56 ಹೊಸ ಸ್ಟೋರ್ಸ್ ಆರಂಭದ ಘೋಷಣೆ
ಮೈಸೂರು

56 ಹೊಸ ಸ್ಟೋರ್ಸ್ ಆರಂಭದ ಘೋಷಣೆ

March 30, 2021

ಮೈಸೂರು,ಮಾ.29(ಆರ್‍ಕೆಬಿ)- ಪ್ರತಿಷ್ಠಿತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 2021-22ನೇ ಸಾಲಿನಲ್ಲಿ ದೇಶದ 40 ಸೇರಿದಂತೆ ವಿಶ್ವಾದ್ಯಂತ ಒಟ್ಟು 56 ಹೊಸ ಸ್ಟೋರ್ಸ್ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ತಮಿಳು ನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತು ಕೇರಳ ರಾಜ್ಯದಲ್ಲಿ ಹೊಸ ಸ್ಟೋರ್‍ಗಳನ್ನು ಆರಂಭಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ, ಮಲೇಷ್ಯಾ, ಒಮನ್, ಕತಾರ್, ಬಹರೇನ್, ಯುಎಇಗಳಲ್ಲಿಯೂ ಹೊಸ ಸ್ಟೋರ್ ಗಳನ್ನು ಆರಂಭಿಸುವ ಮೂಲಕ ತನ್ನ ರೀಟೇಲ್ ಚೇನ್ ಅನ್ನು ಮತ್ತಷ್ಟು ವಿಸ್ತಾರಗೊಳಿಸಿಕೊಳ್ಳುತ್ತಿದೆ.

ಈ ವರ್ಷ 12 ಸ್ಟೋರ್‍ಗಳು ಈಗಾಗಲೇ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರಂಭಗೊಂಡಿದೆ. ಈ ವಿಸ್ತರಣೆ ಯೋಜನೆ ಕುರಿತು ಮಾತನಾಡಿದ ಮಲಬಾರ್ ಗೋಲ್ಡ್‍ನ ಅಧ್ಯಕ್ಷ ಎಂ.ಪಿ.ಅಹ್ಮದ್, 25 ವರ್ಷಗಳ ನಮ್ಮ ಸುದೀರ್ಘ ಪಯಣದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಒಂದು ಸಣ್ಣ ಆಭರಣ ರೀಟೇಲ್ ವ್ಯವಹಾರದಿಂದ ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಆಗಿ ಹೊರ ಹೊಮ್ಮಿ, ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ನಮ್ಮ ಮೌಲ್ಯಗಳನ್ನು ಉಳಿಸಿಕೊಳ್ಳುತ್ತಾ, ವಿನ್ಯಾಸ, ಗುಣಮಟ್ಟ ಮತ್ತು ಅತ್ಯುತ್ತಮ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ವಿಸ್ತರಣೆ ಯೋಜನೆಯು ಶೋರೂಂಗಳ ಸಂಖ್ಯೆ ಮತ್ತು ಆದಾಯದ ವಿಚಾರದಲ್ಲಿ ವಿಶ್ವದ ನಂಬರ್ ಒನ್ ಆಭರಣ ರೀಟೇಲ್ ಬ್ರ್ಯಾಂಡ್ ಆಗಬೇಕೆಂಬ ನಮ್ಮ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ. ಮಲಬಾರ್ ಗ್ರೂಪ್‍ನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಸಲಾಂ, ಅತ್ಯಂತ ಪಾರದರ್ಶಕವಾಗಿ ನಮ್ಮ ಕಾರ್ಯಾಚರಣೆ ನಡೆಯಲಿದೆ ಎಂದಿದ್ದಾರೆ.

Translate »