ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಲೋಕ ಸ್ಥಾಪನೆಯಾಗಲಿ
ಮಂಡ್ಯ

ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಲೋಕ ಸ್ಥಾಪನೆಯಾಗಲಿ

July 2, 2018
  • ಮಂಗಲದಲ್ಲಿ ನಡೆದ ಭರ್ಜರಿ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಕೆಟಿಎಸ್, 7 ಮುದ್ದೆ ಉಂಡ ಮೀಸೆ ಈರೇಗೌಡಗೆ ಜಯ

ಮಂಡ್ಯ: ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ರಾಮನಗರ ದಲ್ಲಿ ಸ್ಥಾಪಿಸಿರುವ ಜಾನಪದ ಲೋಕದ ಶಾಖೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲೂ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಆಧು ನಿಕತೆಯ ಸೋಗಿನಲ್ಲಿ ‘ನಶಿಸಿ ಹೋಗುತ್ತಿ ರುವ ಜಾನಪದ ಕ್ರೀಡೆಗಳಿಗೆ ಮರುಜೀವ ನೀಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಅವುಗಳನ್ನು ಉಳಿಸಿ, ಬೆಳೆಸಬೇಕಾದ ಹೊಣೆ ಎಲ್ಲರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಕ್ರೀಡೆಗಳು ಹಳ್ಳಿಯಲ್ಲಿ ಶಾಂತಿ, ಸೌಹಾರ್ದತೆಯ ಸಂಕೇತಗಳಾಗಿವೆ. ಈ ನಿಟ್ಟಿನಲ್ಲಿ ಮಂಗಲ ಗ್ರಾಮದಲ್ಲಿ ಆಯೋ ಜನೆ ಮಾಡಿರುವ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಶ್ಲಾಘನೀಯವಾದುದು. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಆ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಪುನರುಜ್ಜೀವನ ನೀಡ ಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಜನಪದ ಲೋಕದ ಕಾರ್ಯಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮಾತನಾಡಿ ‘ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಕೇವಲ ಮಂಗಲ ಗ್ರಾಮಕ್ಕಷ್ಟೇ ಸೀಮಿತ ವಾಗಬಾರದು. ಇದು ರಾಜ್ಯದಾದ್ಯಂತ ನಡೆಯುವಂತಾಗಬೇಕು. ಗ್ರಾಮೀಣ ಆಟ ಗಳನ್ನು ಉಳಿಸಲು ಜಾನಪದ ಲೋಕದ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು. ಆ ಮೂಲಕ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯನ್ನೂ ರಾಜ್ಯ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಆರೋಗ್ಯದ ದೃಷ್ಟಿಯಿಂದ ರಾಗಿ ಮುದ್ದೆ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ‘ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಹಿರಿಯರು, ಕಿರಿಯರು ಭಾಗವಹಿಸಿರುವುದು ಸಂತಸದ ವಿಚಾರ. ಜಿಲ್ಲೆಯಲ್ಲಿ ಮಾತ್ರವಲ್ಲದೇ ಬೇರೆ ಜಿಲ್ಲೆ ಗಳಿಂದಲೂ ಸ್ಪರ್ಧಿಗಳು ಬಂದಿದ್ದಾರೆ. ಅಲ್ಲದೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಹೇಳಿದರು.

ಇಂದಿನ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಯಲ್ಲಿ ಹಿರಿಯರು, ಕಿರಿಯರು, ಮಹಿಳೆಯರೂ ಎಂಬ ಭೇದವಿಲ್ಲದೇ ಸ್ಪರ್ಧಾಳುಗಳು ಪಾಲ್ಗೊಂ ಡಿದ್ದರು. ಗ್ರಾಮದ ಆಂಜನೇಯ, ಮಾರಮ್ಮನ ಗುಡಿ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸುತ್ತಮುತ್ತಲ ಹಳ್ಳಿಗಳ ನೂರಾರು ಜನರು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದ ಹಿರಿಯ 57 ವರ್ಷ ವಯಸ್ಸಿನ ಮೀಸೆ ಈರೇಗೌಡರು 7 ಮುದ್ದೆಗಳನ್ನು ಉಣ್ಣುವ ಮೂಲಕ ಜಯಗಳಿಸಿದರು. ಕಾರ್ಯ ಕ್ರಮದ ಭಾಗವಾಗಿ ಸೂನಗಹಳ್ಳಿ ರಾಜು ಚಿತ್ರಕತೆ ಬರೆದು, ನಿರ್ದೇಶನ ಮಾಡುತ್ತಿರುವ ‘ಆನೆ ಬಲ’ ಚಿತ್ರದ ಚಿತ್ರೀಕರಣವೂ ನಡೆ ಯಿತು. ಉಷಾ ಸಂಜಯ್ ಅವರು ಸ್ಪರ್ಧೆ ಯ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಈ ಸಂದರ್ಭ ಬಿಎಂಟಿಸಿ ಭದ್ರತೆ ಮತ್ತು ತನಿಖಾ ದಳದ ನಿರ್ದೇಶಕ ಎ.ಎನ್. ಪ್ರಕಾಶ್‍ಗೌಡ, ಜೆಡಿಎಸ್ ಮುಖಂಡ ತಗ್ಗಹಳ್ಳಿ ವೆಂಕಟೇಶ್, ತಾಪಂ ಅಧ್ಯಕ್ಷೆ ಶೈಲಜಾ, ಗ್ರಾಪಂ ಅಧ್ಯಕ್ಷ ಎಂ.ಜೆ.ಗಿರೀಶ್, ಗ್ರಾಪಂ ಸದಸ್ಯ ಪಿ.ಎಂ.ದಿವಾಕರ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಕಾರ್ಯದರ್ಶಿ ಎಲ್.ಕೆ.ಯೋಗೇಶ್, ಅನುಪಮಾ, ಡಿ.ಉಮಾಪತಿ, ಎಸ್.ಮಹೇಶ್, ನಿತ್ಯಾನಂದ ಮತ್ತಿತರರು ಇದ್ದರು.

Translate »