ಸಿಡಿ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲು
ಮೈಸೂರು

ಸಿಡಿ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲು

March 23, 2021

ಸಿಬಿಐ ತನಿಖೆ ಅನಿವಾರ್ಯ: ಶಿವರಾಮೇಗೌಡ

ಮೈಸೂರು,ಮಾ.22(ಎಂಟಿವೈ)-ಸಮಾಜದಲ್ಲಿ ರಾಜಕಾರಣಿಗಳಿಗೆ ಗೌರವ ಹಾಗೂ ವಿಶೇಷ ಸ್ಥಾನ ಮಾನವಿರುತ್ತದೆ. ಆದರೆ ಸಿಡಿ ಪ್ರಕರಣದಿಂದಾಗಿ ನಾವು ಇಂತಹ ಪರಿಸ್ಥಿತಿಯಲ್ಲಿ ಇದ್ದೇವಾ ಎಂಬ ಜಿಜ್ಞಾಸೆ ಕಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದ ಸತ್ಯಾಸತ್ಯತೆ ತಿಳಿದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಂಸದ ಎಲ್. ಆರ್.ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ಮೈಸೂರಲ್ಲಿ ಸೋಮವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಡೆಯನ್ನು ಗಮನಿಸಿದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರುವುದು ಮೇಲ್ನೋ ಟಕ್ಕೆ ಕಂಡು ಬರುತ್ತಿದೆ, ಜೆಡಿಎಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆಯಾದ ಮೂರೇ ದಿನದಲ್ಲಿ ಪ್ರಕರಣ ನೆಲಕಚ್ಚಿಸಲು ಸರ್ಕಾರವೇ ಎಲ್ಲಾ ರೀತಿಯ ಯತ್ನ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಅದು ಸತ್ಯವಾಗುತ್ತಿದೆ. ಪ್ರಕರಣದ ಸತ್ಯಾಂಶ ತಿಳಿಯಬೇಕಾದರೆ ಸಿಬಿಐಗೆ ವಹಿಸುವ ಅಗತ್ಯ ವಿದೆ. ಈಗಾಗಲೇ ಬಿಜೆಪಿಯ ಕೆಲ ನಾಯಕರೇ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಹಾಗಾಗಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕೊರೊನಾ 2ನೇ ಅಲೆಯಿಂದಾಗಿಯೂ ಸಿಡಿ ಪ್ರಕರಣ ಮುಚ್ಚೋಗುವ ಹಂತಕ್ಕೆ ತಲುಪಿದೆ. ಮಾಧ್ಯಮಗಳಲ್ಲೂ ಸಿಡಿ ಸುದ್ದಿ ಬರುತ್ತಿಲ್ಲ. ರಾಜ ಕಾರಣದಲ್ಲಿ ಇರುವ ನಮಗೆ ಸಮಾಜದಲ್ಲಿ ಗೌರವ ಯುತವಾದ ಸ್ಥಾನಮಾನವಿದೆ. ಇತ್ತೀಚಿನ ದಿನ ಗಳಲ್ಲಿ ಸಿಡಿ ಪ್ರಕರಣ ಸೇರಿದಂತೆ ಕೆಲವು ವರ್ತನೆ ನೋಡಿದಾಗ ನಾವೆಲ್ಲಾ ರಾಜಕಾರಣದಲ್ಲಿ ಇದ್ದೇವಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವಿಷಾದಿಸಿದರು.

ಆತಂಕ ಕಾಡುತ್ತಿದೆ: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ವೇಗವನ್ನು ನೋಡಿದರೆ ಆತಂಕ ಉಂಟಾಗುತ್ತಿದೆ. ಮೊದಲು ಬಂದಿದ್ದ ಕೊರೊನಾ ಗಿಂತ ಈಗ ಕಾಣಿಸುತ್ತಿರುವ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ. ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ದೊಡ್ಡ ಅಪಾಯ ಉಂಟಾ ಗಬಹುದು ಎಂಬ ಅನು ಮಾನ ವ್ಯಕ್ತವಾಗುತ್ತಿದೆ. ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸ ಆಗು ತ್ತಿಲ್ಲ. ಜನರನ್ನು ದಿಕ್ಕು ತಪ್ಪಿ ಸುತ್ತಿದ್ದಾರೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿಲ್ಲ. ಕೇರಳ, ಮಹಾರಾಷ್ಟ್ರ, ಗೋವಾದಿಂದ ಬರುವವರನ್ನು ತಪಾಸಣೆ ಮಾಡುತ್ತಿಲ್ಲ. ವಿದೇಶ ಹಾಗೂ ಹೊರ ರಾಜ್ಯಗ ಳಿಂದ ಬಂದವರ ಮೇಲೆ ನಿಗಾ ವಹಿಸಬೇಕು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಗಳು ಮಾರು ಕಟ್ಟೆಯಂತೆ ದರ ಹೆಚ್ಚಳ ಮಾಡಿದವು. ಅದನ್ನು ಈ ಬಾರಿ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಶಿವರಾಮೇಗೌಡ ಒತ್ತಾಯಿಸಿದರು.

ಶಾಸಕ ಜಿ.ಟಿ.ದೇವೇಗೌಡರಿಗೆ
ಜೆಡಿಎಸ್ ಅನಿವಾರ್ಯ
ಅಣ್ಣ ತಮ್ಮಂದಿರಲ್ಲೇ ವ್ಯತ್ಯಾಸ ಸಹಜ. ಎಲ್ಲಾ ಪಕ್ಷಗಳಲ್ಲೂ ಸಣ್ಣಪುಟ್ಟ ಗೊಂದಲ ಇದ್ದೇ ಇರುತ್ತವೆ. ಅದನ್ನು ಮಾತುಕತೆ ಮೂಲಕ ಸರಿ ಪಡಿಸಿಕೊಳ್ಳಲಾಗುತ್ತದೆ. ಶಾಸಕ ಜಿ.ಟಿ.ದೇವೇ ಗೌಡ ಜೆಡಿಎಸ್‍ಗೆ ಅನಿವಾರ್ಯ. ಈಗಾಗಲೇ ಬಿಜೆಪಿಗೆ ಹೋಗಿ ಬಂದಿರುವ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವವರೆಗೂ ಕಾಂಗ್ರೆಸ್‍ಗೆ ಸೇರ್ಪಡೆಯಾಗಲು ಅವಕಾಶ ಸಿಗುವುದಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಅಭ್ಯರ್ಥಿ ಜಿಟಿಡಿ ಆಗಿ ರುವುದರಿಂದ ಆ ಪಕ್ಷಕ್ಕೆ ಸೇರಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಜಿಟಿಡಿ ನಮ್ಮ ಪಕ್ಷದಲ್ಲೇ ಮುಂದುವರೆಯಲು ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ನಾಗಮಂಗಲದಲ್ಲಿ ನಾನೇ ಅಭ್ಯರ್ಥಿ: ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಕಳೆದ ಬಾರಿ ಮೊದಲ ಬಾರಿಗೆ ಅರಳಿದ್ದ ಕಮಲ ಈಗಾಗಲೇ ಬಾಡಿ ಹೋಗಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳ ಗೆಲುವು ಕಟ್ಟಿಟ್ಟಬುತ್ತಿ. ನಾಗಮಂಗಲದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿ ಯಲಿದ್ದೇನೆ. ಶಾಸಕ ಸುರೇಶ್‍ಗೌಡಗೆ ಪರ್ಮ ನೆಂಟಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಅವರಿಗೆ ಎಂಎಲ್‍ಸಿ ಅವಕಾಶ ನೀಡಲಾಗು ತ್ತದೆ. ಕಳೆದ ಬಾರಿ ಕಡಿಮೆ ಅವಧಿಯಲ್ಲಿ ಸಂಸದನಾಗಿದ್ದಕ್ಕೆ ನನಗೆ ಆಗಿರುವ ನೋವನ್ನು ಹೆಚ್.ಡಿ.ದೇವೇಗೌಡರು ಅರ್ಥ ಮಾಡಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗಲಿದೆ. ಜೆಡಿಎಸ್‍ನಿಂದ ಮುಖಂಡರು ಹೊರಹೋಗಬಹುದು. ಆದರೆ ಎಂದಿಗೂ ಕಾರ್ಯಕರ್ತರು ಪಕ್ಷಕ್ಕೆ ಕೈ ಕೊಟ್ಟಿಲ್ಲ ಎಂದರು.

Translate »