ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ
ಮಂಡ್ಯ

ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ

September 6, 2018

ಮದ್ದೂರು:  ಪಟ್ಟಣದ ಪುರ ಸಭೆಯ ಇಬ್ಬರು ಪಕ್ಷೇತರ ಸದಸ್ಯರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸಮ್ಮುಖ ದಲ್ಲಿ ಬುಧವಾರ ಜೆಡಿಎಸ್ ಸೇರ್ಪಡೆ ಗೊಂಡರು. ಪುರಸಭೆ 2ನೇ ವಾರ್ಡ್‍ನ ಪಕ್ಷೇತರ ಸದಸ್ಯೆ ಶೋಭಾಮರಿ ಹಾಗೂ 8ನೇ ವಾರ್ಡಿನ ಸದಸ್ಯೆ ರತ್ನತಿಮ್ಮಯ್ಯ ಅವರು ಬೇಷರತ್‍ಆಗಿ ಜೆಡಿಎಸ್ ಸೇರಿದರು. ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಈ ಇಬ್ಬರು ಸದಸ್ಯರು ಮೂಲ ಜೆಡಿಎಸ್ ಸದಸ್ಯರಾಗಿದ್ದಾರೆ. ಇದೀಗ ಅವರು ಮತ್ತೇ ಪಕ್ಷಕ್ಕೆ ಹಿಂದಿರುಗಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಎಸ್.ಪಿ.ಸ್ವಾಮಿ, ಸಿ.ಕೆ.ಸ್ವಾಮಿಗೌಡ, ಅಭಿಷೇಕ್, ಜಗದೀಶ್, ನೀಲಕಂಠ, ಮಧು, ಆದರ್ಶ ಇದ್ದರು.

Translate »