ಯುವಜನತೆಯಲ್ಲಿ ಭಾವನಾತ್ಮಕ ನಂಟು, ಸಾಮಾಜಿಕ ಮೌಲ್ಯ ಕಡಿಮೆ
ಮೈಸೂರು

ಯುವಜನತೆಯಲ್ಲಿ ಭಾವನಾತ್ಮಕ ನಂಟು, ಸಾಮಾಜಿಕ ಮೌಲ್ಯ ಕಡಿಮೆ

March 30, 2021

ಮೈಸೂರು,ಮಾ.29(ಎಸ್‍ಪಿಎನ್)- ಇಂದಿನ ಯುವಜನರಲ್ಲಿ ಬೌದ್ಧಿಕ ಮಟ್ಟ ಹಾಗೂ ಜೀವನಮಟ್ಟ ಹೆಚ್ಚಿನದಾಗಿದ್ದರೂ ಅವರಲ್ಲಿ ಭಾವನಾತ್ಮಕ ನಂಟು, ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಲೇಖಕಿ ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು.

ಮೈಸೂರಿನ `ಸುರಚಿ’ ರಂಗಮಂದಿರದಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ `ಆರೋಗ್ಯವಂತ ವಿಭಕ್ತ ಕುಟುಂಬ ಹಾಗೂ ಸಮಾಜ’ ವಿಷಯ ಕುರಿತು ಮಾತನಾಡಿದರು.

ಪೂರ್ವಜರಲ್ಲಿ ಬೌದ್ಧಿಕ ಮಟ್ಟ ಮತ್ತು ಜೀವನಶೈಲಿ ಕಡಿಮೆಯದಾಗಿದ್ದರೂ, ಭಾವನಾತ್ಮಕ ಸಂಬಂಧ, ಸಾಮಾಜಿಕ ಮೌಲ್ಯಗಳಿಗೆ ಮಹತ್ವ ನೀಡುತ್ತಿದ್ದರು. ಇದರಿಂದ ಸಮಾಜ ದಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿತ್ತು ಎಂದು ನೆನಪಿಸಿದರು. ಕವಿ ಜಯಪ್ಪ ಹೊನ್ನಾಳಿ, ಬರಹಗಾರ್ತಿ ಲೀಲಾ ಪ್ರಕಾಶ್ ಮತ್ತಿತರೆ ಸಾಧಕರನ್ನು ಸನ್ಮಾನಿಸ ಲಾಯಿತು. ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಭೇರ್ಯ ರಾಂ ಕುಮಾರ್, ಹಿರಿಯ ರಂಗಕರ್ಮಿ ರೇವಣ್ಣ ಬಳ್ಳಾರಿ, ಬಾಗಲಕೋಟೆಯ ಗಣಪತಿ ಚಲವಾದಿ, ಪ್ರೊ.ಸಿ.ವಿ.ಶ್ರೀಧರಮೂರ್ತಿ, ಭಾರತಿ ಹೆಬ್ಬಾಳ್, ಮಂಜುನಾಥ್ ಉಪಸ್ಥಿತರಿದ್ದರು.

Translate »