ಮುಖ್ಯಮಂತ್ರಿ ಉಪ ಕಾರ್ಯದರ್ಶಿ ಶಿಫಾರಸು ಮೂಲಕ ಬಿಡಿಎ  ಸೈಟ್ ಕೊಡಿಸುವುದಾಗಿ 5 ಲಕ್ಷ ವಂಚನೆ
ಮೈಸೂರು

ಮುಖ್ಯಮಂತ್ರಿ ಉಪ ಕಾರ್ಯದರ್ಶಿ ಶಿಫಾರಸು ಮೂಲಕ ಬಿಡಿಎ ಸೈಟ್ ಕೊಡಿಸುವುದಾಗಿ 5 ಲಕ್ಷ ವಂಚನೆ

March 3, 2019

ಮದ್ದೂರು: ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯವರ ನಕಲಿ ಲೆಟರ್ ಹೆಡ್ ಬಳಸಿ, ಬಿಡಿಎಯಿಂದ ನಿವೇಶನ ಮಂಜೂರು ಮಾಡಿ ಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ದಂಪತಿಗೆ 5 ಲಕ್ಷ ರೂ. ವಂಚಿ ಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಮಾಸ್ತ ಟಿ.ಎಲ್. ನಂಜುಂಡಸ್ವಾಮಿ ಮತ್ತು ಅವರ ಪತ್ನಿ ಟಿ.ಎಂ.ಗಿರಿಜಾ ಅವರನ್ನು ತಾಲೂಕಿನ ಮಲ್ಲನ ಕುಪ್ಪೆ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಮಂಜು ನಾಥ ನಗರದಲ್ಲಿ ವಾಸವಾಗಿರುವ ಎಂ. ರಾಮಚಂದ್ರೇ ಗೌಡ ಎಂಬಾತ ವಂಚಿಸಿದ್ದಾನೆ ಎಂದು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ವಿವರ: ಮಲ್ಲನಕುಪ್ಪೆ ಮೂಲದವನಾದ ರಾಮ ಚಂದ್ರೇಗೌಡ ಬೆಳೆ ಸಾಲ ಪಡೆಯಲೆಂದು ಕೆಸ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದಾಗ ಅಲ್ಲಿನ ಗುಮಾಸ್ತ ನಂಜುಂಡಸ್ವಾಮಿ ಅವರನ್ನು ಪರಿಚಯ ಮಾಡಿಕೊಂಡು ತನಗೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಪರಿಚಯವಿದ್ದು, ಮುಖ್ಯಮಂತ್ರಿ ಗಳ ವಿವೇಚನಾ ಕೋಟಾದಡಿ ಬಿಡಿಎ ನಿವೇಶನ ಕೊಡಿ ಸುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಮಾತಿನ ಮಲ್ಲ ನಾದ ರಾಮಚಂದ್ರೇಗೌಡನ ಮಾತಿಗೆ ಮರುಳಾದ ನಂಜುಂಡಸ್ವಾಮಿ ಅವರು ತಮ್ಮ ಪತ್ನಿ ಗಿರಿಜಾ ಅವರ ಹೆಸರಿನಲ್ಲಿ ಬಿಡಿಎ ನಿವೇಶನ ಪಡೆಯಲು ಮುಂದಾಗಿದ್ದಾರೆ. ಜ.8ರಂದು ಗಿರಿಜಾ ಅವರ ಹೆಸರಿನಲ್ಲಿ ನಿವೇಶನಕ್ಕಾಗಿ ಅರ್ಜಿ ಬರೆಸಿಕೊಂಡು ಹೋಗಿದ್ದ ನಂಜುಂಡಸ್ವಾಮಿ, ಜ.13ರಂದು ಕರೆ ಮಾಡಿ ಗಿರಿಜ ಅವರಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ 26ಘಿ40 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿರುವುದಾಗಿಯೂ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ತರುವಂತೆ ತಿಳಿಸಿದ್ದಾನೆ. ನಂಜುಂಡಸ್ವಾಮಿ ಮತ್ತು ಗಿರಿಜ ದಂಪತಿ ಬೆಂಗಳೂರಿಗೆ ತೆರಳಿ, ಆತನಿಗೆ ಈ ದಾಖಲೆಗಳನ್ನು ನೀಡಿದಾಗ ಆತ ಉಲ್ಲಾಳ ಉಪ ನಗರದ ವಿಶ್ವೇಶ್ವರಯ್ಯ ಬಡಾವಣೆಯ ಬಿಡಿಎ ನಿವೇಶನ ಸಂಖ್ಯೆ 140/1 ಅನ್ನು ದಂಪತಿಗೆ ತೋರಿಸಿ ಇದೇ ನಿವೇಶನ ನಿಮಗೆ ಮಂಜೂರಾಗಿದೆ ಎಂದು ತಿಳಿಸಿದನಲ್ಲದೇ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯವರ ಲೆಟರ್ ಹೆಡ್ ಇರುವ ನಕಲಿ ಶಿಫಾರಸು ಪತ್ರವನ್ನೂ ಅವರಿಗೆ ತೋರಿಸಿದ್ದಾನೆ. ನಂತರ ಜ.16ರಂದು ಕೆಸ್ತೂರಿಗೆ ಬಂದ ರಾಮ ಚಂದ್ರೇಗೌಡ, ನಿವೇಶನಕ್ಕಾಗಿ ತಾನೇ 4,22,830 ರೂ.ಗಳನ್ನು ಪಾವತಿಸಿರುವುದಾಗಿ ತಿಳಿಸಿ ಬಿಡಿಎನ ನಕಲಿ ಚಲನ್ ಹಾಗೂ ಹಣ ಪಾವತಿ ರಶೀದಿಯನ್ನು ತೋರಿಸಿ ನಂಜುಂಡಸ್ವಾಮಿ ಯವರಿಂದ 2 ಲಕ್ಷ ರೂ.ಗಳ ಚೆಕ್ ಪಡೆದಿದ್ದಾನೆ. ಜ.21ರಂದು ಮತ್ತೆ 3 ಲಕ್ಷ ರೂ. ನಗದಾಗಿ ಪಡೆದಿದ್ದಾನೆ. ಮತ್ತೆ ಫೆ.14ರಂದು ನಂಜುಂಡಸ್ವಾಮಿಯವರಿಗೆ ಕರೆ ಮಾಡಿದ ಆತ, ನಿಮ್ಮ ನಿವೇಶನ ನೋಂದಣಿ ಪ್ರಕ್ರಿಯೆ ಮಾಡಬೇಕಾಗಿದ್ದು, ನೋಂದಣಿ ಶುಲ್ಕವಾಗಿ 84,811 ರೂ. ತಾನೇ ಪಾವತಿಸಿರು ವುದಾಗಿ ನಕಲಿ ಚಲನ್ ಅನ್ನು ವಾಟ್ಸಪ್ ಮೂಲಕ ರವಾನಿಸಿ ಬೆಂಗಳೂರಿಗೆ ಹಣ ನೀಡು ವಂತೆ ಹೇಳಿದ್ದಾನೆ. ಇಷ್ಟು ತ್ವರಿತಗತಿಯಲ್ಲಿ ಬಿಡಿಎ ನಿವೇಶನ ನೋಂದಣಿ ಆಗುತ್ತದೆಯೇ? ಎಂಬುದರ ಬಗ್ಗೆ ಅನುಮಾನಪಟ್ಟ ನಂಜುಂಡ ಸ್ವಾಮಿ ಬಿಡಿಎ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ರಾಮಚಂದ್ರೇ ಗೌಡ ನೀಡಿದ್ದ ಚಲನ್ ಹಾಗೂ ರಶೀದಿಗಳನ್ನು ತೋರಿಸಿದಾಗ ಅವೆಲ್ಲವೂ ನಕಲಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಮಚಂದ್ರೇ ಗೌಡನಿಗೆ ಕರೆ ಮಾಡಿ ಕೇಳಿದರೆ ಮೊದಲಿಗೆ ಆತ ಎಲ್ಲವೂ ಅಸಲಿ ಚಲನ್ ಮತ್ತು ರಶೀದಿ ಎಂದು ವಾದಿಸಿದ್ದನಲ್ಲದೇ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದಾನೆ. ಈ ಸಂಬಂಧ ಆತನ ಮಂಜುನಾಥನಗರ ನಿವಾಸಕ್ಕೆ ತೆರಳಿದಾಗ ಆತನ ಪತ್ನಿಯು ನಂಜುಂಡಸ್ವಾಮಿ ದಂಪತಿ ಮೇಲೆ ಜಗಳ ಮಾಡಿದ್ದಲ್ಲದೇ, ಈ ದಂಪತಿಯೇ ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಅಲ್ಲದೇ ರೌಡಿಗಳ ಮೂಲಕ ನಂಜುಂಡಸ್ವಾಮಿ ಯವರಿಗೆ ರಾಮ ಚಂದ್ರೇಗೌಡ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Translate »