ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್
ಮೈಸೂರು

ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್

March 3, 2019

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 2019-20ನೇ ಸಾಲಿಗೆ 2.6 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ.

ಪ್ರಸಕ್ತ ಸಾಲಿನಲ್ಲಿ 40, 587 ಲಕ್ಷ ರೂ ಆದಾಯ ನಿರೀಕ್ಷಿಸಿ, 40,320.97 ಲಕ್ಷ ರೂ. ಗಳ ವೆಚ್ಚ ಭರಿಸಲು ಉದ್ದೇಶಿಸಿರುವ ಪ್ರಾಧಿ ಕಾರವು 266.03 ಲಕ್ಷ ರೂ.ಗಳ ಉಳಿ ತಾಯದ ಆಯ-ವ್ಯಯವನ್ನು ಮಂಡಿಸಿದೆ.

ಮುಡಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಆಯುಕ್ತ ಪಿ.ಎಸ್. ಕಾಂತರಾಜು ಅವರು 2019-20ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.

ಆದಾಯದ ಮೂಲಗಳು: ಹೊಸ ಬಡಾ ವಣೆಗಳ ನಿರ್ಮಾಣ ಮಾಡಿ ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಹಂಚುವ ಮೂಲ ಉದ್ದೇಶ ಹೊಂದಿರುವ ಮುಡಾ ಹಲವು ಅಭಿವೃದ್ಧಿ ಯೋಜನೆಗಳಿಂದ ಪ್ರಸಕ್ತ ಸಾಲಿನಲ್ಲಿ 40,587 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಿದೆ. ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜಿನಿಂದ 20,00 ಲಕ್ಷ ರೂ. ಒವೈಹೆಚ್‍ಎಸ್ ಮನೆಗಳ ಕಂತಿನ ಬಾಕಿ 3.1 ಕೋಟಿ ರೂ. ಬಿಡಿ ಮನೆಗಳ ಹರಾಜಿನಿಂದ 2 ಕೋಟಿ ರೂ., ಸಿಎ ನಿವೇ ಶನಗಳ ಬಾಕಿ 5 ಕೋಟಿ ರೂ., ಸಿಎ ನಿವೇ ಶನಗಳ ಹಂಚಿಕೊಂಡ 200 ಕೋಟಿ ರೂ., ಖಾಸಗಿ ಬಡಾವಣೆಗಳ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಶುಲ್ಕದಿಂದ 6 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ನಕ್ಷೆ ಅನುಮೋದನೆ ಶುಲ್ಕದಿಂದ 400 ಕೋಟಿ ರೂ. ವಾಣಿಜ್ಯ ಸಂಕೀರ್ಣ ಮತ್ತು ಮಳಿಗೆಯಿಂದ, ನಿವೇಶನ ಮತ್ತು ಮನೆಗಳ ಕಂದಾಯದಿಂದ, ಕ್ರಯ ಪತ್ರಕ್ಕೆ ದಂಡ ಶುಲ್ಕ ಸೇರಿದಂತೆ ಇನ್ನಿತರ ಮೂಲಗಳಿಂದ 12,525 ಲಕ್ಷ ರೂ.ಗಳು ಸಂಗ್ರಹವಾಗ ಬಹುದೆಂದು ಮುಡಾ ಅಂದಾಜಿಸಿದೆ.

ವೆಚ್ಚದ ಬಾಬ್ತು: ಆರ್.ಟಿ ನಗರ 2ನೇ ಹಂತದ ಸಿವಿಲ್ ಹಾಗೂ ವಿದ್ಯುತ್ ಕಾಮ ಗಾರಿಗಾಗಿ 1,291.49 ಲಕ್ಷ ರೂ, ಮುಡಾ ದಿಂದ ಅಭಿವೃದ್ಧಿಪಡಿಸಿರುವ ಬಡಾವಣೆ ಗಳಲ್ಲಿ ಹಂಚಿಕೆಯಾಗದಿರುವ 9,508 ನಿವೇ ಶನಗಳ ಇಸಿ ಪಡೆಯಲು 9.30 ಲಕ್ಷ ರೂ. ಗಳನ್ನು ವ್ಯಯ ಮಾಡಲಾಗುತ್ತಿದೆ.

ಪ್ರಾಧಿಕಾರದ ಆಸ್ತಿಗಳಿಗೆ ತಂತಿ ಬೇಲಿ ಹಾಕಿಸಲು 2 ಕೋಟಿ ರೂ., ಮುಡಾ ವ್ಯಾಪ್ತಿಯ 15 ಗ್ರಾಮಗಳಿಗೆ ರಸ್ತೆ, ಒಳ ಚರಂಡಿ, ಒದಗಿಸಲು 7.78 ಕೋಟಿ ರೂ., ವಿಜಯನಗರ 4ನೇ ಹಂತ, ವಸಂತ ನಗರ, ಲಾಲ್‍ಬಹದ್ದೂರ್ ಶಾಸ್ತ್ರಿ ನಗರ, ಶಾಂತವೇರಿ ಗೋಪಾಲಗೌಡ ನಗರ, ಲಲಿತಾದ್ರಿನಗರ, ದೇವನೂರು 3ನೇ ಹಂತ ಬಡಾವಣೆಗಳಿಗೆ ಕುಡಿಯುವ ನೀರು. ಒಳ ಚರಂಡಿ ಹಾಗೂ ವಿದ್ಯುತ್ ನಿರ್ವಹಣೆಗಾಗಿ 2 ಕೋಟಿ ರೂ.ಗಳನ್ನು ಕಾಯ್ದಿರಿಸಲಾ ಗಿದೆ. ಹಳೆ ಉಂಡವಾಡಿ ನೀರು ಸರಬ ರಾಜು ಯೋಜನೆಗೆ ಪ್ರಾಧಿಕಾರದಿಂದ ಪಾವ ತಿಸಲುದ್ದೇಶಿಸಿರುವ 7500 ಲಕ್ಷ ರೂ. ಗಳ ಪೈಕಿ ಪ್ರಸಕ್ತ ಸಾಲಿನಲ್ಲಿ 2.500 ಲಕ್ಷ ರೂ.ಗಳನ್ನು ಮೀಸಲಿರಿಸಿದ ಮುಡಾ, ವಿವಿಧ ಬಡಾವಣೆಗಳಿಗೆ ಸ್ವಾಧೀನ ಮಾಡಿ ಕೊಳ್ಳಲು ಪರಿಹಾರಕ್ಕಾಗಿ 10,000 ಲಕ್ಷ ರೂ. ಕಾಯ್ದಿರಿಸಿದೆ. ಮಹಾ ಯೋಜನೆ ಪರಿಷ್ಕರಣೆಗೆ 2 ಕೋಟಿ ರೂ., ಮೈಸೂರು ನಗರದ ವಿವಿಧ ಬಡಾವಣೆಗಳ 14 ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 15 ಕೋಟಿ ರೂ., ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ 50 ಲಕ್ಷ ರೂ, ಮುಡಾ ಕಚೆÉೀ ರಿಯ 3ನೇ ಮಹಡಿ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಮುಡಾ ಸದಸ್ಯರಾದ ಸಂದೇಶ ನಾಗರಾಜ್, ಮರಿ ತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಬಿ.ಹರ್ಷ ವರ್ಧನ, ಆರ್.ಧರ್ಮಸೇನಾ, ಎಸ್‍ಬಿಎಂ ಮಂಜು, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಮುಡಾ ನಗರ ಯೋಜನಾ ಸದಸ್ಯ ಬಿ.ಎನ್. ಗಿರೀಶ, ಸೂಪರಿಂಟೆಂಡಿಂಗ್ ಇಂಜಿನಿ ಯರ್ ಬಿ.ಕೆ.ಸುರೇಶಬಾಬು, ಚೆಸ್ಕಾಂ ಸೂಪ ರಿಂಟೆಂಡಿಂಗ್ ಇಂಜಿನಿಯರ್ ಕೆ.ಎಂ. ಮುನಿಗೋಪಾಲರಾಜು, ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಎನ್. ಪ್ರಸನ್ನಮೂರ್ತಿ, ಮುಡಾ ಕಾರ್ಯದರ್ಶಿ ರವೀಂದ್ರ ಎಲ್ಲಪ್ಪ, ಎಕ್ಸಿಕ್ಯೂಟಿವ್ ಇಂಜಿನಿ ಯರ್ ಪ್ರಭಾಕರ್, ಮುಖ್ಯ ಲೆಕ್ಕಾಧಿಕಾರಿ ಎನ್.ಮುತ್ತು ಹಾಗೂ ಇತರ ಅಧಿಕಾರಿ ಗಳು ಸಭೆಯಲ್ಲಿ ಹಾಜರಿದ್ದರು.

ಕೆ.ಜಿ.ಕೊಪ್ಪಲು ಬಳಿ ರೈಲ್ವೆ ಸೇತುವೆಗೆ ಮ್ಯಾಜಿಕ್ ಬಾಕ್ಸ್, ಇನ್ನೂ 3 ಹೈಟೆಕ್ ಸ್ಮಶಾನಮುಡಾದ ಹಲವು ಹೊಸ ಯೋಜನೆಗಳು
ಮೈಸೂರು: ಪ್ರಸಕ್ತ ಸಾಲಿನಲ್ಲಿ ಮೈಸೂರು ನಗರದ ಅಭಿವೃದ್ಧಿ ಗಾಗಿ ಮುಡಾ ಹಲವು ಹೊಸ ಯೋಜನೆಗಳಿಗೆ ಬಜೆಟ್‍ನಲ್ಲಿ ಹಣ ಕಾಯ್ದಿರಿಸಿದೆ.

ಮ್ಯಾಜಿಕ್ ಬಾಕ್ಸ್: ವಾಹನ ದಟ್ಟಣೆ ನಿಯಂತ್ರಿಸಿ ಸಂಚಾರ ಸುಗಮಗೊಳಿಸಲು ಕನ್ನೇಗೌಡನ ಕೊಪ್ಪಲು ಬಳಿ ಇರುವ ರೈಲ್ವೆ ಕೆಳಸೇತುವೆಗೆ ಆಧುನಿಕ ತಂತ್ರಜ್ಞಾನದ ಮ್ಯಾಜಿಕ್ ಬಾಕ್ಸ್ ಅಳವಡಿಸಲು ಪ್ರಾಧಿಕಾರವು 2 ಕೋಟಿ ರೂ. ಅನುದಾನ ಒದಗಿಸಿದೆ. 3 ಹೈಟೆಕ್ ಸ್ಮಶಾನ: ಮೈಸೂರಿನ ಚಾಮರಾಜ, ಕೆ.ಆರ್ ಹಾಗೂ ಎನ್.ಆರ್ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ವಿಜಯನಗರ 4ನೇ ಹಂತದ ಮಾದರಿಯಲ್ಲಿ ಹೈಟೆಕ್ ಸ್ಮಶಾನಗಳನ್ನು ನಿರ್ಮಿಸಲು 3 ಕೋಟಿ ರೂ.ಗಳನ್ನು ಮುಡಾ ಮೀಸಲಿರಿಸಿದೆ.

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ: ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ಮತ್ತು ಅನಿಕೇತನ ರಸ್ತೆ ಸೇರುವ ಡಾ.ಶಿವಕುಮಾರ ಸ್ವಾಮೀಜಿ ಸರ್ಕಲ್ ಅನ್ನು ಅಗಲೀಕರಿಸಿ, ಅಭಿವೃದ್ಧಿಪಡಿಸಲು 50 ಲಕ್ಷ ರೂ. ಒದಗಿಸಲಾಗಿದೆ.
ಆನ್‍ಲೈನ್ ತಂತ್ರಾಂಶ: ಆಸ್ತಿ ತೆರಿಗೆ, ವರ್ಗಾವಣೆ, ಖಾತೆ, ಕಟ್ಟಡ ನಕ್ಷೆ, ಬಡಾವಣೆ ಅನುಮೋದನೆ, ಭೂ ಉಪಯೋಗ ಬದಲಾವಣೆ, ರಸ್ತೆ ತುಂಡರಿಸಲು ಅನುಮತಿ ಸೇರಿದಂತೆ ವಿವಿಧ ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸಲು ಮುಂದಾಗಿರುವ ಮುಡಾ, ತಂತ್ರಾಂಶ ಅಳವಡಿಸಲು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 25 ಲಕ್ಷ ರೂ., ಏಕಗವಾಕ್ಷಿ ಯೋಜನೆಗೆ 25 ಲಕ್ಷ ರೂ.ಗಳನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿರಿಸಿದೆ.

ಮಾರುಕಟ್ಟೆ ಸಂಕೀರ್ಣಗಳು: ವಿಜಯನಗರ 4ನೇ ಹಂತದ ಬಸವನಹಳ್ಳಿ ಮುಖ್ಯರಸ್ತೆ, 2ನೇ ಹಂತದ ಕೃಷಿಕ ಭವನದ ಎದುರು, ಹೆಬ್ಬಾಳು 1ನೇ ಹಂತದ ಎಸ್‍ಬಿಐ ಬಳಿ, ಯಾದವಗಿರಿ, ರಣಜಿತ್ ಟಾಕೀಸ್ ಎದುರು ಸೇರಿದಂತೆ ಮೈಸೂರಿನ ವಿವಿಧೆಡೆ 5 ಕೋಟಿ ರೂ. ವೆಚ್ಚದಲ್ಲಿ ಮೂರು ವಾಣಿಜ್ಯ ಸಮುಚ್ಚಯ ನಿರ್ಮಿಸಲು ಮುಡಾ ಮುಂದಾಗಿದೆ.

ಕೆಳಸೇತುವೆ: ಐಶ್ವರ್ಯ ಪೆಟ್ರೋಲ್ ಬಂಕ್‍ನಿಂದ ವಿಜಯನಗರ 4ನೇ ಹಂತ ಬಡಾವಣೆ ಸಂಪರ್ಕ ಕಲ್ಪಿಸುವ ರಸ್ತೆಯ ರಿಂಗ್ ರೋಡ್ ಜಂಕ್ಷನ್‍ನಲ್ಲಿ 9 ಕೋಟಿ ರೂ. ವೆಚ್ಚದ ಸಬ್‍ವೇ ನಿರ್ಮಿಸಲುದ್ದೇಶಿಸಿದ್ದು, ಸದರಿ ಯೋಜನೆಗೆ ಮುಡಾ 3 ಕೋಟಿ ರೂ. ಅನುದಾನ ಕಾಯ್ದಿರಿಸಿದೆ. ಪೆರಿಫೆರಲ್ ರಿಂಗ್ ರಸ್ತೆ: ಪ್ರಸ್ತುತ ರಿಂಗ್ ರಸ್ತೆಯಿಂದ 5 ಕಿ.ಮೀ. ಹೊರಭಾಗದಲ್ಲಿ 105 ಕಿ.ಮೀ. ಪೆರಿಫೆರಲ್ ರಿಂಗ್ ರೋಡ್(ಪರಿಧಿ ವರ್ತುಲ ರಸ್ತೆ) ನಿರ್ಮಿಸುವ ಸಲುವಾಗಿ ರಸ್ತೆ ಸರ್ವೆ ಕಾರ್ಯಕ್ಕೆ 1 ಕೋಟಿ ರೂ. ಹಣ ಕಾಯ್ದಿರಿ ಸಲಾಗಿದೆ. ಗುಂಪು ಮನೆಗಳ ನಿರ್ಮಾಣ: ಮೈಸೂರಿನ ವಿವಿಧೆಡೆ ಮುಡಾ ಬಡಾ ವಣೆಗಳಲ್ಲಿ 209.84 ಕೋಟಿ ರೂ. ವೆಚ್ಚದ ಗುಂಪು ಮನೆಗಳನ್ನು ಖಾಸಗಿ-ಸಾರ್ವ ಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲು ಸರ್ಕಾರ 2013ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಅನು ದಾನವನ್ನು ಕಾಯ್ದಿರಿಸಿದೆ. ವಾಣಿಜ್ಯ ಸಂಕೀರ್ಣಗಳಿಗೆ 3 ಕೋಟಿ ರೂ., ಕೆರೆಗಳ ಅಭಿವೃದ್ಧಿಗೆ 5 ಕೋಟಿ ರೂ., ಉದ್ಯಾನವನಗಳ ಅಭಿವೃದ್ಧಿಗೆ 5 ಕೋಟಿ ರೂ.ಗಳನ್ನು ಮುಡಾ ಒದಗಿಸಿದೆ. ಲಾಲ್‍ಬಹದ್ದೂರ್ ಶಾಸ್ತ್ರಿ ನಗರ, ಶಾಂತವೇರಿ ಗೋಪಾಲಗೌಡ, ಲಲಿತಾದ್ರಿನಗರ 2ನೇ ಹಂತ, ಸ್ವರ್ಣ ಜಯಂತಿ ನಗರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ನಗರಗಳ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಒದಗಿಸಿದೆ.

Translate »