ಹುಲಿ, ಚಿರತೆ ಬೇಟೆ: ನಾಲ್ವರ ಬಂಧನ
ಮೈಸೂರು

ಹುಲಿ, ಚಿರತೆ ಬೇಟೆ: ನಾಲ್ವರ ಬಂಧನ

March 31, 2021

ಮೈಸೂರು,ಮಾ.30(ಎಂಟಿವೈ)- ಉರುಳು, ಜಾ.-ಟ್ರ್ಯಾಪ್ ಬಳಸಿ ಹುಲಿ ಹಾಗೂ ಚಿರತೆಯನ್ನು ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ನೆಲ್ಲೂರು ಪಾಳ್ಯ, ಅಂಬೇಡ್ಕರ್‍ನಗರದ ನಿವಾಸಿ ಗಳಾದ ಅರುಣಾ, ನಂಜುಂಡ, ರವಿ ಹಾಗೂ ಕುಟ್ಟೇರಿ ಹಾಡಿಯ ರಮೇಶ್ ಬಂಧಿತ ಆರೋಪಿಗಳು. ಇವರಿಂದ ಹುಲಿ, ಚಿರತೆ ಚರ್ಮ, ಬೇಟೆಗೆ ಬಳಸುತ್ತಿದ್ದ ಉರುಳು, ಜಾ-ಟ್ರ್ಯಾಪ್ ಹಾಗೂ ಗೂಡ್ಸ್ ಟೆಂಪೋ ವಶಪಡಿಸಿಕೊಳ್ಳಲಾಗಿದೆ. ಈ ಖದೀಮರು ವನ್ಯಜೀವಿಗಳನ್ನು ಬೇಟೆಯಾಡುವುದರಲ್ಲಿ ನಿಪುಣರಾಗಿದ್ದರು ಎಂದು ತಿಳಿದು ಬಂದಿದೆ.

ಹುಲಿಗೆ ಉರುಳು: ಹುಣಸೂರು ತಾಲೂ ಕಿನ ವೀರನಹೊಸಹಳ್ಳಿ ವಲಯ ವ್ಯಾಪ್ತಿ ಯಲ್ಲಿ 6 ತಿಂಗಳ ಹಿಂದೆ ಆನೆ ಕಂದಕದ ಬಳಿ ಆರೋಪಿ ರಮೇಶ ಬೇಟೆಗಾಗಿ ಉರುಳು ಹಾಕಿದ್ದ. ಮರುದಿನವೇ ಭಾರೀ ಗಾತ್ರದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನ ಪ್ಪಿತ್ತು. ಇದನ್ನು ಕಂಡ ರಮೇಶ, ಪರಿಚಿತ ರವಿಗೆ ವಿಷಯ ತಿಳಿಸಿ, ಸಹಾಯ ಕೇಳಿದ್ದ. ರವಿ, ಸಾವನ್ನಪ್ಪಿದ್ದ ಹುಲಿಯನ್ನು ತನ್ನ ಮಹೇಂದ್ರ ಜೀಟೊ ವಾಹನದಲ್ಲಿ ಹಾಕಿ ಕೊಂಡು ಅಂಬೇಡ್ಕರ್‍ನಗರಕ್ಕೆ ಕೊಂಡೊ ಯ್ದಿದ್ದ. ಅಲ್ಲಿ 3ನೇ ಆರೋಪಿ ನಂಜುಂಡ ಹುಲಿಯ ಚರ್ಮ ಸುಲಿದಿದ್ದ. 4ನೇ ಆರೋಪಿ ಅರುಣನ ಮನೆಯಲ್ಲಿ ಹುಲಿ ಚರ್ಮ ವನ್ನು ಬಚ್ಚಿಟ್ಟು, ಅದೇ ವಾಹನದಲ್ಲಿ ಹುಲಿಯ ಕಳೇಬರವನ್ನು ಸಾಗಿಸಿ ಲಕ್ಷ್ಮಣತೀರ್ಥ ನದಿಗೆ ಎಸೆದಿದ್ದರು. ಲಾಕ್‍ಡೌನ್ ಸಂದರ್ಭ ದಲ್ಲಿ ಜನಸಂಚಾರ ಕಡಿಮೆಯಿತ್ತು. ಅಲ್ಲದೆ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿಲ್ಲ. ಹಾಗಾಗಿ ನಿರಾತಂಕವಾಗಿ ಕೃತ್ಯ ಮೆರೆದಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ತಿಂದ ಕಿರಾತಕರು: ಈ ನಾಲ್ವರು ಆರೋಪಿಗಳು ವರ್ಷದ ಹಿಂದೆ ಹುಣ ಸೂರು ತಾಲೂಕಿನ ಟಿಬೆಟ್ ಕಾಲೋನಿ ಬಳಿಯ ಹುಣಸೇಕಟ್ಟೆಯಲ್ಲಿ ಜಾ ಟ್ರ್ಯಾಪ್ ಇಟ್ಟು ಚಿರತೆಯೊಂದನ್ನು ಕೊಂದಿದ್ದರು. ಚಿರತೆ ದೇಹವನ್ನು ಮನೆಗೆ ತಂದು, ಚರ್ಮ ಸುಲಿದು, ನಾಲ್ವರೂ ಹಂಚಿಕೊಂಡು ತಿಂದು ತೇಗಿದ್ದರು ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಬಯಲಾಗಿದೆ.

ಮನೆಯಲ್ಲಿ ಚರ್ಮ: ಅರುಣನ ಮನೆ ಯಲ್ಲಿ ಹುಲಿ ಮತ್ತು ಚಿರತೆ ಚರ್ಮ ಇರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಕಾರ್ಯಾಚರಣೆಗಿಳಿ ದರು. ಅರುಣನ ಮನೆಯಲ್ಲಿರುವುದು ನೈಜ ಚರ್ಮವೇ ಎಂಬುದನ್ನು ದೃಢಪಡಿಸಿ ಕೊಳ್ಳುವ ಸಲುವಾಗಿ ಗ್ರಾಹಕರ ಸೋಗಿ ನಲ್ಲಿ ಅವುಗಳನ್ನು ಕೊಳ್ಳುವ ನೆಪದಲ್ಲಿ ಹೋಗಿ ದ್ದರು. ಅವು ನಿಜವಾದ ಚರ್ಮ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ವಿವೇಕ್, ಡಿಆರ್‍ಎಫ್‍ಓಗಳಾದ ಲಕ್ಷ್ಮೀಶ, ನಾಗ ರಾಜ್, ಪ್ರಮೋದ್, ಸುಂದರ್, ವಿನೋದ್, ಸ್ನೇಹ, ಮೇಘನಾ, ಅರಣ್ಯ ರಕ್ಷಕರಾದ ಚನ್ನ ಬಸಪ್ಪ, ವಿರೂಪಾಕ್ಷ, ಶರಣಪ್ಪ, ಗೋವಿಂದ, ಕೊಟ್ರೇಶ್, ರವಿಕುಮಾರ್, ಚಾಲಕ ಮಧು ಮತ್ತು ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

Translate »