ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್

December 26, 2018

ಮಂಡ್ಯ, ಮದ್ದೂರು, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗ ಪಟ್ಟಣ, ಮಳವಳ್ಳಿ ಸೇರಿದಂತೆ ಜಿಲ್ಲಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ಮಂಡ್ಯ ನಗರದಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು. ನಗರದ ಚರ್ಚ್‍ಗಳು ಸೋಮವಾರ ರಾತ್ರಿಯಿಂದಲೇ ಬಣ್ಣ ಬಣ್ಣಗಳಿಂದ ಸಿಂಗಾರಗೊಂಡು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್‍ಗಳ ಮುಂಭಾಗದಲ್ಲಿ ಕ್ರಿಸ್‍ಮಸ್ ಟ್ರೀ, ಗೋದಲಿಗಳು ಜನಮನ ಸೆಳೆಯುತ್ತಿ ದ್ದವು. ನಗರದ ಸೇಂಟ್ ಜಾನ್ಸ್, ಗುಡ್ ಶಫರ್ಡ್, ಸಾಡೆ ಸ್ಮಾರಕ ಚರ್ಚ್‍ಗಳಲ್ಲಿ ಕ್ರಿಸ್‍ಮಸ್ ಅಂಗವಾಗಿ 5 ದಿನಗಳ ಕಾಲ ವಿವಿಧ ಧಾರ್ಮಿಕÀ ಕಾರ್ಯಕ್ರಮಗಳು ನಡೆಯ ಲಿವೆ. ಇಂದು ಬೆಳಿಗ್ಗೆ 9.30ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ ಮಸ್‍ಗೆ ಚಾಲನೆ ನೀಡಲಾಯಿತು. ಮನೆ ಮತ್ತು ಚರ್ಚ್‍ಗಳಲ್ಲಿ ಹಬ್ಬದ ವಾತಾ ವರಣ ತುಂಬಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು ಹಾಡು ಹೇಳಿ, ಸಿಹಿ ತಿಂಡಿ ಮಾಡಿ ಹಬ್ಬ ಆಚರಿಸಿದರೆ, ಕೆಲವರ ಮನೆ ಯಲ್ಲಿ ಕ್ರಿಸ್ತನ ಜನ್ಮ ವೃತ್ತಾಂತವನ್ನು ಗೊಂಬೆಗಳ ಮೂಲಕ ರೂಪಿಸಿದ್ದರು.

ಸಮಾಜದ ಬಾಂಧವರು ಎಲ್ಲರ ಮನೆಯ ಹತ್ತಿರದ ಚರ್ಚ್‍ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕ್ಯಾಂಡಲ್ ಹಚ್ಚಿ ಭಕ್ತಿಯಿಂದ ಪ್ರಾರ್ಥಿಸಿದರು. ಅಲ್ಲಿದ್ದ ಸ್ನೇಹಿತರು-ಬಂಧುಗಳೊಂದಿಗೆ ಶುಭಾಶಯ ಹಂಚಿಕೊಳ್ಳುತ್ತಿದ್ದು ಕಂಡು ಬಂತು.

ಪ್ರತಿದಿನ ಸಂಜೆ 6ರಿಂದ 9ರವರೆಗೆ ಮಕ್ಕಳಿಂದ ಯೇಸುವಿನ ಜನನ ಸಾರುವ ನೃತ್ಯ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಶೇಷ ವಾಗಿ 5 ದಿನಗಳ ಕಾಲ ಸಂಜೆ 7ರಿಂದ ರಾತ್ರಿ 11ರವರೆಗೆ ಕ್ರೈಸ್ತರ ಮನೆಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಪಾಂಡವಪುರ: ಪಟ್ಟಣದ ಸ್ವರ್ಗಾರೋಹಣ ಮಾತೆ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಕ್ರಿಸ್‍ಮಸ್ ಆಚರಿಸಿದರು.
ಧರ್ಮಗುರು ಫಾದರ್ ಟಿ.ವಿನ್ಸಂಟ್ ನೇತೃತ್ವದಲ್ಲಿ ಮೈಸೂರು ಧರ್ಮ ಕ್ಷೇತ್ರದ ನಿವೃತ್ತ ಬಿಷಪ್ ಡಾ.ಥಾಮಸ್ ಅಂಥೋಣಿ ವಾಳಪಳ್ಳಿ ದೇಶದ ಒಳಿತಿಗಾಗಿ, ಕ್ಷೇಮಕ್ಕಾಗಿ ಪ್ರಾರ್ಥಿಸಿ, ಮನುಕುಲದ ರಕ್ಷಣೆಗಾಗಿ ಧರೆಗಿ ಳಿದು ಬಂದ ದೇವ ಮಾನವರಾಗಿ ಜನಿಸಿದ ಈ ದಿನ ಕ್ರಿಸ್‍ಮಸ್ ಹಬ್ಬವು ಸಕಲ ಜನರಿಗೆ ಶುಭವುಂಟಾಲಿ ಎಂದು ಹಾರೈಸಿದರು.

ಮೈಸೂರು ಗುರುಮಠದ ಮಠಾಧಿಪತಿ ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ಪ್ರಾರ್ಥನೆ ಸಲ್ಲಿಸಿ ದಿವ್ಯ ಬಲಿಪೂಜೆ ಅರ್ಪಿಸಿದರು. ಭಕ್ತಾದಿಗಳು ಜಾತಿ ಮತ ಭೇದವಿಲ್ಲದೆ ಚರ್ಚ್‍ಗೆ ಆಗಮಿಸಿ ಆಕರ್ಷಕವಾಗಿ ನಿರ್ಮಿ ಸಿದ್ದ ಸುಂದರ ಗೋದಲಿಯಲ್ಲಿದ್ದ ಬಾಲ ಯೇಸುವಿನ ಪ್ರತಿಮೆಗೆ ಹೂ ಅರ್ಪಿಸಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥನೆ ಸಲ್ಲಿಸಿದರು.

Translate »