ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ

June 23, 2018

ಗುಂಡ್ಲುಪೇಟೆ:  ರೈತರ ವಿದ್ಯುತ್ ಬಿಲ್ ಬಾಕಿ ಕಟ್ಟುವವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುತ್ತಿ ರುವ ಸೆಸ್ಕ್ ಕ್ರಮದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸಮಾ ವೇಶಗೊಂಡ ರೈತ ಸಂಘದ ಪದಾಧಿಕಾರಿ ಗಳು ಮತ್ತು ಮುಖಂಡರು ಮತ್ತು ಕಾರ್ಯ ಕರ್ತರು ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ರಚಿಸಿ ಸೆಸ್ಕ್ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿ, ಕೆಲ ಕಾಲ ರಸ್ತೆ ತಡೆ ನಡೆಸಿ ಸೆಸ್ಕ್ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸೆಸ್ಕ್ ಉಪಭಾಗ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರೈತ ಸಂಘದ ಅಧ್ಯಕ್ಷ ಸಂಪತ್ತು ಮಾತ ನಾಡಿ, ಕಳೆದ ಹಲವಾರು ವರ್ಷಗಳಿಂದ ಬರದ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವ ತಿಸದೆ ರೈತ ಸಂಘವು ಕರ ನಿರಾಕರಣೆ ಚಳುವಳಿ ನಡೆಸುತ್ತಿದ್ದು, ಕಳೆದ ಸರ್ಕಾರದ ಅವಧಿಯಲ್ಲಿ ನಡೆಸಿದ ಸಭೆಯಲ್ಲಿ ದಿ.ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಆಗಿನ ಇಂಧನ ಸಚಿವ ಡಿಕೆ ಶಿವಕುಮಾರ್ ಭಾಗವಹಿಸಿ ಹಳೆಯ ಬಾಕಿಗಳನ್ನು ಮನ್ನಾ ಮಾಡಿ ಹೊಸದಾಗಿ ಮೀಟರ್ ಅಳವಡಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ನಂತರ ಚುನಾವಣೆಯಾಗಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ತೀರ್ಮಾನ ಪ್ರಕಟವಾಗಿಲ್ಲ ಎಂದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವ ಪುರ ಮಹದೇವಪ್ಪ ಮಾತನಾಡಿ, ಇತ್ತೀಚೆಗೆ ಸೆಸ್ಕ್ ಸಿಬ್ಬಂದಿಗಳು ಯಾವುದೇ ಸೂಚನೆ ಗಳನ್ನೂ ನೀಡದೆ ರೈತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಇದನ್ನು ರೈತ ಸಂಘವು ತೀವ್ರವಾಗಿ ವಿರೋ ಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಇಇ ಶಿವಪ್ರಸಾದ್ ಹಾಗೂ ಎಇ ಕೆ.ಎಂ.ಸಿದ್ದ ಲಿಂಗಪ್ಪ ಅವರಿಗೆ ಯಾವುದೇ ಕಾರಣಕ್ಕೂ ರೈತರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಒತ್ತಾಯಿಸಿರುವ ಮನವಿಯನ್ನು ರೈತ ಮುಖಂಡರು ಸಲ್ಲಿಸಿ ದರು. ಈ ಸಂದರ್ಭದಲ್ಲಿ ರೈತ ಮುಖಂಡ ರಾದ ಟಿ.ಎಸ್.ಶಾಂತಮಲ್ಲಪ್ಪ, ಕಡಬೂರು ಮಂಜುನಾಥ್ ಸೇರಿದಂತೆ ಹಲವರು ಇದ್ದರು.

ಬೇಗೂರು ವರದಿ : ಸಮೀ ಪದ ದಡದಹಳ್ಳಿಯಲ್ಲಿ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಸೆಸ್ಕಾಂ ಸಿಬ್ಬಂದಿ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೇಗೂರು ಸೆಸ್ಕಾಂನ ಸಿಬ್ಬಂದಿಗಳು ಪೊಲೀಸರ ಸಹಕಾರದಲ್ಲಿ ದಡದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕ ತೆಗೆಯಲು ಆರಂಭಿಸಿ 10 ಮನೆಯ ಸಂಪರ್ಕ ಕಟ್ ಮಾಡಿದರು.

ಬಾಕಿ ಕಟ್ಟದ ಮನೆಯ ಸಂಪರ್ಕ ತೆಗೆವ ಕೆಲಸ ಕಂಡು ಆಕ್ರೋಶಗೊಂಡ ರೈತ ಸಂಘದ ಮುಖಂಡ ಮಾಡ್ರಹಳ್ಳಿ ಮಹ ದೇವಪ್ಪ, ಡಾ.ಗುರುಪ್ರಸಾದ್ ನೇತೃತ್ವದಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು.ಈ ಸಮಯದಲ್ಲಿ ಅಧಿಕಾರಿಗಳ ಕ್ರಮ ಖಂಡಿಸಿ ಈ ರೈತ ವಿರೋಧಿ ಧೋರಣೆ ಸರಿಯಲ್ಲ. ಹಳೇ ಬಾಕಿ ಕಟ್ಟಲು ಆಗುವುದಿಲ್ಲ. ಹೊಸ ಮೀಟರ್ ಹಾಕಿ ಹಣ ಕಟ್ಟುತ್ತೇವೆ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

ರೈತರ ಒತ್ತಾಯ ಹಾಗು ಅಧಿಕಾರಿಗಳ ಮಾತುಕತೆ ಯಶಸ್ವಿಯಾಗಿ ಮತ್ತೆ ವಿದ್ಯುತ್ ಸಂಪರ್ಕ ಹಾಕುವ ಮೂಲಕ ಪ್ರತಿ ಭಟನೆಗೆ ಬ್ರೇಕ್ ಬಿದ್ದಿದೆ. ಪ್ರತಿಭಟನೆ ಯಲ್ಲಿ ಗ್ರಾಮದ ರೈತ ಸಂಘದ ಕಾರ್ಯ ಕರ್ತರು ಹಾಗು ಗ್ರಾಮಸ್ಥರು ಇದ್ದರು.

Translate »