ಮೈಸೂರು ದೇಶದ ಮೂರನೇ ಸ್ವಚ್ಛ ನಗರ
ಮೈಸೂರು

ಮೈಸೂರು ದೇಶದ ಮೂರನೇ ಸ್ವಚ್ಛ ನಗರ

March 7, 2019

ಮೈಸೂರು: ಸತತ ಎರಡು ಬಾರಿ ‘ದೇಶದ ನಂ.1 ಸ್ವಚ್ಛ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.

ಇಂದು ಮಧ್ಯಾಹ್ನ ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಸರ್ವೇಕ್ಷಣ್-2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂದೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಛತ್ತೀಸ್‍ಗಢದ ಅಂಬಿಕಾಪುರ ಎರಡನೇ ಸ್ಥಾನದಲ್ಲಿದೆ. ಒಟ್ಟು 5000 ಅಂಕಗಳಲ್ಲಿ ಮೈಸೂರು 4,379 ಅಂಕ ಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಳೆದ ವರ್ಷ ಅಂದರೆ 2017-18ನೇ ಸಾಲಿನಲ್ಲಿ ನಡೆಸಿದ ಸ್ವಚ್ಛತಾ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿ ದಿದ್ದ ಮೈಸೂರು ನಗರ, 2017ರಲ್ಲಿ ಐದನೇ ಸ್ಥಾನ ಪಡೆದುಕೊಂಡಿತ್ತು. ಅದಕ್ಕೂ ಮೊದಲು 2014 ಮತ್ತು 2015ರಲ್ಲಿ ಸತತ ಎರಡು ಬಾರಿ ಭಾರತದ ಮೊದಲನೇ ಸ್ವಚ್ಛ ನಗರ ಪ್ರಶಸ್ತಿ ಪಡೆದುಕೊಂಡಿತ್ತು.
ಈ ವರ್ಷವೂ ಮಧ್ಯಪ್ರದೇಶ 3 ವಿಭಾಗ ಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇಂದೋರ್ ನಗರ ಭಾರತದ ಮೊದ ಲನೇ ಸ್ವಚ್ಛ ನಗರ ಪ್ರಶಸ್ತಿ ಪಡೆದುಕೊಂಡಿ ದ್ದರೆ, ಭೂಪಾಲ್ ನಗರ ಭಾರತದ ಸ್ವಚ್ಛ ರಾಜಧಾನಿ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದೆ. ಉಜ್ಜಯಿನಿ ನಗರವು (3 ಲಕ್ಷ ದಿಂದ 10 ಲಕ್ಷ ಜನಸಂಖ್ಯೆ ವಿಭಾಗದಲ್ಲಿ) ಸ್ವಚ್ಛ ನಗರ ಪ್ರಶಸ್ತಿ ಪಡೆದುಕೊಂಡಿದೆ.

ಬುಧವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು `ಸ್ವಚ್ಛ ಭಾರತ್ ಮಿಷನ್-ನಗರ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಈ ವೇಳೆ ವಸತಿ ಮತ್ತು ನಗರ ವ್ಯವ ಹಾರಗಳ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಹಾಜರಿದ್ದರು.

ಉಳಿದಂತೆ: ಮಧ್ಯಪ್ರದೇಶದ ರಾಜ ಧಾನಿ ಭೂಪಾಲ್ ಸ್ವಚ್ಛ ರಾಜಧಾನಿ ಪ್ರಶಸ್ತಿ ಯನ್ನು 2019ರ ಸರ್ವೆಯಲ್ಲಿ ಪಡೆದು ಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. 1 ಲಕ್ಷ ಜನಸಂಖ್ಯೆಯ ಅತ್ಯಂತ ಸ್ವಚ್ಛ ದಕ್ಷಿಣ ವಲಯದ ನಗರಗಳಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ `ಪ್ರಥಮ ಸ್ಥಾನ’ ಪಡೆದುಕೊಂಡಿದ್ದರೆ, ಕೃಷ್ಣರಾಜನಗರ 3ನೇ ಸ್ಥಾನ ಪಡೆದು ಕೊಂಡಿದೆ. 50 ಸಾವಿರದಿಂದ 1 ಲಕ್ಷ ದವರೆಗಿನ ನಗರಗಳಲ್ಲಿ ಅತ್ಯುತ್ತಮವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡಿದ ದಕ್ಷಿಣ ವಲಯದ ನಗರಗಳಲ್ಲಿ ಹುಣ ಸೂರು ಪ್ರಶಸ್ತಿ ಪಡೆದುಕೊಂಡಿದೆ.

25 ಸಾವಿರದಿಂದ 50 ಸಾವಿರ ಜನ ಸಂಖ್ಯೆಯ ಪಟ್ಟಣಗಳ ದಕ್ಷಿಣ ವಲಯದ ಅತ್ಯಂತ ಸ್ವಚ್ಛ ಪಟ್ಟಣವಾಗಿ ರಾಜ್ಯದ ಹೊಸದುರ್ಗ, 25 ಸಾವಿರ ಜನಸಂಖ್ಯೆ ಯುಳ್ಳ ಪಟ್ಟಣಗಳಲ್ಲಿ ತಿ.ನರಸೀಪುರ, ಮುಲ್ಕಿ ಪುರಸ್ಕಾರಕ್ಕೆ ಪಾತ್ರವಾಗಿವೆ. ಪ್ರತಿ ವರ್ಷ, ದೇಶದ ನಗರಗಳು ಮತ್ತು ಪಟ್ಟಣ ಗಳಿಗೆ ಅವುಗಳ ಸ್ವಚ್ಛತೆ ಮತ್ತು ಸ್ಯಾನಿ ಟೇಷನ್ ಡ್ರೈವ್ ಆಧಾರದ ಮೇಲೆ 2014 ರಲ್ಲಿ ಚಾಲನೆಗೊಂಡ `ಸ್ವಚ್ಛ ಭಾರತ್ ಅಭಿಯಾನ’ದ ಅಂಗವಾಗಿ `ಸ್ವಚ್ಛ ನಗರ’ ಪ್ರಶಸ್ತಿಯನ್ನು ನೀಡಲಾಗು ತ್ತಿದೆ. 2017ರ ಮೇ 4ರಂದು ಕೇಂದ್ರ ಸರ್ಕಾರ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 2019ರ ಸರ್ವೆ ಕಾರ್ಯದಲ್ಲಿ 64 ಲಕ್ಷ ನಾಗರಿಕರು ಭಾಗವಹಿಸಿದ್ದರೆ, 4000 ನಗರಗಳು ಸರ್ವೆ ಕಾರ್ಯದಲ್ಲಿ ಭಾಗಿ ಯಾಗಿದ್ದವು. ಸ್ವಚ್ಛ ಸರ್ವೇಕ್ಷಣ್ ಸರ್ವೆ ಕಾರ್ಯ ಕಳೆದ ಜನವರಿ 31 ರಂದು ಮುಕ್ತಾಯಗೊಂಡಿತ್ತು.

Translate »