ವಚನ ಸಾಹಿತ್ಯದಿಂದ ಜೀವನ ವಿಶ್ವಾಸ
ಮೈಸೂರು

ವಚನ ಸಾಹಿತ್ಯದಿಂದ ಜೀವನ ವಿಶ್ವಾಸ

March 30, 2021

ಮೈಸೂರು, ಮಾ.29(ಆರ್‍ಕೆಬಿ)- ಇಂದಿನ ಸಾಮಾ ಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಬದಲಾವಣೆ ಹಾಗೂ ಬದುಕನ್ನು ಧೈರ್ಯವಾಗಿ ಎದುರಿಸಲು ಶರಣ ಸಾಹಿತ್ಯ ಮತ್ತು ಸಂಸ್ಕøತಿ ಸಹಾಯಕವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸಿ.ಜಿ.ಉಷಾದೇವಿ ತಿಳಿಸಿದರು.

ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಪ್ರಶಿಕ್ಷಣ ಪ್ರಾಥಮಿಕ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ ಆಯೋಜಿಸಿದ್ದ ಹರದನ ಹಳ್ಳಿ ಕಂಬಿ ಮಲ್ಲಪ್ಪ ದತ್ತಿ, ಮುದ್ದುಮಾದಪ್ಪ ದತ್ತಿ ಆಯ್ದ ವಚನಗಳ ವಾಚನ, ಗಾಯನ, ವ್ಯಾಖ್ಯಾನ ಮತ್ತು ಚಿತ್ರಪ್ರದ ರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಇಂದು ಎಲ್ಲರೂ ಮೊಬೈಲ್‍ನಲ್ಲಿ ಮಗ್ನರಾಗುತ್ತಿರುವುದ ರಿಂದ ಮಾನವ ಸಂಬಂಧಗಳ ಕೊರತೆಯಾಗಿದೆ. ಯುವ ಜನತೆ ಮೊಬೈಲ್ ಆಕರ್ಷಣೆಯಿಂದ ಹೊರ ಬಂದು ವಚನಗಳತ್ತ ಹೆಚ್ಚಾಗಿ ಆಕರ್ಷಿತರಾಗಬೇಕು. ನಮಗೆ ಕೈದೀವಿಗೆಯಂತಿರುವ ವಚನ ಸಾಹಿತ್ಯ ಜೀವನ ವಿಶ್ವಾಸ ತುಂಬುತ್ತದೆ. ಅಜ್ಞಾನವನ್ನು ಹೋಗಲಾಡಿಸುತ್ತದೆ. ಶ್ರಮಿ ಸುವ, ದುಡಿಯುವ ಮತ್ತು ಕಾಯಕದ ಭಾವನೆ ಮೂಡಿಸುತ್ತದೆ ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಹೆಣ್ಣು ಮಕ್ಕಳು ಬಂದು ಕುಳಿತು ಎಚ್ಚರಗೊಂಡು ಅವರು ಮಾತನಾಡಲು ಶಕ್ತಿ ಪಡೆದುಕೊಂಡರು. ಅದರ ಫಲವಾಗಿ ವಚನಗಳು ಮೂಡಿದವು. 35ಕ್ಕೂ ಅಧಿಕ ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಅವರ ವಚನಗಳಿಂದ ಸರಿಯಾದ, ಮೌಲ್ಯಯುತವಾದ ಮಾತನಾಡುವ ಶಕ್ತಿ ಪಡೆಯಲು ಸಾಧ್ಯವಿದೆ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಜಿ.ಎಸ್. ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಮಂಗಳಾ ಮುದ್ದುಮಾದಪ್ಪ, ಚಿತ್ರ ಕಲಾವಿದ ಎಲ್.ಶಿವಲಿಂಗಪ್ಪ, ಜೆಎಎಸ್‍ಎಸ್ ಮಹಿಳಾ ಪಿಯು ಕಾಲೇಜು ಪ್ರಾಂಶುಪಾಲ ರಾದ ಎಂ.ಪಿ.ರಾಜೇಶ್ವರಿ, ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನಿ.ಗಿರಿಗೌಡ, ಶರಣ ಸಾಹಿತ್ಯ ಪರಿಷತ್ತಿನ ಎನ್.ಆರ್.ಕ್ಷೇತ್ರ ಅಧ್ಯಕ್ಷ ಎಂ.ಷಡಕ್ಷರಿ, ಸಂಚಾಲಕ ಕೆ.ಎಸ್.ಉಮಾಪತಿ, ಶಾರದಾ, ಸುಧಾ ಮೃತ್ಯುಂಜಯಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »