ವಿಂಗ್ ಕಮಾಂಡರ್ ಅಭಿನಂದನ್ ಯೋಗಕ್ಷೇಮ ವಿಚಾರಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಮೈಸೂರು

ವಿಂಗ್ ಕಮಾಂಡರ್ ಅಭಿನಂದನ್ ಯೋಗಕ್ಷೇಮ ವಿಚಾರಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

March 3, 2019

ನವದೆಹಲಿ: ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತ ಮಾನ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲೇ ಅಭಿನಂದನ್ ಜೊತೆ ಮಾತನಾಡಿದ ಸಚಿವೆ, ಅಭಿ ನಂದನ್ ಪಾಕ್ ಸೇನೆಯ ವಶದಲ್ಲಿದ್ದಾಗ ಏನಾಯಿತು ಎಂಬುದರ ಬಗ್ಗೆ ವಿಚಾರಿಸಿದರು. ಪಾಕಿಸ್ತಾನದಲ್ಲಿ ನಿಮ್ಮನ್ನು ಹೇಗೆ ನಡೆಸಿಕೊಳ್ಳಲಾಯಿತು. ಅಲ್ಲಿನ ಪರಿಸ್ಥಿತಿ ಹೇಗಿದೆ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಈ ವೇಳೆ ಸಚಿವರು `ನಿಮ್ಮ ಬಗ್ಗೆ ದೇಶದ ಜನರು ಹೆಮ್ಮೆ ಪಡುತ್ತಿ ದ್ದಾರೆ. ನೀವು ಕೆಚ್ಚೆದೆಯಿಂದ ಕಾರ್ಯನಿರ್ವ ಹಿಸಿದ್ದೀರಿ’ ಎಂದು ಅಭಿನಂದನ್ ಅವರನ್ನು ಪ್ರಶಂಸಿ ಸಿದರು ಎಂದು ಹೇಳಲಾಗಿದೆ. ರಕ್ಷಣಾ ಸಚಿವರು ಕೆಲ ನಿಮಿಷಗಳು ಮಾತ್ರ ಅಭಿನಂದನ್ ಜೊತೆ ಮಾತನಾಡಿದರು. ನಂತರ ಆಸ್ಪತ್ರೆಯಲ್ಲೇ ಇದ್ದ ಅಭಿನಂದನ್ ತಂದೆ ವರ್ತಮಾನ್ ಮತ್ತು ತಾಯಿ ಜೊತೆ ಮಾತನಾಡಿ, ಕುಶಲೋಪರಿ ವಿಚಾರಿಸಿದರು.

ನಿನ್ನೆ ರಾತ್ರಿ 9.30ರಲ್ಲಿ ಪಾಕ್ ಸೇನೆಯಿಂದ ಬಿಡು ಗಡೆ ಹೊಂದಿ ಭಾರತ ಪ್ರವೇಶಿಸಿದ ಅಭಿನಂದನ್ ಅವರನ್ನು ರಾತ್ರಿ ಸುಮಾರು 11.30ರ ವೇಳೆಗೆ ನವದೆಹಲಿಯ ಸೇನಾ ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಹಲವಾರು ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಇನ್ನೂ 2-3 ದಿನ ವೈದ್ಯಕೀಯ ತಪಾಸಣೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ. ಅದೇ ವೇಳೆ ಭಾರತದ ಬೇಹುಗಾರಿಕಾ ಸಂಸ್ಥೆ `ರಾ’ ಮತ್ತು ವಾಯುಪಡೆ ಅಧಿಕಾರಿಗಳು ಅಭಿನಂದನ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅವರು ವಾಯು ಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿದ್ದಾರೆ ಎಂದು ವೈದ್ಯರು ದೃಢಿ ೀಕರಿಸಿದ ನಂತರ ಅವರನ್ನು ಮತ್ತೆ ಸೇವೆಗೆ ಬಳಸಿ ಕೊಳ್ಳಲಾಗುತ್ತದೆ. ವೈರಿ ಪಡೆಗೆ ಸಿಕ್ಕಿಬಿದ್ದು ಬಿಡುಗಡೆ ಹೊಂದಿದ ಸೇನೆಯ ಅಧಿಕಾರಿ ಅಥವಾ ಯೋಧರನ್ನು ಸೇನೆಗೆ ಸೇರಿದ ವಿವಿಧ ವಿಭಾಗಗಳಿಂದ ವಿಚಾರಣೆಗೊಳಪಡಿ ಸುವುದು ಹಾಗೂ ಹಲವಾರು ವೈದ್ಯ ಕೀಯ ತಪಾಸಣೆಗಳನ್ನು ನಡೆಸುವುದು ಸೇನೆಯ ಮಾಮೂಲಿ ಪ್ರಕ್ರಿಯೆಯಾಗಿದೆ.

Translate »