ಮಂಡ್ಯ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ 8 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಳೆ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟವಾಗಿ ರುವ ಘಟನೆ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಶೀಲಮ್ಮ ಎಂಬುವರ ಒಂದು ಎಕರೆ, ಬಿ.ಸಿ.ರಾಜು ಅವರಿಗೆ ಸೇರಿದ ಒಂದು ಎಕರೆ, ಹನುಮಂತು ಅವರ 30ಗುಂಟೆ, ಶಿವಲಿಂಗ ಅವರ 30ಗುಂಟೆ, ಚೋಟಪ್ಪ ಅವರಿಗೆ ಸೇರಿದ 20 ಗುಂಟೆ, ರಮೇಶ ಅವರಿಗೆ ಸೇರಿದ ಒಂದು ಎಕರೆ ಸೇರಿದಂತೆ ಒಟ್ಟು ಎಂಟು ಎಕರೆಯಲ್ಲಿ ಬೆಳೆಯಲಾದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿ ತ್ತಾದರೂ, ಅಷ್ಟರಲ್ಲಿ ಎಂಟು ಎಕರೆ ಜಮೀನಿ ನಲ್ಲಿ ಬೆಳೆಯಲಾಗಿದ್ದ ಕಬ್ಬು ಸುಟ್ಟುಹೋಗಿದೆ. ಸಾಲ ಮಾಡಿ ಕಬ್ಬು ಬೆಳೆದಿದ್ದ ರೈತರು ಬೆಳೆ ಕೈಗೆ ಬಾರದ ಕಾರಣ ಕಂಗಾಲಾಗಿದ್ದಾರೆ.
ಸುಟ್ಟು ಹೋಗಿರುವ ಕಬ್ಬಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.