್ಪೊರೇಟ್ ವಲಯದ ಸೇವೆ ಮಾಡುತ್ತಾ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿ ಒಡೆ ತನಕ್ಕೆ ಮಾರಾಟ ಮಾಡಲು ಈ ಸರ್ಕಾರ ಉತ್ಸುಕತೆ ತೊರುತ್ತಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರುದ್ಧ ಯುವಜನತೆ ಹೋರಾಟ ಮಾಡಬಾರದೆಂದು ಅವರನ್ನು ಜಾತಿ, ಮತ, ಧರ್ಮ ಹಾಗೂ ಭಾಷೆ ಹೆಸರಿ ನಲ್ಲಿ ಒಡೆಯುತ್ತಿದೆ ಎಂದು ಆರೋಪಿಸಿದರು.

ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಸುನಿಲ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಇಂದು ಸುಮಾರು 3 ತಾಸುಗಳಲ್ಲಿ 400ಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಜೊತೆಗೆ ಅವರ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ಪಡೆಯಲಾಗಿದೆ. ಈ ಸಹಿ ಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು. ಎಐಡಿವೈಓ ರಾಜ್ಯಾಧ್ಯಕ್ಷೆ ಉಮಾದೇವಿ, ಜಿಲ್ಲಾಧ್ಯಕ್ಷ ಹರೀಶ್, ಕಾರ್ಯ ಕರ್ತರಾದ ನೀತು, ಅನಿಲ್, ಸಂತೋಷ, ರಾಕೇಶ್, ಪಲ್ಲವಿ, ಸಿಂಚನಾ, ವೆಂಕಟೇಶ್, ರವಿ, ಸೂರ್ಯ ಪಾಲ್ಗೊಂಡಿದ್ದರು.

Translate »