ಬೇಸಿಗೆ ಹಂಗಾಮು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ
ಮೈಸೂರು

ಬೇಸಿಗೆ ಹಂಗಾಮು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ

March 30, 2021

ಮೈಸೂರು, ಮಾ.29-ಕೃಷಿ ಇಲಾಖೆಯ ವತಿಯಿಂದ 2020-21ನೇ ಸಾಲಿನ ಬೆಳೆ ಸಮೀಕ್ಷೆ ಉತ್ಸವದ ಭಾಗವಾಗಿ ಬೇಸಿಗೆ ಹಂಗಾಮು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಅನ್ನು ಬಳಸಿ ಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪೆÇ್ಲೀಡ್ ಮಾಡಬಹುದು. ಆ್ಯಪ್‍ನ ವೈಶಿಷ್ಟ್ಯ ಎಂದರೆ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು. ಬೆಳೆ ಸಮೀಕ್ಷೆ ಮಾಹಿತಿ ಯನ್ನು ಬೆಳೆವಿಮೆ, ಬೆಳೆನಷ್ಟ ಪರಿಹಾರ, ಬೆಂಬಲಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸವಲತ್ತುಗಳನ್ನು ಒದಗಿಸಲು, ಖಖಿಅಯಲ್ಲಿ ಅಳವಡಿಸಲು ಬಳಸಬಹುದು. ರೈತರ ಬೇಸಿಗೆ ಬೆಳೆ ಸಮೀಕ್ಷೆ 2020-21 ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾರ್ವಜನಿಕರು ಗೂಗಲ್ ಸ್ಟೋರ್‍ನಲ್ಲಿ “Summeಡಿ ಈಚಿಡಿmeಡಿ ಅಡಿoಠಿ Suಡಿveಥಿ 2020-21”ಎಂದು ಟೈಪ್ ಮಾಡಬೇಕು. ರೈತರು ತಾವು ಬೆಳೆದ ಬೆಳೆ ವಿವರಗಳನ್ನು ಅಪೆÇ್ಲೀಡ್ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸವಲತ್ತುಗಳನ್ನು ಪಡೆಯುವುದರಿಂದ ವಂಚಿತರಾಗುವ ಸಂಭವವಿರು ತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಲಾಗಿರುವ ಖಾಸಗಿ ನಿವಾಸಿಗಳನ್ನು ಅಥವಾ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 8448447715 ಅನ್ನು ಸಂಪರ್ಕಿಸಬಹುದು. ಎಲ್ಲಾ ರೈತ ಬಾಂಧವರು ಹೆಚ್ಚಿನ ಆಸಕ್ತಿಯೊಂದಿಗೆ ಈ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ತಾವೇ ಖುದ್ದಾಗಿ ದಾಖಲಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »