ಬೇಬಿಬೆಟ್ಟ ಸುತ್ತಮುತ್ತ ನಡೆಯುತ್ತಿದ್ದ ಕಲ್ಲು ಕ್ವಾರೆಗಳನ್ನು ಆರಂಭಿಸುವಂತೆ ತಾಲೂಕಿನ ನಾರ್ಥ್‍ಬ್ಯಾಂಕ್‍ನಲ್ಲಿ ನಡೆದ ಕ್ರಷರ್ ಮಾಲೀಕರು, ಕೂಲಿಕಾರ್ಮಿಕರ ಬೃಹತ್ ಬಹಿರಂಗ ಸಭೆ ಹಿನ್ನೆಲೆಯಲ್ಲಿ ತಾಲೂಕಿನ ಚಿನಕುರಳಿ ಗ್ರಾಮಸ್ಥರು ಮಂಗಳವಾರ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಸಭೆಗೆ ಆಗಮಿಸಿದರು. ಅಲ್ಲದೇ ಚಿನಕುರಳಿ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು ಬೈಕ್ ರ್ಯಾಲಿಯಲ್ಲಿ ಕೆ.ಬೆಟ್ಟಹಳ್ಳಿ, ಎಲೆಕೆರೆ ಹ್ಯಾಂಡ್ ಪೋಸ್ಟ್, ಹರವು, ಅರಳಕುಪ್ಪೆ, ಕಟ್ಟೇರಿಯ ಮೂಲಕ ನಾರ್ಥ್‍ಬ್ಯಾಂಕ್‍ಗೆ ಆಗಮಿಸಿದರು. ಅಲ್ಲಿಂದ ಎಲ್ಲರೂ ಕಾಲ್ನಡಿಗೆ ಮೂಲಕ ಕೆಆರ್‍ಎಸ್‍ಗೆ ಹೊರಟು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮತ್ತೆ ವೇದಿಕೆಗೆ ಆಗಮಿಸಿದರು.