ಮದ್ದೂರು: ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯವರ ನಕಲಿ ಲೆಟರ್ ಹೆಡ್ ಬಳಸಿ, ಬಿಡಿಎಯಿಂದ ನಿವೇಶನ ಮಂಜೂರು ಮಾಡಿ ಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ದಂಪತಿಗೆ 5 ಲಕ್ಷ ರೂ. ವಂಚಿ ಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಮಾಸ್ತ ಟಿ.ಎಲ್. ನಂಜುಂಡಸ್ವಾಮಿ ಮತ್ತು ಅವರ ಪತ್ನಿ ಟಿ.ಎಂ.ಗಿರಿಜಾ ಅವರನ್ನು ತಾಲೂಕಿನ ಮಲ್ಲನ ಕುಪ್ಪೆ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಮಂಜು ನಾಥ ನಗರದಲ್ಲಿ ವಾಸವಾಗಿರುವ ಎಂ. ರಾಮಚಂದ್ರೇ ಗೌಡ ಎಂಬಾತ…
ನಮ್ಮ ದೇಶದ ಕಾನೂನು ಸರಿಯಿಲ್ಲ… ಕೊಲೆ ಮಾಡಿದವರು ಬೇಲ್ ತಗೊಂಡು ಬೇಗ ಆಚೆ ಬರ್ತಾರೆ…
December 26, 2018ಮದ್ದೂರು: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ. ಯಾಕಂದ್ರೆ ಕೊಲೆ ಮಾಡಿ ದವರು ಬೇಲ್ ತೆಗೆದುಕೊಂಡು ಆಚೆ ಬರ್ತಾರೆ. ಬಂದ ಬಳಿಕ ಮತ್ತೆ ಕೊಲೆ ಯಂತಹ ಕೃತ್ಯವೆಸಗುತ್ತಾರೆ. ಹಂತಕರಿಗೆ ಕಾನೂನಿನ ಭಯವೇ ಇಲ್ಲ. ಈ ರೀತಿಯ ವ್ಯವಸ್ಥೆ ನಮ್ಮ ಕಾನೂನಿನಲ್ಲಿದೆ. ಯಾಕೆಂದರೆ ಇದೊಂದೇ ಪ್ರಕರಣದಲ್ಲಲ್ಲ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಇಂಥ ದುಷ್ಕøತ್ಯಗಳು ನಡೆದಿರುವುದನ್ನು ನೋಡಿದ್ದೇನೆ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಅತ್ಯಂತ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಸೋಮವಾರ…
ತೊಪ್ಪನಹಳ್ಳಿಯಲ್ಲಿ `ಕೈ’ ನಾಯಕರ ಮನೆಗಳು ಧ್ವಂಸ ಶಾಂತಿ ಕಾಪಾಡುವಂತೆ ಐಜಿಪಿ ಶರತ್‍ಚಂದ್ರ ಮನವಿ
December 26, 2018ಮದ್ದೂರು: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ಸೋಮ ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಐವರು ಕಾಂಗ್ರೆಸ್ ಕಾರ್ಯಕರ್ತರ ಮನೆಯನ್ನು ಜೆಡಿಎಸ್ ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಾದ ಸ್ವಾಮಿ, ಪ್ರಸನ್ನ, ಮುತ್ತೇಶ್, ಕುಮಾರ್, ಪುಟ್ಟಸ್ವಾಮಿ ಅವರ ಮನೆಗಳು ಜೆಡಿಎಸ್ ಕಾರ್ಯ ಕರ್ತರ ಆಕ್ರೋಶಕ್ಕೆ ಬಲಿಯಾಗಿದೆ. ಪ್ರಕಾಶ್ ಕೊಲೆಗೆ ಕಾರಣವಾದವರೆಂದು ಆರೋಪಿಸಿ ಉದ್ರಿಕ್ತರ ಗುಂಪು ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಗೋಡೆ ಹಾಗೂ ಮೇಲ್ಛಾವಣಿಯನ್ನು ಕಿತ್ತು ಹಾಕಿದ್ದಾರೆ. ಕಿಟಕಿ, ಬಾಗಿಲು ಧ್ವಂಸ ಮಾಡಿ, ಮನೆ ಯೊಳಗಿದ್ದ ವಸ್ತುಗಳನ್ನು…
ಮದ್ದೂರಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ
December 25, 2018ಮದ್ದೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಜೆಡಿಎಸ್ ಮುಖಂಡ ನೋರ್ವನನ್ನು ಕೂತಿದ್ದ ಕಾರಿನಲ್ಲಿಯೇ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರಿನ ಟಿ.ಬಿ.ವೃತ್ತದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತೊಪ್ಪನಹಳ್ಳಿ ಪ್ರಕಾಶ್ (48) ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾದವರು. ಘಟನೆ ಹಿನ್ನೆಲೆ: ತೊಪ್ಪನಹಳ್ಳಿ ಪ್ರಕಾಶ್ ಇಂದು ಮಧ್ಯಾಹ್ನ ಪಟ್ಟಣದ ಟಿ.ಬಿ.ವೃತ್ತದಿಂದ ಎಳನೀರು ಮಾರುಕಟ್ಟೆಗೆ ಹೋಗುವ ಮಾರ್ಗಮಧ್ಯೆ ಕಾರಿನ ಸೀಟ್ ಕವರ್ ಹಾಕಿಸಲು ಕಾರು ನಿಲ್ಲಿಸಿದ್ದರು. ಈ ವೇಳೆ ಅವರ ಜೊತೆ ಬಂದಿದ್ದ ಸ್ನೇಹಿತರಾದ ವಿನಯ್…
ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ…: ಎಚ್.ಡಿ.ಕೆ
December 25, 2018ಜೆಡಿಎಸ್ ಮುಖಂಡ ಪಕಾಶ್ ಹತ್ಯೆ ಹಂತಕರನ್ನು ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ, ತೊಂದರೆ ಇಲ್ಲ ಎಂದು ಮುಖ್ಯಮಂತಿ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ಪಕರಣ ಸಂಬಂಧ ಮೊಬೈಲ್‍ನಲ್ಲಿ ಎಸ್ಪಿ ಅವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಕಾಶ್ ತುಂಬಾ ಒಳ್ಳೆಯ ವ್ಯಕ್ತಿ. ಆತನನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ನೀವು ಯಾವ ರೀತಿ ಹ್ಯಾಂಡಲ್ ಮಾಡುತ್ತೀರೋ ಗೊತ್ತಿಲ್ಲ. ಇಂತಹ ವ್ಯಕ್ತಿಗಳನ್ನು ಕೊಲೆ…
ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
November 29, 2018ಮದ್ದೂರು: ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಯಿತು.ತಾಲೂಕು ಕಚೇರಿಯ ಮುಂಭಾಗ ಸಮಾವೇಶಗೊಂಡ ವೇದಿಕೆಯ ಕಾರ್ಯ ಕರ್ತರು, ರೈತರು ಬೆಳೆ ಪರಿಹಾರ ನೀಡುವಂತೆ ಘೋಷಣೆ ಕೂಗಿದರು. ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಕಾರ್ಖಾನೆಯ ಕಲುಷಿತ ನೀರು ನದಿಗೆ ಸೇರಿ ನೀರು ಕಲುಷಿತಗೊಂಡಿರುವುದ ರಿಂದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳು ನದಿಯ ನೀರನ್ನು ಮುಂದಿನ ಆದೇಶವ ರೆಗೆ ಬಳಸದಂತೆ ರೈತರಿಗೆ ಸೂಚಿಸಿದ್ದಾರೆ. ಇದ್ದರಿಂದ ಶಿಂಷಾನದಿಯ ಎಡ ಮತ್ತು…
ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು
November 28, 2018ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೆಂಟ್‍ವಾಷ್ ಮೇಜರ್ ಟ್ಯಾಂಕ್ ವಾರದ ಹಿಂದೆ ಸ್ಫೋಟಗೊಂಡು ವಾರವೇ ಕಳೆದಿದ್ದು, ಕಾರ್ಖಾನೆ ಸುತ್ತಲಿನ ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಅಣ್ಣೆದೊಡ್ಡಿ, ಕೀಳಘಟ್ಟ, ಯು.ಸಿ.ದೊಡ್ಡಿ, ಗೊಲ್ಲರದೊಡ್ಡಿ ಸೇರಿದಂತೆ 17 ಗ್ರಾಮಗಳ ಜನರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ. ಚಿಕ್ಕೋನಹಳ್ಳಿ ಗ್ರಾಮವೊಂದರಲ್ಲೇ 500ಕ್ಕೂ ಹೆಚ್ಚು ಜನರಿಗೆ ಸೊಂಟ ನೋವು, ಕೆಮ್ಮು, ನೆಗಡಿ, ತುರಿಕೆ, ಗಂಟಲು ಕೆರೆತ, ಚರ್ಮ ರೋಗಗಳು, ಶ್ವಾಸಕೋಶದ ಸಮಸ್ಯೆ ಬಾಧಿಸುತ್ತಿದೆ. ಟ್ಯಾಂಕ್ ಸ್ಫೋಟದಿಂದ 82 ಲಕ್ಷ ಲೀಟರ್‍ಗೂ ಅಧಿಕ ರಾಸಾಯನಿಕ ದ್ರಾವಣ…
ಸುರಕ್ಷತಾ ಸಾಧನವಿಲ್ಲದೆ ಒಳಚರಂಡಿ ದುರಸ್ತಿ
September 27, 2018ಮದ್ದೂರಿನ 10ನೇ ವಾರ್ಡ್‍ನಲ್ಲಿ ಘಟನೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಮದ್ದೂರು: ಪೌರ ಕಾರ್ಮಿಕ ರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಒಳಚರಂಡಿಯನ್ನು ದುರಸ್ತಿ ಮಾಡಿಸಲಾಗಿದೆ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಮುಖಂಡ ಶ್ರೀನಿವಾಸ್ ಆರೋಪಿಸಿದ್ದಾರೆ. ಪಟ್ಟಣದ 10ನೇ ವಾರ್ಡ್‍ನ ಚನ್ನೇ ಗೌಡ ಬಡಾವಣೆಯಲ್ಲಿ ಹಲವು ದಿನಗಳಿಂದ ಹದಗೆಟ್ಟಿದ್ದ ಒಳಚರಂಡಿಯನ್ನು ಕಾರ್ಮಿಕ ರಿಂದ ಬರೀ ಕೈಯಲ್ಲಿಯೇ ಸ್ವಚ್ಛಗೊಳಿಸಿ ರಿಪೇರಿ ಮಾಡಿಸಲಾಗಿದೆ. ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ…
ಮದ್ದೂರು ಕಾಲೋನಿಯಲ್ಲಿ ಜಿಪಂ ಸಿಇಓ ವಾಸ್ತವ್ಯ
September 25, 2018ಚಾಮರಾಜನಗರ: ಜನರ ಅಹವಾಲು ಆಲಿಸಿ ಪರಿಹರಿಸಲು ಗ್ರಾಮ ವಾಸ್ತವ್ಯ ಆರಂಭಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು ಶನಿವಾರ ರಾತ್ರಿ ಗುಂಡ್ಲು ಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ವಾಸ್ತವ್ಯ ಹೂಡಿ, ಸ್ಥಳೀಯರ ಕುಂದುಕೊರತೆ ವಿಚಾರಿಸಿದರು. ಸಂಜೆ ವೇಳೆಗೆ ಹರೀಶ್‍ಕುಮಾರ್‍ರವರು ಕಾಲೋನಿಗೆ ಆಗಮಿಸುತ್ತಿದ್ದಂತೆಯೇ ಅರಣ್ಯವಾಸಿ ಗಳು ಆರತಿ ಮಾಡಿ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಅಕ್ಕರೆಯಿಂದ ಬರಮಾಡಿಕೊಂಡರು.ಬಳಿಕ ಕಾಲೋನಿಯ ಎಲ್ಲಾ ಬೀದಿಗಳಲ್ಲೂ ಸಂಚರಿ ಸಿದ ಅವರು, ಮನೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಜನರು ಅನುಭವಿ ಸುತ್ತಿರುವ…
ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ
September 6, 2018ಮದ್ದೂರು: ಪಟ್ಟಣದ ಪುರ ಸಭೆಯ ಇಬ್ಬರು ಪಕ್ಷೇತರ ಸದಸ್ಯರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸಮ್ಮುಖ ದಲ್ಲಿ ಬುಧವಾರ ಜೆಡಿಎಸ್ ಸೇರ್ಪಡೆ ಗೊಂಡರು. ಪುರಸಭೆ 2ನೇ ವಾರ್ಡ್‍ನ ಪಕ್ಷೇತರ ಸದಸ್ಯೆ ಶೋಭಾಮರಿ ಹಾಗೂ 8ನೇ ವಾರ್ಡಿನ ಸದಸ್ಯೆ ರತ್ನತಿಮ್ಮಯ್ಯ ಅವರು ಬೇಷರತ್‍ಆಗಿ ಜೆಡಿಎಸ್ ಸೇರಿದರು. ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಈ ಇಬ್ಬರು ಸದಸ್ಯರು ಮೂಲ ಜೆಡಿಎಸ್ ಸದಸ್ಯರಾಗಿದ್ದಾರೆ. ಇದೀಗ ಅವರು ಮತ್ತೇ ಪಕ್ಷಕ್ಕೆ ಹಿಂದಿರುಗಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಎಸ್.ಪಿ.ಸ್ವಾಮಿ, ಸಿ.ಕೆ.ಸ್ವಾಮಿಗೌಡ, ಅಭಿಷೇಕ್, ಜಗದೀಶ್, ನೀಲಕಂಠ,…