2020ರಲ್ಲಿ ವೈಯಕ್ತಿಕ ತೆರಿಗೆ ದರ ಕಡಿತ
ಮೈಸೂರು

2020ರಲ್ಲಿ ವೈಯಕ್ತಿಕ ತೆರಿಗೆ ದರ ಕಡಿತ

December 9, 2019

ನವದೆಹಲಿ: ದೇಶದ ಆರ್ಥಿಕತೆಯ ಪ್ರಗತಿಯನ್ನು ಗಮನ ದಲ್ಲಿರಿಸಿಕೊಂಡು 2020ರ ವೇಳೆಗೆ ವೈಯಕ್ತಿಕ ತೆರಿಗೆ ದರ ದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆ ಯಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

17ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದಕ್ಕಾಗಿ ಬಜೆಟ್ ಗಾಗಿ ಕಾಯಬೇಕಾಗುತ್ತದೆ ಎಂದರು. 2021ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ತೆರಿಗೆ ಅವಧಿಯನ್ನು ಸರಳೀಕರಣಗೊಳಿಸಿ ಅದನ್ನು ಶೋಷಣೆರಹಿತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳ ಲಿದೆ ಎಂದರು. ದೇಶದ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೆಲ ವಲಯಗಳಿಗೆ ಸೀಮಿತವಾಗಿದ್ದು, ಈಗಾಗಲೇ ಕೆಲ ವಲಯಗಳಲ್ಲಿ ಸುಧಾರಣೆ ಕಾಣುತ್ತಿದೆ. ಇನ್ನು ಕೆಲ ವಲಯಗಳಿಗೆ ನೆರವಿನ ಅಗತ್ಯವಿದೆ ಎಂದರು. ಜುಲೈ- ಸೆಪ್ಟೆಂಬರ್ ನಲ್ಲಿ ದೇಶದ ಆರ್ಥಿಕ ಪ್ರಗತಿ ಶೇ.4.5ಕ್ಕಿಳಿದಿದ್ದು, ಇದು ಕಳೆದ 6 ವರ್ಷಗಳಲ್ಲಿ ಅತಿ ಕಡಿಮೆ ಜಿಡಿಪಿಯಾಗಿದೆ.

Translate »