ಮನೆ, ಅಂಗಡಿ-ಮುಂಗಟ್ಟು ಗೋಡೆಗೆ ಕ್ಯೂಆರ್ ಕೋಡ್ ಸ್ಟಿಕ್ಕರ್
ಮೈಸೂರು

ಮನೆ, ಅಂಗಡಿ-ಮುಂಗಟ್ಟು ಗೋಡೆಗೆ ಕ್ಯೂಆರ್ ಕೋಡ್ ಸ್ಟಿಕ್ಕರ್

March 30, 2021

ಮೈಸೂರು,ಮಾ.29(ಪಿಎಂ)-ಸ್ವಚ್ಛ ಸರ್ವೇ ಕ್ಷಣೆ 2021ರಲ್ಲಿ ಟಾಪ್ 3ರಲ್ಲಿ ಒಂದು ಸ್ಥಾನ ಪಡೆಯಲೇಬೇಕೆಂಬ ಮಹತ್ವಾಕಾಂಕ್ಷೆ ಯೊಂದಿಗೆ ಕಾರ್ಯಪ್ರವೃತ್ತವಾಗಿರುವ ಮೈಸೂರು ಮಹಾನಗರ ಪಾಲಿಕೆ, ಇದಕ್ಕಾಗಿ ನಾಗರಿಕರ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲು ವಿಶಿಷ್ಟ ಕಾರ್ಯಕ್ರಮ ಕೈಗೆತ್ತಿಕೊಂಡಿದೆ.

ಮೈಸೂರು ನಗರ ವ್ಯಾಪ್ತಿಯ ಮನೆಗಳ ಹಾಗೂ ಅಂಗಡಿ-ಮುಂಗಟ್ಟುಗಳ ಗೋಡೆಗೆ `ಸಿಟಿಜ್ಹನ್ ಫೀಡ್‍ಬ್ಯಾಕ್’ ಲಿಂಕ್ ತೆರೆದು ಕೊಳ್ಳುವ ಕ್ಯೂಆರ್ ಕೋಡ್ ಇರುವ ಸ್ಟಿಕ್ಕರ್‍ಗಳನ್ನು ಅಂಟಿಸುವ ಕೊನೆ ಪ್ರಯ ತ್ನಕ್ಕೆ ಪಾಲಿಕೆ ಕೈ ಹಾಕಿದೆ. ನಾಗರಿಕರ ಪ್ರತಿ ಕ್ರಿಯೆ ನೀಡಲು ಮಾ.31 ಕೊನೆ ದಿನ. ಈ ಹಿನ್ನೆಲೆಯಲ್ಲಿ ಇಂತಹ ವಿನೂತನ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ. ನಾಗರಿಕರು ತಮ್ಮ ಮೊಬೈಲ್‍ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪ್ರತಿಕ್ರಿಯೆ ನೀಡುವ ಲಿಂಕ್ ಪಡೆಯಬಹುದು.

ಕಳೆದ 1 ತಿಂಗಳ ಹಿಂದೆಯೇ ಈ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಪಾಲಿಕೆ, ಕೇವಲ ಇನ್ನು 2 ದಿನ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಚುರುಕಾಗಿ ಈ ಕಾರ್ಯದಲ್ಲಿ ನಿರತವಾಗಿದೆ. ಈವರೆಗೆ 3.60 ಲಕ್ಷ ನಾಗರಿಕರ ಪ್ರತಿಕ್ರಿಯೆ ಮೈಸೂರು ಮಹಾ ನಗರ ಪಾಲಿಕೆ ಸಂಬಂಧ ಸ್ವಚ್ಛ ಸರ್ವೇಕ್ಷಣೆ ವೆಬ್‍ಸೈಟ್‍ನಲ್ಲಿ ದಾಖಲಾಗಿದೆ. 5 ಲಕ್ಷ ನಾಗರಿಕರ ಪ್ರತಿಕ್ರಿಯೆ ಪಡೆಯುವ ಗುರಿ ಯೊಂದಿಗೆ ಈ ಕಾರ್ಯಕ್ರಮ ರೂಪಿಸ ಲಾಗಿದೆ. ಈ ಪೈಕಿ ಬಹುತೇಕ ನಾಗರಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ವಿಶ್ವಾಸ ದೊಂದಿಗೆ ಪಾಲಿಕೆ ಕಾರ್ಯನಿರತವಾಗಿದೆ.

2011ರ ಜನಗಣತಿಯಂತೆ ಮೈಸೂರು ನಗರದಲ್ಲಿ 8,93,062 ಜನಸಂಖ್ಯೆ ಇದ್ದು, ಪ್ರಸ್ತುತ 12 ಲಕ್ಷ ಸಂಖ್ಯೆಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 5 ಲಕ್ಷ ಜನರ ಪ್ರತಿಕ್ರಿಯೆ ಗುರಿ ಬೆನ್ನತ್ತಿರುವ ಪಾಲಿಕೆ, ಕ್ಯೂಆರ್ ಕೋಡ್ ಹೊಂದಿರುವ 2 ಲಕ್ಷ ಸ್ಟಿಕ್ಕರ್ ಮುದ್ರಿಸಿ, ಈ ಪೈಕಿ ಈಗಾ ಗಲೇ ಬಹುತೇಕ ಸ್ಟಿಕ್ಕರ್‍ಗಳನ್ನು ನಾಗರಿ ಕರ ಮನೆ, ಮಳಿಗೆಗೆ ತಲುಪಿಸಿದೆ.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗ ರಾಜ್ ಅವರ ಪ್ರಕಾರ ನಾಗರಿಕರು ಪ್ರತಿ ಕ್ರಿಯೆ ದಾಖಲಿಸಲು ಈ ವಿನೂತನ ಕಾರ್ಯ ನೆರವಾಗಲಿದೆ. 2.11 ಲಕ್ಷಕ್ಕೂ ಅಧಿಕ ಮನೆ ಗಳು ಮೈಸೂರು ನಗರದಲ್ಲಿದ್ದು, ಎಲ್ಲಾ 65 ವಾರ್ಡ್‍ಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಮಾತ್ರವಲ್ಲದೆ, ಅಂಗಡಿ-ಮುಂಗಟ್ಟುಗಳ ಗೋಡೆ ಮೇಲೆ ಈ ಸ್ಟಿಕ್ಕರ್ ಅಂಟಿಸಲು ಪಾಲಿಕೆಯ ಕಂದಾಯ ಮತ್ತು ಆರೋಗ್ಯ ನಿರೀಕ್ಷಕರು ಸೇರಿದಂತೆ ಸಿಬ್ಬಂದಿಗೆ ಜವಾ ಬ್ದಾರಿ ನೀಡಲಾಗಿದೆ.

ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಡಾ.ಡಿ.ಜಿ.ನಾಗ ರಾಜ್, ಈವರೆಗೆ 3.60 ಲಕ್ಷ ಮಂದಿ ಸ್ವಚ್ಛ ಸರ್ವೇಕ್ಷಣೆ ಸಂಬಂಧ ಪ್ರತಿಕ್ರಿಯೆ ನೀಡಿ ದ್ದಾರೆ. ಎಷ್ಟು ಪ್ರತಿಕ್ರಿಯೆ ದಾಖಲಾಗಿದೆ ಎಂಬ ಮಾಹಿತಿ ಮಾತ್ರವೇ ಪಾಲಿಕೆಗೆ ಲಭ್ಯವಾಗ ಲಿದೆ. ಅವುಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಪಾಲಿಕೆಗೆ ಮಾಹಿತಿ ದೊರೆಯುವುದಿಲ್ಲ. ಪ್ರತಿಕ್ರಿಯೆ ನೀಡುವ ಕುರಿತಂತೆ ಪ್ರಶ್ನೆಗಳಿರುವ ಮಾದರಿ ಕರಪತ್ರಗಳನ್ನು ಪೌರಕಾರ್ಮಿಕರ ಮೂಲಕ ಮನೆ ಮನೆಗೆ ಹಂಚಲಾಗಿದೆ. ಈ ಕರಪತ್ರದಲ್ಲೂ ಕ್ಯೂಆರ್ ಸ್ಕ್ಯಾನ್ ಕೋಡ್ ಇದೆ ಎಂದು ವಿವರಿಸಿದರು.
ಮಂಗಳವಾರ ಮತ್ತು ಬುಧವಾರ ಎರಡೇ ದಿನ ಪ್ರತಿಕ್ರಿಯೆ ನೀಡಲು ಕಾಲಾ ವಕಾಶವಿದ್ದು, ನಾಳೆ ಪೌರಕಾರ್ಮಿಕರ ಮೂಲಕ ಮನೆ ಮನೆಯಲ್ಲಿ ಪ್ರತಿಕ್ರಿಯೆ ಕುರಿತು ಜಾಗೃತಿ ಮೂಡಿಸಲಾಗುವುದು. ಸ್ವಚ್ಛ ಸರ್ವೇಕ್ಷಣೆ ಪ್ರಾರಂಭ ಆದಾಗಿನಿಂದಲೂ ಮೈಸೂರು ಟಾಪ್ 10 ಪಟ್ಟಿಯಲ್ಲಿದೆ. ಸರ್ವೇಕ್ಷಣೆ ಆರಂಭವಾದ ಮೊದಲ ವರ್ಷ ಹಾಗೂ ಎರಡನೇ ವರ್ಷ ನಿರಂತರವಾಗಿ ದೇಶದ ಸ್ವಚ್ಛ ನಗರ ಸ್ಥಾನವನ್ನು ಮೈಸೂರು ಮುಡಿಗೇರಿಸಿಕೊಂಡಿದೆ ಎಂದರು.

Translate »