ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ
ಮೈಸೂರು

ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ

July 5, 2018

ಮೈಸೂರು: ಚಿನ್ನಾಭರಣದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೊಬ್ಬ 49 ಸಾವಿರ ರೂ. ಮೌಲ್ಯದ ಚಿನ್ನ ಸರ ಕಳವು ಮಾಡಿ ಪರಾರಿಯಾಗಿರುವ ಘಟನೆ ಬಿ.ಎನ್.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜೂ.27 ರಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಚಿನ್ನಾಭರಣ ಖರೀದಿಯ ನೆಪದಲ್ಲಿ ಅಂಗಡಿಗೆ ಬಂದ ಖದೀಮ, ನೆಕ್ಲೆಸ್ ಬೇಕೆಂದು ಅಂಗಡಿಯವರ ಬಳಿ ಕೇಳಿದ್ದಾನೆ. ಆಗ ಅಲ್ಲಿನ ಸಿಬ್ಬಂದಿ ನೆಕ್ಲೆಸ್ ತೋರಿಸಲು ಬೇರೆ ಕಡೆ ತಿರುಗಿದಾಗ, ತನ್ನ ಎದುರಿಗಿದ್ದ 16,264 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ. ಈ ಸಂಬಂಧ ಅಂಗಡಿಯ ಸಿಬ್ಬಂದಿ ಸರಫುದ್ದೀನ್ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Translate »