ಕುಕ್ಕರ್ ವಿಷಲ್ ನುಂಗಿ ಮಗು ಸಾವು
ಮಂಡ್ಯ

ಕುಕ್ಕರ್ ವಿಷಲ್ ನುಂಗಿ ಮಗು ಸಾವು

July 2, 2018

ಮದ್ದೂರು: ಕುಕ್ಕರ್‌ನ ವಿಷಲ್ ನುಂಗಿ ಮಗು ಮೃತಪಟ್ಟಿರುವ ಘಟನೆ ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕ ಜಿ.ಶಿವರಾಮಯ್ಯ ಅವರ ಪುತ್ರ ಮರಿನಿಂಗೇಗೌಡ, ರೂಪ ದಂಪತಿ ಪುತ್ರ ಭುವನ್‍ಗೌಡ(1) ಸಾವನ್ನಪ್ಪಿದ ಮಗು.

ಶನಿವಾರ ರಾತ್ರಿ ಮಗುವಿನ ಅಜ್ಜಿ ಪುಟ್ಟ ಲಿಂಗಮ್ಮ ಅವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅಲ್ಲೇ ಇದ್ದ ಕುಕ್ಕರ್‍ನ ವಿಷಲ್ ಅನ್ನು ಮಗು ಭುವನ್‍ಗೌಡ ಬಾಯಿಗೆ ಹಾಕಿಕೊಂಡು ಆಟವಾಡುತ್ತಿತ್ತು. ಈ ವೇಳೆ ಬಾಯಲಿದ್ದ ವಿಷಲ್ ಅನ್ನು ಮಗು ನುಂಗಿದೆ. ಪರಿಣಾಮ ಮಗುವಿನ ಗಂಟಲಲ್ಲಿ ವಿಷಲ್ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಮಗು ಪ್ರಜ್ಞೆ ತಪ್ಪಿದೆ. ತಕ್ಷಣ ಮಗುವನ್ನು ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಗಂಟ ಲಲ್ಲಿ ಸಿಲುಕಿದ್ದ ವಿಷಲ್ ಅನ್ನು ತೆಗೆಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿ ಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೇ ಮಗು ಭುವನ್ ಗೌಡ ಸಾವನ್ನ ಪ್ಪಿದ್ದಾನೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Translate »