2008ರಲ್ಲೇ `ಕ್ರಮ’ ಕೈಗೊಂಡಿದ್ದರೆ ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲ
ಮೈಸೂರು

2008ರಲ್ಲೇ `ಕ್ರಮ’ ಕೈಗೊಂಡಿದ್ದರೆ ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲ

March 7, 2019

ಮೈಸೂರು: 2008ರಲ್ಲಿ ಮುಂಬೈ ಮೇಲೆ ದಾಳಿಯಾ ದಾಗಲೇ ಅಂದು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೆ ಇಂದು ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲವೇನೋ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧ ವಾರ ಆಯೋಜಿಸಿದ್ದ `ಪ್ರಬುದ್ಧರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ನಂತರ ಪುಲ್ವಾಮಾ ದಾಳಿ ಮಾತ್ರ ಆಗಿದೆ. ಬೇರೆ ಭಯೋತ್ಪಾದಕ ದಾಳಿಗಳು ಆಗಿರಲಿಲ್ಲ. ಮುಂಬೈ ದಾಳಿ ಯಾದಾಗ ಅಂದಿನ ಸರ್ಕಾರ ಕ್ರಮ ತೆಗೆದು ಕೊಂಡಿದ್ದರೆ ಇಂದು ಇಂತಹ ಪರಿಸ್ಥಿತಿ ಬರು ತ್ತಿರಲಿಲ್ಲ. ಇಂದು ಭಯೋತ್ಪಾದನೆ ಬೃಹ ತ್ತಾಗಿ ಬೆಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ನಡೆದ ಕೆಲವೇ ದಿನ ಗಳಲ್ಲಿ ಕಾರ್ಯಾಚರಣೆ ಕೈಗೊಂಡು ಉಗ್ರ ರಿಗೆ ತಕ್ಕ ಉತ್ತರ ನೀಡಿದ್ದೇವೆ. ಇದು ಉಗ್ರ ರನ್ನು ಗುರಿಯಾಗಿಸಿ ನಡೆಸಿದ ದಾಳಿಯೇ ಹೊರತು ಸೇನಾ ಕಾರ್ಯಾಚರಣೆ ಅಲ್ಲ. ಉಗ್ರರು ಮತ್ತೆ ದಾಳಿ ಮಾಡಬಾರದೆಂದು ಎಚ್ಚರಿಕೆ ನೀಡಲು ಕೈಗೊಂಡ ಕಾರ್ಯಾ ಚರಣೆ. ಇಂತಹ ಕ್ರಮ 2008ರಲ್ಲೇ ಆಗ ಬೇಕಿತ್ತು. ಆದರೆ, ಆಗಲಿಲ್ಲ. ಆ ಕಠಿಣ ನಿರ್ಧಾರ ಗಳನ್ನು ಇಂದು ನರೇಂದ್ರ ಮೋದಿ ನೇತೃ ತ್ವದ ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.

2014ರ ನಂತರ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದಿಂದ ಬಾಂಧವ್ಯ ವೃದ್ಧಿಸಿದ್ದು, ಅಂತಾರಾಷ್ಟ್ರೀಯ ಸಂಬಂಧ ಬಲಗೊಂಡಿದೆ. ಮೋದಿಯಂತಹ ಉತ್ತಮ ನಾಯಕ ಇದ್ದುದ್ದರಿಂದಲೇ ಪುಲ್ವಾಮಾ ದಾಳಿ ನಡೆದ ಕೆಲವೇ ದಿನದಲ್ಲಿ ವೈಮಾ ನಿಕ ದಾಳಿ ಮಾಡಲಾಗಿದೆ. ಇದನ್ನು ಪ್ರತಿ ಯೊಂದು ರಾಷ್ಟ್ರವು ಶ್ಲಾಘಿಸಿದೆ ಎಂದರು.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ದೇಶ ಸುರಕ್ಷಿತವಾಗಿದ್ದು, ಮೊದಲಿಗಿಂತಲೂ ಬಹಳ ಬಲಿಷ್ಠ ಮತ್ತು ಸಮರ್ಥವಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಮುಂದಿನ ದಿನಗಳಲ್ಲಿ ಪಾಕಿ ಸ್ತಾನ ದುಸ್ಸಾಹಸಕ್ಕೆ ಕೈ ಹಾಕಿದರೆ ತಕ್ಕ ಉತ್ತರ ನೀಡಲು ಸಿದ್ಧವೆಂದು ಈಗಾಗಲೇ ಭೂ ಸೇನಾಪಡೆ, ವಾಯು ಪಡೆ ಹಾಗೂ ನೌಕಪಡೆಗಳು ಎಚ್ಚರಿಸಿವೆ ಎಂದರು.

ಸಂವಾದ: `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾ ದಕ ಕೆ.ಬಿ.ಗಣಪತಿ ಮಾತನಾಡಿ, ಭಾರತದಲ್ಲಿ ವಾಸಿಸುತ್ತಿರುವ ಕೆಲವರು ಪಾಕಿಸ್ತಾನ ಪರ ವಕಾಲತ್ತು ವಹಿಸಿ ಮಾತನಾಡುತ್ತಿದ್ದಾರೆ. ಇದು ನೋವುಂಟು ಮಾಡುವ ವಿಷಯ. ನನ್ನ ಪ್ರಶ್ನೆ ಏನೆಂದರೆ, ಈ ದೇಶ ದಲ್ಲಿ ಫಿಫ್ತ್ ಕಾಲಂ (ಯುದ್ಧ ಕಾಲದಲ್ಲಿ ಶತ್ರುವಿನ ಪರ ಕೆಲಸ ಮಾಡುವ ಗುಂಪು) ಅನ್ನುವುದು ಇದೆಯಾ?. ಇದ್ದರೆ, ಅದನ್ನು ಗುರುತಿಸಲು ಸರ್ಕಾರ ಏನಾದರೂ ಪ್ರಯತ್ನ ಮಾಡಿದೆಯಾ. ಒಂದೊಮ್ಮೆ ಮಾಡಿದ್ದರೆ, ಈ ನೆಲದ ಕಾನೂನಿನಂತೆ ಕ್ರಮ ಕೈಗೊಳ್ಳ ಲಾಗುತ್ತದೆಯೆ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾ ರಾಮನ್, ಈ ಸಂಬಂಧ ಸಾರ್ವಜನಿಕವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದನ್ನು ಸರ್ಕಾರ ಮತ್ತು ಸೇನೆ ನಿರ್ಧರಿಸುತ್ತದೆ. ಒಟ್ಟಾರೆ ದೇಶದ ಭದ್ರತಾ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಪವನ್ ರಂಗ ಮಾತನಾಡಿ, ನಾವು ಡಿಫೆನ್ಸ್‍ಗೆ ಸಂಬಂಧಿಸಿದಂತೆ ಕಂಪೆನಿ ಮಾಡು ತ್ತಿದ್ದು, ಸರ್ಕಾರ ಸಹಾಯ ಹಸ್ತ ನೀಡ ಬೇಕು ಎಂಬ ಪ್ರಶ್ನೆಗೆ ನಿರ್ಮಲಾ ಸೀತಾ ರಾಮನ್ ಪ್ರತಿಕ್ರಿಯಿಸಿ, ನಮ್ಮ ರಕ್ಷಣಾ ಖಾತೆ ಯಲ್ಲಿ ಇದಕ್ಕೆಲ್ಲಾ ಹಣ ಮೀಸಲಿಟ್ಟಿಲ್ಲ, ಒಂದು ವೇಳೆ ಉತ್ತಮ ಕೆಲಸ ಮಾಡಿ ದರೆ ಡಿಫೆನ್ಸ್ ಸಂಸ್ಥೆ ಅಧಿಕಾರಿಗಳನ್ನೇ ನಿಮ್ಮೊಂದಿಗೆ ಕೆಲಸ ಮಾಡಲು ಕಳುಹಿಸ ಲಾಗುವುದು ಎಂದು ಉತ್ತರಿಸಿದರು.

ಕೌಟಿಲ್ಯ ವಿದ್ಯಾಲಯದ ಪ್ರಾಚಾರ್ಯ ರಾದ ಸವಿತಾ, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಶಿಕ್ಷಣ ಇಲಾಖೆಗೆ ನಿಯುಕ್ತಿ ಗೊಳಿಸಿದರೆ ಅವರಿಂದ ಶಿಕ್ಷಣಕ್ಕೆ ಸಂಬಂ ಧಿಸಿದ ಯಾವುದೇ ಯೋಜನೆ ಮತ್ತು ಸುಧಾರಣೆಯನ್ನು ನಿರೀಕ್ಷಿಸುವುದು ಸಾಧ್ಯ ವಿಲ್ಲ. ಇದರ ಬದಲು ಶಿಕ್ಷಣಕ್ಕೆ ಸಂಬಂಧಿ ಸಿದಂತೆ ಇದೇ ರೀತಿಯ ಒಂದು ರಾಷ್ಟ್ರೀಯ ಸೇವಾ ಸಿಬ್ಬಂದಿಯನ್ನು ವ್ಯವಸ್ಥೆ ಮಾಡುವ ಅನಿವಾರ್ಯತೆ ಇದೆ ಅಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾ ರಾಮನ್, ಹೌದು. ಇದೊಂದು ಉತ್ತಮ ಸಲಹೆ ಎಂದರು.
8 ವರ್ಷಗಳಿಂದ ಮೈಸೂರು ಲ್ಯಾನ್ಸ್ ಡೌನ್ ಕಟ್ಟಡವನ್ನು ದುರಸ್ತಿಗೊಳಿಸಿಲ್ಲ. ಇದಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿದೆ ಎಂಬ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಅವರ ಪ್ರಶ್ನೆಗೆ ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯಿಸಿ, ಕಟ್ಟಡ ದುರಸ್ತಿಗೆ ಕೈ ಹಾಕಿದರೆ 50 ಕೋಟಿ ರೂ. ಸಹ ಸಾಲು ವುದಿಲ್ಲ. ಇದರಲ್ಲಿ ಲಾಬಿ ನಡೆಯುತ್ತಿದೆ. ಇದನ್ನು ದುರಸ್ತಿಗೊಳಿಸುವ ಬದಲಾಗಿ ಹೊಸ ದಾಗಿ ಕಟ್ಟಿ ಹೆಚ್ಚಿನ ವರ್ತಕರಿಗೆ ಅವಕಾಶ ಕಲ್ಪಿಸಿಕೊಡಬಹುದು. ಆದರೆ, ಕೆಲವು ರಾಜ ಕಾರಣಿಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿ ದ್ದಾರೆ. ಅದನ್ನು ನಿಲ್ಲಿಸಬೇಕು ಎಂದರು.

ಇದಕ್ಕೆ ಪರಿಹಾರವೇನು ಎಂದು ಮರು ಪ್ರಶ್ನಿಸಿದಾಗ, ಕೇಂದ್ರದಲ್ಲಿ ಹೇಗೆ ನರೇಂದ್ರ ಮೋದಿ ಅವರ ಸರ್ಕಾರ ಇದೆಯೋ ಹಾಗೆಯೇ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬರಬೇಕು ಎಂದರು. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಲೇಖಕ ಎಸ್.ಎಲ್.ಭೈರಪ್ಪ, ಮುಖಂಡರಾದ ಹೆಚ್.ವಿ. ರಾಜೀವ್ ಇತರರು ಉಪಸ್ಥಿತರಿದ್ದರು.

Translate »