ಕಾವೇರಿ ನದಿಯಲ್ಲಿ ವೃದ್ಧನ ಶವ ಪತ್ತೆ
ಮೈಸೂರು

ಕಾವೇರಿ ನದಿಯಲ್ಲಿ ವೃದ್ಧನ ಶವ ಪತ್ತೆ

May 24, 2020

ಕೊಳ್ಳೇಗಾಲ: ಮನೆ ಬಿಟ್ಟು ಹೋದ ವೃದ್ಧನೋರ್ವ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂ ಕಿನ ಶಿವನಸಮುದ್ರದ ಬಳಿ ನಡೆದಿದೆ.

ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಮಾದೇಗೌಡ (74) ಶವವಾಗಿ ಪತ್ತೆಯಾದವರು. ಈತ ಆಗಾಗ್ಗೆ ಮನೆಯಿಂದ ಹೊರ ಹೋಗಿ ಮತ್ತೆ ವಾಪಸ್ ಬರುತ್ತಿದ್ದ ಎನ್ನಲಾಗಿದೆ. ಕೆಲ ವರ್ಷಗಳಿಂದ ಪಿಡ್ಸ್ ಕಾಯಿಲೆ ಹಾಗೂ ಬಿಪಿ, ಷುಗರ್‍ಗೆ ಸಂಬಂಧಿಸಿದ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದು, ತೀವ್ರ ಅನಾರೋಗ್ಯದಿಂದ ಬೇಸತ್ತು ಮೇ 12ರಂದು ಮನೆಯಿಂದ ಹೋದವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ಮಹೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

Translate »