ಗೂಡ್ಸ್ ವಾಹನ ಅಡ್ಡಗಟ್ಟಿ 1.25ಲಕ್ಷ ದರೋಡೆ
ಮಂಡ್ಯ

ಗೂಡ್ಸ್ ವಾಹನ ಅಡ್ಡಗಟ್ಟಿ 1.25ಲಕ್ಷ ದರೋಡೆ

September 6, 2018

ಶ್ರೀರಂಗಪಟ್ಟಣ: ಬೇಕರಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಕಾರಿನಲ್ಲಿ ಅಡ್ಡಗಟ್ಟಿದ್ದ ಅಪರಿಚಿತ ಯುವಕರ ಗುಂಪು ಮಾರಕಾಸ್ತ್ರ ತೋರಿಸಿ 1.25 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತಾಲೂಕಿನ ಮರಳಗಾಲ ಗ್ರಾಮದ ಸಮೀಪ ಘಟನೆ ನಡೆದಿದ್ದು, ಬೇಕರಿಗಳಿಗೆ ಸಾಮಗ್ರಿ ಪೂರೈಸುತ್ತಿದ್ದ ಮೈಸೂರಿನ ವಿನೋದ್ ರಾಜ್ ಮತ್ತು ರವಿಕುಮಾರ್ ಎಂಬುವರಿಂದ ಅಪರಿಚಿತ ಯುವಕರ ಗುಂಪು ಹಣ ದೋಚಿದ್ದಾರೆ. ನಾಲ್ವರು ಖದೀಮರ ತಂಡ ಗೂಡ್ಸ್ ವಾಹನವನ್ನು ನಂಬರ್ ಪ್ಲೇಟ್ ಇಲ್ಲದ ಶ್ವಿಫ್ಟ್ ಕಾರಿನಲ್ಲಿ ಆಗಮಿಸಿ ಅಡ್ಡಗಟ್ಟಿದ್ದಾರೆ. ಬಳಿಕ ವಾಹನದ ಒಳಗಿದ್ದ ವಿನೋದ್ ರಾಜ್ ಮತ್ತು ರವಿಕುಮಾರ್ ಎಂಬುವರಿಗೆ ತಮ್ಮ ಬಳಿ ಇದ್ದ ಮಾರಕಾಸ್ತ್ರ ತೋರಿ ಬೆದರಿಸಿ ಅವರ ಬಳಿ ಇದ್ದ 1.25 ಲಕ್ಷರೂ ಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪೋಲಿಸರು ತನಿಖೆ ಕೈಗೊಂಡಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »