ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಮುಡಾ ಆಯುಕ್ತರ ಮನವಿ
ಮೈಸೂರು

ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಮುಡಾ ಆಯುಕ್ತರ ಮನವಿ

April 20, 2021

ಮೈಸೂರು, ಏ.19- ಕೊರೊನಾ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್ ಮನವಿ ಮಾಡಿ ದ್ದಾರೆ. ಬಡ್ಡಿ ರಹಿತವಾಗಿ 2021-2022ನೇ ಸಾಲಿನ ಕಂದಾಯ ಪಾವತಿಸಲು 2022ರ ಮಾ.31 ರವರೆಗೂ ಕಾಲಾವಕಾಶವಿದೆ. ಆದರೂ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನ ತೆರಿಗೆ ಪಾವತಿಗೆ ಪ್ರಾಧಿಕಾರದ ಕಚೇರಿಗೆ ಬರುತ್ತಿದ್ದಾರೆ. ತೆರಿಗೆ ಪಾವತಿಗೆ ಇನ್ನೂ ಸಾಕಷ್ಟು ಸಮಯಾ ವಕಾಶವಿದೆ. ಅಲ್ಲದೆ ಶೀಘ್ರ ಆನ್‍ಲೈನ್ ಸೇವೆಯೂ ಜಾರಿ ಯಾಗುವುದರಿಂದ ತುರ್ತಾಗಿ ತೆರಿಗೆ ಪಾವತಿಸುವ ಪ್ರಮೇಯವಿಲ್ಲ. ಹಾಗಾಗಿ ಸಾರ್ವಜನಿಕರು ಕಚೇರಿಗೆ ಭೇಟಿ ನೀಡದಿರುವುದು ಒಳ್ಳೆಯದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ತುರ್ತಿದ್ದರೆ ವಾಟ್ಸ್‍ಆಪ್ ಮಾಡಿ: ತುರ್ತು ಕೆಲಸ ಕಾರ್ಯಗಳಿಗೆ ಈ ಪ್ರಾಧಿಕಾರದ ಶಾಖಾ ಮುಖ್ಯಸ್ಥ ರನ್ನು ವಾಟ್ಸ್‍ಆಪ್ ಮೂಲಕ ಸಂಪರ್ಕಿಸಬಹುದು. ನಿವೇಶನ ಶಾಖೆಗೆ ಸಂಬಂಧಿಸಿದ್ದರೆ ಕಾರ್ಯದರ್ಶಿ (ಮೊ.9070311111), ನಗರ ಯೋಜನಾ ಶಾಖೆಗೆ ಸಂಬಂಧಿಸಿದ್ದರೆ ನಗರ ಯೋಜನಾ ಸದಸ್ಯರು (9480339495), ತಾಂತ್ರಿಕ ಶಾಖೆಗೆ ಸಂಬಂಧಿಸಿ ದ್ದರೆ ಅಧೀಕ್ಷಕ ಅಭಿಯಂತರು(9902026545) ಹಾಗೂ ವಿಶೇಷ ಭೂಸ್ವಾಧೀನ ಶಾಖೆಗೆ ಸಂಬಂಧಿಸಿದ್ದರೆ ವಿಶೇಷ ಭೂಸ್ವಾಧೀನಾಧಿಕಾರಿ ವ್ಯವಸ್ಥಾಪಕ (961119 9912)ರಿಗೆ ಅಗತ್ಯ ದಾಖಲಾತಿಗಳೊಂದಿಗೆ ವಾಟ್ಸ್‍ಆಪ್ ಮೂಲಕ ಮನವಿ ಸಲ್ಲಿಸಬಹುದು. ಇದರಿಂದ ಕ್ರಮ ವಾಗದಿದ್ದರೆ ಮಾತ್ರ ಅಧ್ಯಕ್ಷರು ಹಾಗೂ ಆಯುಕ್ತರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Translate »