ಮೇ 26, 27 ವಿದ್ಯುತ್ ವ್ಯತ್ಯಯ
ಮೈಸೂರು

ಮೇ 26, 27 ವಿದ್ಯುತ್ ವ್ಯತ್ಯಯ

May 24, 2020

ಮೈಸೂರು, ಮೇ 23- ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರ, ಚಂದ್ರವಾಡಿ ಹಾಗೂ ಹೆಮ್ಮರಗಾಲ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಮೇ 26ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ದೇವೀರಮ್ಮನಹಳ್ಳಿ, ದೇವರಸನಹಳ್ಳಿ, ಕಳಲೆ, ನವಿಲೂರು, ಸಿಂಧುವಳ್ಳಿ, ಕೂಡ್ಲಾಪುರ, ಕಸುವಿನಹಳ್ಳಿ ಗ್ರಾಮಗಳು/ಗ್ರಾಪಂ ವ್ಯಾಪ್ತಿಯ ಪ್ರದೇಶಗಳು. ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಗಳು/ಗ್ರಾಪಂ ವ್ಯಾಪ್ತಿಯ ಪ್ರದೇಶಗಳು. ಹೆಮ್ಮರಗಾಲ, ಕುಂಬ್ರಳ್ಳಿ, ಮಾಡ್ರಳ್ಳಿ, ಶ್ರೀನಗರ, ಸಿಂಗಾರಿಪುರ, ಗೊಣತಗಾಲ, ಹೆಡತಲೆ, ಭುಜಂಗಯ್ಯನ ಹುಂಡಿ, ಮಲ್ಲಹಳ್ಳಿ, ಹಂಪಾಪುರ, ಹಳೇಪುರ ವ್ಯಾಪ್ತಿಯ ಗ್ರಾಮಗಳು/ ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೇ 27: ದೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 27ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬಿದರಗೂಡು, ಕೆಂಬಾಳು, ಹಳ್ಳಿಕೆರೆಹುಂಡಿ, ಬ್ಯಾಳಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Translate »