ಅಂಬಿ ಅಭಿಮಾನಿಯ 70,000 ರೂ. ಪಿಕ್‍ಪಾಕೆಟ್
ಮಂಡ್ಯ

ಅಂಬಿ ಅಭಿಮಾನಿಯ 70,000 ರೂ. ಪಿಕ್‍ಪಾಕೆಟ್

November 29, 2018

ಶ್ರೀರಂಗಪಟ್ಟಣ:  ಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ದಿವಂಗತ ನಟ ಅಂಬರೀಶ್ ಅವರ ಅಸ್ಥಿ ವಿಸ ರ್ಜನೆ ನೋಡಲು ಬಂದಿದ್ದ ಅಭಿಮಾನಿಯಿಂದ 70 ಸಾವಿರ ರೂ. ಹಣವನ್ನು ಖದೀಮರು ಬುಧವಾರ ಅಪಹರಿಸಿದ್ದಾರೆ.

ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಿಂದ ಮಹೇಂದ್ರ ಎಂಬುವವರು ಪಶ್ಚಿಮ ವಾಹಿನಿಗೆ ಬಂದಿದ್ದರು. ಮೊದಲೇ ಚಿಲ್ಲರೆ ವ್ಯಾಪಾರಿಯಾಗಿದ್ದ ಅವರ ಜೇಬಿನಲ್ಲಿ ಸುಮಾರು 70 ಸಾವಿರ ರೂ. ಹಣವಿತ್ತು. ಇದರ ಸುಳಿವು ಅರಿತ ಚಾಲಾಕಿ ಕಳ್ಳರು ಅಷ್ಟೂ ಹಣವನ್ನು ಮಹೇಂದ್ರ ಅವರ ಜೇಬಿನಿಂದ ಎಗರಿಸಿದ್ದಾರೆ. ಹಣ ಕಳೆದುಕೊಂಡ ಮಹೇಂದ್ರ ಅವರು ಕಣ್ಣೀರು ಹಾಕುತ್ತಿದ್ದುದು ಕಂಡು ಬಂತು.

Translate »