ತೊಪ್ಪನಹಳ್ಳಿಯಲ್ಲಿ `ಕೈ’ ನಾಯಕರ ಮನೆಗಳು ಧ್ವಂಸ ಶಾಂತಿ ಕಾಪಾಡುವಂತೆ ಐಜಿಪಿ ಶರತ್‍ಚಂದ್ರ ಮನವಿ
ಮಂಡ್ಯ

ತೊಪ್ಪನಹಳ್ಳಿಯಲ್ಲಿ `ಕೈ’ ನಾಯಕರ ಮನೆಗಳು ಧ್ವಂಸ ಶಾಂತಿ ಕಾಪಾಡುವಂತೆ ಐಜಿಪಿ ಶರತ್‍ಚಂದ್ರ ಮನವಿ

December 26, 2018

ಮದ್ದೂರು: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ಸೋಮ ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಐವರು ಕಾಂಗ್ರೆಸ್ ಕಾರ್ಯಕರ್ತರ ಮನೆಯನ್ನು ಜೆಡಿಎಸ್ ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಕಾಂಗ್ರೆಸ್ ಕಾರ್ಯಕರ್ತರಾದ ಸ್ವಾಮಿ, ಪ್ರಸನ್ನ, ಮುತ್ತೇಶ್, ಕುಮಾರ್, ಪುಟ್ಟಸ್ವಾಮಿ ಅವರ ಮನೆಗಳು ಜೆಡಿಎಸ್ ಕಾರ್ಯ ಕರ್ತರ ಆಕ್ರೋಶಕ್ಕೆ ಬಲಿಯಾಗಿದೆ. ಪ್ರಕಾಶ್ ಕೊಲೆಗೆ ಕಾರಣವಾದವರೆಂದು ಆರೋಪಿಸಿ ಉದ್ರಿಕ್ತರ ಗುಂಪು ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಗೋಡೆ ಹಾಗೂ ಮೇಲ್ಛಾವಣಿಯನ್ನು ಕಿತ್ತು ಹಾಕಿದ್ದಾರೆ. ಕಿಟಕಿ, ಬಾಗಿಲು ಧ್ವಂಸ ಮಾಡಿ, ಮನೆ ಯೊಳಗಿದ್ದ ವಸ್ತುಗಳನ್ನು ನಾಶ ಮಾಡಿ ದ್ದಾರೆ. ತೊಪ್ಪನಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ತೊಪ್ಪನಹಳ್ಳಿ ಬೂದಿ ಮುಚ್ಚಿದ ಕೆಂಡ: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆ ಯಲ್ಲಿ ಮದ್ದೂರು ಸೇರಿದಂತೆ ತೊಪ್ಪನ ಹಳ್ಳಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ತೊಪ್ಪನಹಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪ್ರತಿ ಯೊಂದು ಮನೆಯ ಮುಂದೆಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಮುನ್ನೆ ಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ಯನ್ನು ಸನ್ನದ್ಧವಾಗಿ ಇರಿಸಲಾಗಿದೆ.

ಹಂತಕರ ಪತ್ತೆಗೆ ತಂಡ ರಚನೆ : ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯಿ ಸಿದ್ದು, ಪ್ರಕಾಶ್ ಕೊಲೆ ಸಂಬಂಧ 8 ಮಂದಿ ಮೇಲೆ ಎಫ್‍ಐಆರ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಮಳವಳ್ಳಿ ಡಿವೈ ಎಸ್‍ಪಿ ನೇತೃತ್ವದಲ್ಲಿ 3 ತಂಡ ರಚಿಸಲಾಗಿದೆ. ಕೊಲೆಗೆ ಹಳೆ ದ್ವೇಷವೇ ಕಾರಣವಾಗಿದ್ದು, ಪ್ರಕರಣ ಸಂಬಂಧ ಪ್ರಕಾಶ್ ಅವರ ಪುತ್ರ ಅಭಿಲಾಷ್ ಎಂಬುವವರು 8 ಮಂದಿ ಹೆಸರನ್ನು ಉಲ್ಲೇಖ ಮಾಡಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸನ್ನ, ಸ್ವಾಮಿ, ಮುತ್ತೇಶ, ಶಿವರಾಜು ಯೋಗೇಶ್, ಯೋಗೇಶ್ ಅಲಿಯಾಸ್ ತಮಟೆ ಹೇಮಂತ್ ಮೇಲೆ ಕೇಸು ದಾಖಲಾಗಿದೆ ಎಂದರು.

ಪ್ರಕರಣ ಸಂಬಂಧ ಶೀಘ್ರದಲ್ಲೇ ಆರೋಪಿ ಗಳನ್ನು ಬಂಧಿಸುತ್ತೇವೆ. ಸುತ್ತಮುತ್ತಲಿನ ಸ್ಥಳದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸುತ್ತಿ ದ್ದೇವೆ. ನಮಗೆ ಒಂದಿಷ್ಟು ಕ್ಲೂ ಸಿಕ್ಕಿದೆ. ಎಲ್ಲವನ್ನು ತನಿಖೆಗೆ ಬಳಸಿಕೊಳ್ಳುತ್ತೇವೆ. ತೊಪ್ಪನಹಳ್ಳಿ ಮತ್ತು ಮದ್ದೂರಿನಲ್ಲಿ ಬಂದೋಬಸ್ತ್‍ಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋ ಜಿಸÀಲಾಗಿದೆ. 3 ಮಂದಿ ಎಸ್ಪಿ, 1 ಎಎಸ್‍ಪಿ, 8ಡಿವೈಎಸ್‍ಪಿ, 17 ಸಿಪಿಐ, 37 ಪಿಎಸ್‍ಐ, 96 ಎಎಸ್‍ಐ, 17 ಡಿಆರ್, 12 ಕೆಎಸ್ ಆರ್‍ಪಿ ಸಿಬ್ಬಂದಿಗಳನ್ನು ಮಂಡ್ಯ, ಮೈಸೂರು, ಹಾಸನ, ರಾಮನಗರ ವಿವಿಧ ಜಿಲ್ಲೆ ಗಳಿಂದ ಕರೆಸಿಕೊಳ್ಳಲಾಗಿದೆ ಎಂದರು. ಯಾವುದೇ ಅಹಿಕರ ಘಟನೆ ನಡೆಯ ದಂತೆ ನೋಡಿಕೊಳ್ಳುತ್ತೇವೆ ಎಂದರು.

ಐಜಿ ಭೇಟಿ, ಆರೋಪಿಗಳ ಗಡಿಪಾರಿಗೆ ಮುಖಂಡರ ಆಗ್ರಹ: ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಸೋಮವಾರ ರಾತ್ರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.

ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಈಗಾಗಲೇ ಇದಕ್ಕಾಗಿ ಹಲವು ತಂಡಗಳನ್ನು ರಚಿಸ ಲಾಗಿದೆ ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಮದ್ದೂರಿನ ಜನರು ಮತ್ತು ಜೆಡಿಎಸ್ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗದೇ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

Translate »