ಚಿಕ್ಲಿಹೊಳೆ ಜಲಾಶಯ ಭರ್ತಿ
ಕೊಡಗು

ಚಿಕ್ಲಿಹೊಳೆ ಜಲಾಶಯ ಭರ್ತಿ

July 2, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಒಳಪಡುವ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಜಲಾಶಯದ ಮೇಲಿಂದ ಹೊರಸೂಸುವ ಹೆಚ್ಚುವರಿ ನೀರನ್ನು ನೋಡಲು ಮನಮೋಹಕವಾಗಿದೆ. ಈ ದೃಶ್ಯವನ್ನು ನೋಡಲು ಇದೀಗ ಪ್ರವಾಸಿಗರ ದಂಡು ಚಿಕ್ಲಿಹೊಳೆ ಜಲಾಶಯದತ್ತಾ ಪ್ರಯಾಣಿಸುತ್ತಿದೆ.

ಇತ್ತ ಜಲಾಶಯ ಭರ್ತಿಯಾದರೆ ಅತ್ತ ಈ ವ್ಯಾಪ್ತಿಯ ರೈತರು ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜಲಾಶಯ ಭರ್ತಿಯಾದರೂ ನಾಲೆಯೊಳ ಗಿರುವ ಕಾಡನ್ನು ಕಡಿಯದಿರುವುದಕ್ಕೆ ಅಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷವು ಇದೇ ರೀತಿ ಮಾಡಿ ಬೆಸಿಗೆಯಲ್ಲಿ ಕಾಮಗಾರಿ ಮಾಡುವುದು ಬಿಟ್ಟು ಗದ್ದೆಗಳಲ್ಲಿ ಭತ್ತದ ಸಸಿಮಡಿ ತಯಾರಿಸುವ ಸಂಧರ್ಭ ಕಾಮಗಾರಿ ನಡೆಸುತ್ತಾರೆ. ಕೇವಲ ಪ್ರವಾಸಿಗರು ನೋಡಿ ಸಂತೋಷಪಡುವುದರ ಜೊತೆಗೆ ರೈತರ ಬಾಳುಬೆಳಗುವ ಕಾರ್ಯವನ್ನು ಇಲಾಖೆಗಳು ಮಾಡಲಿ. ಅಲ್ಲದೆ ಎಡದಂಡೆ ಮತ್ತು ಬಲದಂಡೆ ಕಾಲುವೆ ಗಳ ಹೂಳೆತ್ತಲು ತಲಾ ಕೇವಲ 2 ಲಕ್ಷ ಹಣವನ್ನು ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಈ ಹಣದಲ್ಲಿ ಯಾವ ರೀತಿ ಕಾಮಗಾರಿ ನಡೆಸುವುದು ಎಂದು ಈ ವಿಭಾಗದ ಇಲಾಖಾಧಿಕಾರಿಗಳು ಪ್ರಶ್ನಿಸುತ್ತಾರೆ. ಆದುದರಿಂದ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಈ ವಿಭಾಗದ ರೈತರು ಸರಕಾರವನ್ನು ಒತ್ತಾಯಿಸಿದ್ದಾರೆ.

Translate »