ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಲತಾ ಮಂಗೇಶ್ಕರ್
ಮೈಸೂರು

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಲತಾ ಮಂಗೇಶ್ಕರ್

December 9, 2019

ನವದೆಹಲಿ: ನ್ಯೂಮೋನಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಾಲಿವುಡ್ ಖ್ಯಾತ ಗಾಯಕಿ ಲತಾ ಮಂಗೇ ಶ್ಕರ್ ಅವರು ಭಾನುವಾರ ಆಸ್ಪತ್ರೆ ಯಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಕಳೆದ 28 ದಿನಗಳಿಂದ ದೆಹಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಅವರು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಸಿರಾಟದ ತೊಂದರೆ ಯಿಂದ ಬಳಲುತ್ತಿದ್ದು ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡ ಲಾಗಿತ್ತು. ಲತಾ ಮಂಗೇಶ್ಕರ್ ಅವರು ಹಿಂದಿ ಸೇರಿದಂತೆ 36ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ.

Translate »