ಮೈಸೂರು, ಡಿ.8(ಆರ್‍ಕೆ)-ತಮ್ಮ ಆಸ್ತಿ ರಕ್ಷಣೆಗೆ ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೈಸೂರಿನ ಟಿ.ಕೆ.ಬಡಾವಣೆಯ ಸಂಖ್ಯೆ 777ರ 40ಘಿ60 ಅಡಿ ಅಳತೆಯ ಸುಮಾರು 1.70 ಕೋಟಿ ರೂ. ಬೆಲೆಬಾಳುವ ನಿವೇ ಶನವನ್ನು ಒತ್ತುವರಿ ಮಾಡಿ ತಂತಿಬೇಲಿ ಅಳವಡಿಸಲಾಗಿತ್ತು. ಅದೇ ರೀತಿ 12 ಕೋಟಿ ರೂ. ಮೌಲ್ಯದ ದಟ್ಟಗಳ್ಳಿ ಸರ್ವೆ ನಂಬರ್ 114 ಮತ್ತು 115ರಲ್ಲಿ ಪ್ರಾಧಿಕಾರಕ್ಕೆ ಸೇರಿದ 50ಘಿ80 ಅಡಿ ಅಳತೆಯ 3 ನಿವೇ ಶನ ಹಾಗೂ ಟಿ.ಕೆ. ಲೇಔಟ್‍ನ 40ಘಿ60 ಅಡಿ ಅಳತೆಯ 1.70 ಕೋಟಿ ರೂ. ಬೆಲೆ ಬಾಳುವ ನಿವೇಶನವನ್ನು ಇಂದು ಬೆಳಿಗ್ಗೆ ಜೆಸಿಬಿ ಮೂಲಕ ಒತ್ತುವರಿ ತೆರವುಗೊಳಿ ಸಿದ ಮುಡಾ ಅಧಿಕಾರಿಗಳು, ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಮುಡಾ ಆಸ್ತಿ ಫಲಕ ಅಳವಡಿಸಿದ್ದಾರೆ.
ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ, ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ, ವಲಯಾಧಿಕಾರಿ ಕಿರಣ್, ಅಸಿ ಸ್ಟೆಂಟ್ ಇಂಜಿನಿಯರ್ ರವಿಕುಮಾರ ಹಾಗೂ ಸಿಬ್ಬಂದಿ ತೆರವು ಕಾರ್ಯಾ ಚರಣೆ ವೇಳೆ ಹಾಜರಿದ್ದರು.
ಇಂದು ಒಂದೇ ದಿನ 15.40 ಕೋಟಿ ರೂ. ಮೌಲ್ಯದ ಮುಡಾ ಆಸ್ತಿಗಳನ್ನು ರಕ್ಷಿಸಿ ದಂತಾಗಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿ ಮೈಸೂರು ನಗರದಾ ದ್ಯಂತ ಇರುವ ಪ್ರಾಧಿಕಾರದ ಆಸ್ತಿಗಳ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಡಾ.ನಟೇಶ್ ತಿಳಿಸಿದ್ದಾರೆ.