ಮುಡಾದಲ್ಲಿ ಆನ್‍ಲೈನ್ ಮೂಲಕ ಕಂದಾಯ ಪಾವತಿಗೆ ಏ.1ರಿಂದ ಚಾಲನೆ
ಮೈಸೂರು

ಮುಡಾದಲ್ಲಿ ಆನ್‍ಲೈನ್ ಮೂಲಕ ಕಂದಾಯ ಪಾವತಿಗೆ ಏ.1ರಿಂದ ಚಾಲನೆ

March 23, 2021

ಮೈಸೂರು,ಮಾ.22(ಆರ್‍ಕೆ)-ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ) ವ್ಯಾಪ್ತಿಯ ಸ್ವತ್ತುಗಳಿಗೆ ಏಪ್ರಿಲ್ 1ರಿಂದ ಆನ್‍ಲೈನ್ ಮೂಲಕ ಕಂದಾಯ ಪಾವ ತಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸ್ವತ್ತುಗಳ ಮಾಲೀಕರು ಪದೇ ಪದೇ ಕಚೇರಿಗೆ ಭೇಟಿ ನೀಡುವ ತೊಂದರೆ ತಪ್ಪಿಸಲು ಮಾರ್ಚ್ 20 ರಂದು ನಡೆದ ಸಭೆಯಲ್ಲಿ ಆನ್‍ಲೈನ್ ಕಂದಾಯ ಪಾವತಿ ಸೌಲಭ್ಯ ಜಾರಿಗೊಳಿಸಲು ನಿರ್ಧರಿಸಲಾಯಿತು ಎಂದರು.

ಅದಕ್ಕಾಗಿ ತಂತ್ರಾಂಶ ಸಿದ್ದಪಡಿಸಲು ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದು, ಪ್ರಾಧಿ ಕಾರದ ಆಸ್ತಿಗಳ ಕುರಿತ ಅಗತ್ಯ ಮಾಹಿತಿಗಳನ್ನು ಈ ಸಂಸ್ಥೆಗೆ ಒದಗಿಸಲಾಗಿದೆ ಎಂದ ಅವರು, ಮೊದಲ ಹಂತ ವಾಗಿ ಏ.1ರಿಂದ ಆನ್‍ಲೈನ್ ಮೂಲಕ ಕಂದಾಯ ಪಾವ ತಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಆ ಮೂಲಕ ಮುಡಾ ವ್ಯಾಪ್ತಿಯ 1 ಲಕ್ಷ ಸ್ವತ್ತುಗಳು ಆನ್‍ಲೈನ್ ವ್ಯಾಪ್ತಿಗೆ ಬರಲಿದ್ದು, ಸಾರ್ವಜನಿಕರು, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ರಾಜೀವ್ ಅವರು ತಿಳಿಸಿದ್ದಾರೆ.

ಸಿಆರ್ ಬದಲು ವಾಸಯೋಗ್ಯ ದೃಢೀಕರಣ ಪತ್ರ
ಸಣ್ಣಪುಟ್ಟ ನಿಯಮ ಉಲ್ಲಂಘನೆಯಾಗಿರುವುದರಿಂದ ಕಟ್ಟಡ ಪೂರ್ಣಗೊಂಡ ವರದಿ(ಅಖ) ನೀಡುತ್ತಿಲ್ಲವಾದ್ದ ರಿಂದ ಬ್ಯಾಂಕುಗಳಲ್ಲಿ ಸಾಲದ ಕಂತು ಹಣ ಬಿಡುಗಡೆ ಮಾಡದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿರುವುದರಿಂದ ಅಂತಹ ಕಟ್ಟಡಗಳಿಗೆ ಶೇ.100 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಿಕೊಂಡು ಸಿಆರ್ ಬದಲಾಗಿ ‘ವಾಸಯೋಗ್ಯ ದೃಢೀಕರಣ ಪತ್ರ’ ನೀಡಲು ಮುಡಾ ಸಭೆ ನಿರ್ಧರಿಸಿದೆ ಎಂದು ತಿಳಿಸಿದರು.
ಈ ಪತ್ರವು ಸಿಆರ್‍ಗೆ ಪರ್ಯಾಯವಲ್ಲವಾದರೂ ನಕ್ಷೆ ಉಲ್ಲಂಘನೆ ಎಂಬ ಕಾರಣಕ್ಕೆ ಸಿ.ಆರ್. ಕೊಡದಿ ರುವುದರಿಂದ ಕಟ್ಟಡದ ಮಾಲೀಕರಿಗೆ ಹಲವು ರೀತಿ ಯಲ್ಲಿ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಸಭೆಯು ಈ ನಿರ್ಣಯ ಕೈಗೊಂಡಿದೆ ಎಂದರು.
ಈ ಪತ್ರವು ಬ್ಯಾಂಕ್ ಸಾಲ ಸೌಲಭ್ಯಕ್ಕೆ ಅನುಕೂಲ ವಾಗುವುದಲ್ಲದೆ, ಹೆಚ್ಚುವರಿ ದಂಡ ಶುಲ್ಕದೊಂದಿಗೆ ಕಂದಾಯ ಪಾವತಿಸಲು ಅವಕಾಶ ಕಲ್ಪಿಸುತ್ತದೆ ಎಂದೂ ತಿಳಿಸಿದರು.

ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ
ಮುಡಾ ಅಭಿವೃದ್ಧಿಪಡಿಸಿರುವ ಹಾಗೂ ಮುಡಾದಿಂದ ಅನುಮೋದನೆಗೊಂಡಿರುವ ಬಡಾವಣೆಗಳಲ್ಲಿ ಸರ್ಕಾ ರಕ್ಕೆ ಅಗತ್ಯವಿಲ್ಲದ ಭೂಬಂಧಿತ ಸರ್ಕಾರಿ ಖರಾಬು ಭೂಮಿಯನ್ನು ಏಕಕಾಲ(oಟಿe ಣime) ಪ್ರಕ್ರಿಯೆಗೊಳಪಡಿಸಿ ಅದೇ ಉದ್ದೇಶಕ್ಕೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಗಳಿಗೆ ಕಡಿಮೆ ಇಲ್ಲದಂತೆ ದುಪ್ಪಟ್ಟು ದರದಲ್ಲಿ ವಿಲೇವಾರಿ ಮಾಡಿಕೊಂಡಿರುವಂತೆ 2020ರ ಅಕ್ಟೋಬರ್ 19ರ ಸರ್ಕಾರಿ ಅಧಿಸೂಚನೆಯನ್ವಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾ ನಿಸಲಾಗಿದೆ ಎಂದೂ ಅಧ್ಯಕ್ಷರು ಹೇಳಿದರು.

ನಕ್ಷೆ ಅನುಮೋದನೆಗೆ ಕನಿಷ್ಟ 20 ಗುಂಟೆ ಮಿತಿ
ಮುಡಾ ವ್ಯಾಪ್ತಿಯ ಜಮೀನುಗಳನ್ನು ತುಂಡು ಮಾಡಿ ಅಥವಾ ಬಿಡಿ ನಿವೇಶನಗಳನ್ನಾಗಿ ಮಾಡಿ ಅಭಿವೃದ್ಧಿ ಪಡಿಸುವ ಮೊದಲು ಭೂ ಪರಿವರ್ತನೆಯಾದ ಒಟ್ಟಾರೆ ಪ್ರದೇಶಕ್ಕೆ ನಕ್ಷೆ ಅನುಮೋದನೆ ಪಡೆಯದೆ, ಪುನರ್ ವಿಂಗ ಡಣೆ ಮಾಡಿ ಗ್ರಾಮ ಪಂಚಾಯ್ತಿಯಲ್ಲಿ ಅನಧಿಕೃತವಾಗಿ ಖಾತಾ ಮಾಡಿಕೊಂಡು ಅಂತಹ ಜಮೀನುಗಳಿಗೆ ನಕ್ಷೆ ಮಂಜೂರು ಮಾಡಿಕೊಡುವಂತೆ ಮುಡಾಗೆ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬರುತ್ತಿರುವುದರಿಂದ, ಈ ರೀತಿ ಅನಧಿಕೃತವಾಗಿ ವಿಭಜನೆಯಾದ ಪ್ರದೇಶದ ಕನಿಷ್ಠ 20 ಗುಂಟೆಗೆ ಮಾತ್ರ ಮಾಲೀಕರು ಬಡಾವಣೆ ಅಭಿವೃದ್ಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದರೆ ಅನುಮೋದನೆ ನೀಡಲು ಸಭೆ ತೀರ್ಮಾನಿಸಿದೆ ಎಂದರು.

ಕಟ್ಟಡ ನಕ್ಷೆ ಪರವಾನಗಿ ಅವಧಿ ವಿಸ್ತರಣೆ
ಕಟ್ಟಡ ನಕ್ಷೆ ಅನುಮೋದನೆಗೊಂಡು ಅವಧಿ ಮುಕ್ತಾಯ ವಾಗುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 2021ರ ಮಾರ್ಚ್ 31ರವರೆಗೆ ಕಟ್ಟಡ ನಕ್ಷೆಗಳ ಪರವಾನಗಿ ವಿಸ್ತರಿ ಸಲಾಗಿದ್ದು, ತದನಂತರ ನವೀಕರಣ ಕೋರಲು ಹಾಗೂ ಅಂತಿಮ ಅವಧಿಯನ್ನು 5 ವರ್ಷಕ್ಕೆ ಮಿತಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ, ನಗರ ಯೋಜಕ ಸದಸ್ಯ ಜಯಸಿಂಹ, ಸದಸ್ಯರಾದ ಕೆ.ಮಾದೇಶ್, ನವೀನ್‍ಕುಮಾರ, ಲಕ್ಷ್ಮೀ ದೇವಿ, ಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »