ಮೈಸೂರಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಸಂಭ್ರಮ
ಮೈಸೂರು

ಮೈಸೂರಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಸಂಭ್ರಮ

March 7, 2019

ಮೈಸೂರು: ಅಲ್ಲಿ ಮಹಿಳೆಯರದ್ದೇ ಕಾರುಬಾರು. ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ನೃತ್ಯ, ರಂಗೋಲಿ ಸೇರಿದಂತೆ ತಮ್ಮಲ್ಲಿರುವ ವಿವಿಧ ಪ್ರತಿಭೆ ಅನಾವರಣ ಮಾಡಿ, ಸಂಭ್ರಮಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧ ವಾರ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ-2019 ಸಂದರ್ಭದಲ್ಲಿ ಮಹಿಳೆಯರು, ಯುವತಿಯರು ಹಾಡಿ, ಕುಣಿದು, ನಾಟಕ ಪ್ರದರ್ಶಿಸಿ, ಚಿತ್ರ ಬರೆದು ರಂಗೋಲಿ ಹಾಕಿ ಸಂಭ್ರಮಿಸಿದರು. ಮಹಿಳಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭಾನ್ವಿತ ಮಹಿಳೆಯರು, ಯುವತಿ ಯರು ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಜಿ.ಪಂ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಉದ್ಘಾ ಟಿಸಿ, ಔದ್ಯೋಗಿಕ ಜವಾಬ್ದಾರಿಯೊಂದಿಗೆ ಸಂಸಾರವನ್ನು ಸುಂದರವನ್ನಾಗಿಸುವ ಹೊಣೆ ಗಾರಿಕೆ ಮಹಿಳೆಯರದ್ದಾಗಿದೆ. ಯಾವುದೇ ಸಂದರ್ಭ ಎದುರಾದರೂ ಶಾಂತಿಯುತ ವಾಗಿ ನಿಭಾಯಿಸುವ ಗುಣ ಮಹಿಳೆಯರ ಲ್ಲಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರ ಗಳಲ್ಲೂ ಸಾಧನೆ ಮಾಡುತ್ತಿರುವ ಮಹಿಳೆ ಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮಹಿಳೆ ಯರ ಮೇಲೇ ದೌರ್ಜನ್ಯ ನಡೆಯುತ್ತಿ ರುವುದು ವಿಷಾದನೀಯ. ಮಕ್ಕಳ ಶಿಕ್ಷಣ ಕೊಡಿಸಿ, ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ಮಹಿಳೆಯರದ್ದೇ ಆಗಿರು ವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಗೌರವಿಸ ಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅನುರಾಧ ಮಾತ ನಾಡಿ, ಮಹಿಳೆಯರಿಗೆ ಎಲ್ಲಿ ಗೌರವ ಸಿಗು ತ್ತದೋ ಅಲ್ಲಿ ದೇವರು ನೆಲೆಸುತ್ತಾರೆ ಎಂಬ ಮಾತಿದೆ. ಅದರಂತೆ ಮಹಿಳೆಯರನ್ನು ಗೌರವಿಸುವ ಸಂಪ್ರದಾಯ ಗಟ್ಟಿಗೊಳ್ಳ ಬೇಕು. ರಾಜಕೀಯ, ಉದ್ಯೋಗ ಸೇರಿ ದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಯರು ಉತ್ತಮ ಸಾಧನೆ ಮಾಡುತ್ತಿರು ವುದು ಒಳ್ಳೆ ಬೆಳವಣಿಗೆ. ಪುರುಷ ಪ್ರದಾನ ಸಮಾಜವಾಗಿರುವ ಹಿನ್ನೆಲೆಯಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆ ಯುತ್ತಿದೆ. ಮಹಿಳೆಯರು ಅಬಲೆ ಎಂಬ ಭಾವನೆ ತೊಡೆದು ಹಾಕಬೇಕು. ಶಿಕ್ಷಣ ಪಡೆದಾಗ ಮಾತ್ರ ಮನಸ್ಥಿತಿ ಬದಲಾ ಯಿಸಬಹುದು. ಈ ನಿಟ್ಟಿನಲ್ಲಿ ಮಹಿಳೆ ಯರು ಕೌಶಲ್ಯಾಭಿವೃದ್ಧಿ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪುರುಷ ರಿಗೆ ಸರಿಸಮನಾಗಿ ಮಹಿಳೆಯರಿಗೆ ಅವ ಕಾಶ ನೀಡಲಾಗುತ್ತಿದೆ. ಮಹಿಳೆಯರಿಗೆ ವಿಶೇಷ ಸ್ಥಾನಮಾನ ದೊರೆಯುತ್ತಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ ಗಮನಾರ್ಹ. ಈಗಾಗಲೇ ಜಯ ಲಲಿತ, ಶೀಲಾದೀಕ್ಷಿತ್, ಉಮಾ ಭಾರತಿ, ಮಮತಾ ಬ್ಯಾನರ್ಜಿ ಸೇರಿದಂತೆ ಇನ್ನಿತ ರರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವುದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಧಾನ್ಯತೆಯನ್ನು ತೋರ್ಪ ಡಿಸುತ್ತದೆ. ಪ್ರಸ್ತುತ ದೇಶ ರಕ್ಷಣೆಯನ್ನು ಓರ್ವ ದಿಟ್ಟ ಮಹಿಳೆ ನಿಭಾಯಿಸುತ್ತಿ ದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಹಿಳೆ ಯರನ್ನು ಸಶಕ್ತರನ್ನಾಗಿ ಮಾಡುವುದಕ್ಕೆ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ರಕ್ಷಣಾ ಇಲಾಖೆ ಜವಾಬ್ದಾರಿಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿ ದ್ದಾರೆ. ಇದು ಮಹಿಳೆಯರು ಹೆಮ್ಮೆ ಪಡುವ ಸಂಗತಿ. ಇತ್ತೀಚೆಗೆ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಭಾರತೀಯ ಮಹಿಳಾ ಪೈಲಟ್‍ವೊಬ್ಬರು ಶತ್ರು ದೇಶದಲ್ಲಿ ಅಡಗಿ ಕುಳಿತಿದ್ದ ಭಯೋ ತ್ಫಾದಕರ ಮೇಲೆ ಬಾಂಬ್ ಹಾಕಿ ಸುರಕ್ಷಿತ ವಾಗಿ ಹಿಂದಿರುಗಿ ಬಂದಿರುವುದು ಹೆಮ್ಮೆ ಪಡುವ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಕೆ. ಜ್ಯೋತಿ, ಮಹಿಳಾ ಕಲಾವಿದರ ಸಂಘದ ಅಧ್ಯಕ್ಷೆ ವಸಂತಕೃಷ್ಣ, ಉಪಾಧ್ಯಕ್ಷೆ ಶಾಂತ ದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಉಪಸ್ಥಿತರಿದ್ದರು. ಇದೇ ವೇಳೆ ಮಹಿಳೆಯ ರಿಗೆ ರಂಗೋಲಿ ಸ್ಪರ್ಧೆ, ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹಿರಿಯ ಕಲಾವಿದೆ ರಾಮೇಶ್ವರಿ ವರ್ಮಾ ಅವರು `ಆಧುನಿಕ ಸಮಾಜ ಮತ್ತು ಮಹಿಳೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಧ್ಯಾಹ್ನ ಮಹಿಳಾ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆ-ಒಲವು ನಿಲುವುಗಳು ಕುರಿತು ವಿಚಾರ ಸಂಕಿರಣ ನಡೆಯಿತು. ಸಂಜೆ ಮಹಿಳಾ ಕವಿಗೋಷ್ಠಿ ನಡೆದರೆ, ಕಿಂದರ ಜೋಗಿ ಆವರಣದಲ್ಲಿ ದೇಸಿ ಆಟೋಟ ಗಳಲ್ಲಿ ಮಹಿಳೆಯರು ಮಿಂದೆದ್ದರು. ಬೆಳಿಗ್ಗೆ ಮಹಾರಾಣಿ ಕಾಲೇಜಿನ ಮುಂಭಾಗದಿಂದ ಮಹಿಳಾ ಕಲಾ ತಂಡಗಳೊಂದಿಗೆ ಕಾಲೇಜು ವಿದ್ಯಾರ್ಥಿನಿಯರು ಕಲಾಮಂದಿರಕ್ಕೆ ಮೆರ ವಣಿಗೆಯಲ್ಲಿ ಆಗಮಿಸಿದರು. ಹೆಚ್.ಡಿ. ಕೋಟೆ ಭಾರತಿ ಮತ್ತು ತಂಡದ ಸದಸ್ಯರು ಬುಡಕಟ್ಟು ಸುಗ್ಗಿ ಕುಣಿತ ಪ್ರದರ್ಶಿಸಿದರೆ, ರಮ್ಯ ತಂಡದ ಸದಸ್ಯರು ಡೊಳ್ಳು ಕುಣಿತ, ಅಭಿಲಾಷ ತಂಡದ ಸದಸ್ಯರು ವೀರಗಾಸೆ ಕುಣಿತ, ಅಮೃತ ತಂಡದ ಸದಸ್ಯರು ನಗಾರಿ ವಾದನ ಪ್ರದರ್ಶಿಸಿ ಗಮನ ಸೆಳೆದರು.

Translate »