ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು

July 5, 2018

ಕೊಳ್ಳೆಗಾಲ:  ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿ ಯೋರ್ವನ ತಲೆ ಮೇಲೆ ಹಿಂಬದಿ ಯಿಂದ ಬಂದ ಸರ್ಕಾರಿ ಸಾರಿಗೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ಬೆಳಗ್ಗೆ ಹಳೆ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

ಮೃತನ ವಿಳಾಸ ಪತ್ತೆಯಾಗಿಲ್ಲ. ಆದರೆ ಮೃತ ವ್ಯಕ್ತಿಯನ್ನು ಅಕ್ಕ-ಪಕ್ಕದ ಗ್ರಾಮದ ವ್ಯಕ್ತಿಯಾಗಿರಬೇಕು ಇಲ್ಲವೇ ಅನ್ಯ ತಾಲೂಕಿನ ವ್ಯಕ್ತಿಯಾಗಿರಬೇಕು ಎಂದು ಪೆÇಲೀಸರು ಶಂಕಿಸಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪ ತ್ರೆಯ ಶವಗಾರದಲ್ಲಿ ಇಡಲಾಗಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದ ಗಣೇಶ ದೇವಸ್ಥಾನದ ಎದುರಿನ ಮಹಾಲಕ್ಷ್ಮಿ ಲಾಡ್ಜ್ ನ ಕಟ್ಟಡದ ರಾಜಧಾನಿ ಗೋಲ್ಡ್ ನ ಮುಂಭಾಗ ಇಂದು ಬೆಂಗಳೂರಿಗೆ ತೆರಳಲು ಬಂದ ಕೆ.ಎಸ್.ಆರ್.ಟಿ.ಸಿ ಬಸ್‍ನ್ನು ಮಾಡುತ್ತಿದ್ದ ಚಾಲಕ ಹಿಂದಕ್ಕೆ ಚಲಿಸಿದ್ದಾನೆ. ಈ ವೇಳೆ ರಾಜಧಾನಿ ಗೋಲ್ಡ್‍ನ ಮುಂಭಾಗ ಮಲಗಿದ್ದ ವ್ಯಕ್ತಿ ಯೋರ್ವನ ತಲೆ ಮೇಲೆ ಹಿಂಬದಿಯ ಚಕ್ರ ಹರಿದಿದೆ. ಹಿಂಬದಿಯ ಚಕ್ರಕ್ಕೆ ಸಿಲುಕಿದ ವ್ಯಕ್ತಿ ದಾರುಣವಾಗಿ ಸಾವನ್ನ ಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.

Translate »