ವೀರ ಭಗತ್‍ಸಿಂಗ್‍ರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ: ವೆಂಕಟರಾಮ್ ಬೇಸರ
ಮೈಸೂರು

ವೀರ ಭಗತ್‍ಸಿಂಗ್‍ರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ: ವೆಂಕಟರಾಮ್ ಬೇಸರ

March 23, 2021

ಮೈಸೂರು, ಮಾ.22(ಆರ್‍ಕೆಬಿ)- ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಭಗತ್‍ಸಿಂಗ್ ಅವರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ ನಡೆದಿದೆ ಎಂದು ಆರ್‍ಎಸ್‍ಎಸ್ ಮೈಸೂರು ಮತ್ತು ಮಂಗಳೂರು ಪ್ರಾಂತದ ಪ್ರಮುಖ ವೆಂಕಟರಾಮ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾ ಥಾಲಯದಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಏರ್ಪಡಿಸಿದ್ದ ಹುತಾತ್ಮರ ದಿನದಲ್ಲಿ ಹುತಾತ್ಮ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಮಾತನಾಡಿದರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವ ಮಹಾನ್ ವ್ಯಕ್ತಿಗಳನ್ನು ಯಾವುದೇ ಪಂಥಕ್ಕೆ ಸೀಮಿತಗೊಳಿ ಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಜಲಿಯನ್‍ವಾಲಾ ಬಾಗ್ ದುರ್ಘಟನೆ ಬಾಲಕ ಭಗತ್‍ಸಿಂಗ್ ಮೇಲೆ ಬೀರಿದ ಪರಿಣಾಮ, ಚಂದ್ರಶೇಖರ್ ಆಜಾದ್ ಸಂಪರ್ಕ, ವೀರ ಸಾವರ್ಕರ್ ನೀಡಿದ ಪ್ರೇರಣೆ ಬಗ್ಗೆ ತಿಳಿಸಿದರು. ಬ್ರಿಟೀಷರ ವಿರುದ್ಧ ಕ್ರಾಂತಿಕಾರಿ ಗಳಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್‍ರವರು ನಡೆಸಿದ ಶೂರ ಹೋರಾಟಗಳು, ಅದಕ್ಕಾಗಿ ಅವರು ಪಟ್ಟ ಕಷ್ಟ, ಪ್ರಾಣಾರ್ಪಣೆ ವಿವರಿ ಸಿದರು. ಕಾರ್ಯಕ್ರಮದಲ್ಲಿ ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ್, ಅನಾಥಾಲಯದ ಕಾರ್ಯದರ್ಶಿ ನಾಗರಾಜ್, ವೀರ ಸಾವರ್ಕರ್ ಯುವ ಬಳಗದ ಉಪಾಧ್ಯಕ್ಷ ಸಂದೇಶ್ ಪವಾರ್, ಮುಖಂಡ ರಾದ ಟಿ.ಎಸ್.ಅರುಣ್, ಪ್ರಮೋದ್‍ಗೌಡ, ರವಿಚಂದ್ರ, ವಿಕ್ರಂ ಅಯ್ಯಂಗಾರ್, ಎಸ್.ರಂಗನಾಥ್, ಮಧು ಪೂಜಾರ್, ಟಿ.ಪಿ.ಮಧುಸೂಧನ್, ಪುನೀತ್ ಇನ್ನಿ ತರರು ಉಪಸ್ಥಿತರಿದ್ದರು.

Translate »