ನಗುವನಹಳ್ಳಿ ದೇಗುಲಕ್ಕೆ ಬೀಗಮುದ್ರೆ: ಭಕ್ತರ ಆಕ್ರೋಶ
ಮಂಡ್ಯ

ನಗುವನಹಳ್ಳಿ ದೇಗುಲಕ್ಕೆ ಬೀಗಮುದ್ರೆ: ಭಕ್ತರ ಆಕ್ರೋಶ

December 13, 2018

ಶ್ರೀರಂಗಪಟ್ಟಣ: ತಾಲೂಕಿನ ನಗುವನಹಳ್ಳಿ ಗ್ರಾಮದ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ ಎರಡು ತಿಂಗಳಿಂದ ಬಂದ್ ಆಗಿದ್ದು, ಭಕ್ತರಲ್ಲಿ ನಿರಾಸೆ ಮೂಡಿಸಿದೆ.

ಮ್ಯೆಸೂರು ಸಚ್ಚಿದಾನಂದ ಆಶ್ರಮದ ಸುಪರ್ದಿಯಲ್ಲಿರುವ ದೇವಾಲಯವನ್ನು ದಿಢೀರ್ ಮುಚ್ಚಲಾಗಿದೆ. ಇದರಿಂದ ದೇವಾ ಲಯದಲ್ಲಿ ಪೂಜಾ ಕೈಂಕರ್ಯ ಸ್ಥಗಿತ ಗೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣ ವಾಗಿದೆ. ದೇಗುಲ 1972ರಲ್ಲಿ ಮೇಲು ಕೋಟೆ ರಾಮದೇವರ ಮಠದ ನಾರಾಯಣ ಸ್ವಾಮಿ ಎಂಬುವರಿಂದ ಸ್ಥಾಪನೆಯಾಗಿದೆ. ದೇಗುಲ ನಿರ್ಮಾಣಕ್ಕೆ ಸ್ಥಳೀಯರಾದ ಬಸವರಾಜು ಮತ್ತು ಜಯಲಕ್ಷ್ಮಿ ದಂಪತಿ ಅಗತ್ಯ ಸಂಪನ್ಮೂಲ ಒದಗಿಸಿದ್ದು, 8 ಎಕರೆ ಜಮೀನನ್ನು ಉಂಬಳಿಯಾಗಿ ನೀಡಿದ್ದರು.

ನಾಲ್ಕು ದಶಕಗಳ ಕಾಲ ದೇವಾ ಲಯದ ಧಾರ್ಮಿಕ ಕಾರ್ಯಗಳು ಮೇಲು ಕೋಟೆ ವೈದಿಕರಿಂದ ನಡೆಯುತ್ತಿತ್ತು. ಆದರೆ, ಎರಡು ತಿಂಗಳ ಹಿಂದೆ ಜಮೀನನ್ನು ದಿ. ಬಸವರಾಜು ಅವರ ಪತ್ನಿ ಜಯಲಕ್ಷ್ಮಿ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬರೆದುಕೊಟ್ಟಿದ್ದಾರೆ. ಬಳಿಕ, ದೇಗುಲದ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ ಎಂದು ಗ್ರಾಮದ ಮುಖಂಡರಾದ ಎನ್.ಶಿವ ಸ್ವಾಮಿ, ಭಾಸ್ಕರ್, ಕೃಷ್ಣಪ್ಪ ತಿಳಿಸಿದರು.

ದೇವಾಲಯದಲ್ಲಿ ಚಂದನದ ಗೊಂಬೆ, ಬೆಂಕಿಯ ಬಲೆ ಮೊದಲಾದ ಚಲನ ಚಿತ್ರಗಳ ಚಿತ್ರೀಕರಣ ನಡೆದಿದೆ. ನವವಿವಾಹಿತರು ಪ್ರಥಮ ಪೂಜೆ ಸಲ್ಲಿಸುವ ಸಂಪ್ರದಾಯ ವಿದೆ. ಧನುರ್ಮಾಸ, ವೈಕುಂಠ ಏಕಾದಶಿ ಯಂದು ವಿಶೇಷ ಪೂಜೆಗಳು ನಡೆಯುತ್ತಿ ದ್ದವು. ಆದರೆ, ಈ ಬಾರಿ ದೇಗುಲ ಬಂದ್ ಆಗಿರುವುದು ನಿರಾಸೆ ತಂದಿದೆ ಎಂದು ಜಯರಾಮ್ ಬೇಸರ ವ್ಯಕ್ತಪಡಿಸಿದರು.

Translate »