ಇಂದು 263 ನಾಗರಿಕ ಸೌಕರ್ಯ ನಿವೇಶನ ಹಂಚಿಕೆ ಕುರಿತು ಸಂವಾದ
ಮೈಸೂರು

ಇಂದು 263 ನಾಗರಿಕ ಸೌಕರ್ಯ ನಿವೇಶನ ಹಂಚಿಕೆ ಕುರಿತು ಸಂವಾದ

December 22, 2020

ಮೈಸೂರು, ಡಿ.21-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 263 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಜೊತೆ ಡಿ.22ರಂದು ಬೆಳಗ್ಗೆ 11ಗಂಟೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಮುಡಾ ವತಿಯಿಂದ 262 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಪ್ರಕಟಣೆ ಹೊರಡಿಸಲು ಉದ್ದೇಶಿಸ ಲಾಗಿದೆ. ಸಿ.ಎ ನಿವೇಶನ ಪಡೆಯಲು ಉದ್ದೇಶಿಸಿರುವ ನೋಂದಾಯಿತ ವಿದ್ಯಾಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಸ್ಪೋಟ್ರ್ಸ್ ಕ್ಲಬ್‍ಗಳು, ಸಹಕಾರಿ ಕಾಯ್ದೆ 1959-60ರಡಿಯಲ್ಲಿ ನೋಂದಾಯಿತ ಸಂಘ ಸಂಸ್ಥೆಗಳು, ಟ್ರಸ್ಟ್‍ಗಳು, ಎನ್.ಜಿ.ಓ ಮತ್ತು ಇನ್ನಿತರೆ ನೋಂದಾಯಿತ ಸಂಘಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಸೂಕ್ತ ಸಲಹೆಗಳನ್ನು ಪಡೆದು ಹಂಚಿಕೆ ಮಾಡಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ ಮೇಲೆ ವಿವರಿಸಿದ ಎಲ್ಲಾ ಸಂಘ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಬಹುದು.

Translate »