ಕೊಡಗು

ಚಿಕ್ಲಿಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವಂತೆ ರೈತರ ಒತ್ತಾಯ

June 23, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದಿಂದ ಎಡದಂಡೆ,ಬಲದಂಡೆಯ ನಾಲೆಗಳಿಗೆ ನೀರು ಹರಿಸುವಂತೆ ಅಲ್ಲಿನ ಅಚ್ಚುಕಟ್ಟುದಾರರು ಒತ್ತಾಯಿಸಿದ್ದಾರೆ. ಗದ್ದೆಗಳಲ್ಲಿ ಭತ್ತದ ಸಸಿಮಡಿ ತಯಾರಿಸಲು ಸಮಯವಾಗಿದ್ದು ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತಿದೆ. ಈ ನೀರನ್ನು ನಾಲೆಗೆ ಬಿಟ್ಟು, ರೈತರ ಜಮೀನುಗಳಿಗೆ ಹರಿಯುವಂತೆ ಮಾಡಬೇಕಾಗಿ ಈ ವಿಭಾಗದ ರೈತರು ಒತ್ತಾಯಿಸಿ ದ್ದಾರೆ. ಅಲ್ಲದೆ ಜೂನ್ ತಿಂಗಳು ಮುಗಿಯಲು ಬಂದರೂ ನಾಲೆಯೊ ಳಗಿನ ಗಿಡಗಂಟಿ ಗಳನ್ನು ಇಲಾಖಾ ವತಿಯಿಂದ ನಡೆಸದಿರುವುದಕ್ಕೆ ಇಲಾಖಾಧಿಕಾರಿಗಳಿಗೂ ಮತ್ತು ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ ರೈತರು ಮನವಿ ಪತ್ರ ನೀಡಿದ್ದಾರೆ.

Translate »