ಹುಕ್ಕಾ ಬಾರ್, ರಿಕ್ರಿಯೇಷನ್ ಕ್ಲಬ್‍ಗಳ ಬಂದ್
ಮೈಸೂರು

ಹುಕ್ಕಾ ಬಾರ್, ರಿಕ್ರಿಯೇಷನ್ ಕ್ಲಬ್‍ಗಳ ಬಂದ್

December 9, 2020

ಬೆಂಗಳೂರು, ಡಿ.8(ಕೆಎಂಶಿ)-ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಹುಕ್ಕಾ ಬಾರ್ ಸೇರಿದಂತೆ ಮನ ರಂಜನಾ ಕೇಂದ್ರಗಳನ್ನು ಮುಚ್ಚಿಸುವುದಾಗಿ ಗೃಹಸಚಿವ ಬಸವ ರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ನ ಈಶ್ವರ್ ಖಂಡ್ರೆ ಮಾಡಿದ ಪ್ರಸ್ತಾಪಕ್ಕೆ ಹಲವು ಸದಸ್ಯರು ಮಾದಕದ್ರವ್ಯಗಳ ಸೇವನೆ ತಡೆ ಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿ ಸಿದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತ ನಾಡಿದ ಗೃಹಸಚಿವರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಹುಕ್ಕಾಬಾರ್‍ಗಳು ತಲೆ ಎತ್ತಿ ಯುವಕರು ಮಾದಕ ವ್ಯಸನಿ ಗಳಾಗಲು ಕಾರಣವಾಗುತ್ತಿವೆ. ಇಂಥ ಕೇಂದ್ರ ಗಳನ್ನು ತಕ್ಷಣವೇ ಮುಚ್ಚಿಸಲು ಆದೇಶಿಸು ತ್ತೇನೆ. ಹುಕ್ಕಾ ಬಾರ್‍ಗಳಲ್ಲದೆ, ರಾಜ್ಯದ ಕೆಲವು ಕಡೆ ರಿಕ್ರಿಯೇಷನ್ ಕ್ಲಬ್ ಆರಂಭಗೊಂಡು ಮಾದಕದ್ರವ್ಯ ಮಾರಾಟ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿವೆ. ಮಾದಕ ದ್ರವ್ಯದ ವಿರುದ್ಧ ನಮ್ಮ ಸರ್ಕಾರ ಹತ್ತಿಕ್ಕಲು ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.

ಹುಕ್ಕಾಬಾರ್, ರಿಕ್ರಿಯೇಷನ್ ಕ್ಲಬ್, ಮನ ರಂಜನಾ ತಾಣಗಳು ಹಾಗೂ ಶಸ್ತ್ರಾಸ್ತ್ರ ಮಾರಾಟ ಮಾಡುವವರ ನಡುವೆ ಪರಸ್ಪರ ಸಂಪರ್ಕವಿದೆ. ಕಳೆದ ಮೂರು ತಿಂಗಳಲ್ಲಿ ಈ ಮಾದಕ ವಸ್ತು ಸೇವನೆ ವಿರುದ್ಧ ಸರ್ಕಾರ ದೊಡ್ಡ ಆಂದೋಲನವನ್ನೇ ಕೈಗೆತ್ತಿಕೊಂ ಡಿದೆ. ಇದು ಯುವ ಜನರನ್ನು ಹಾದಿ ತಪ್ಪಿ ಸುವುದಲ್ಲದೆ, ಕಾನೂನು ಸುವ್ಯವಸ್ಥೆ ಹದ ಗೆಡಲು ಹಾಗೂ ಕೋಮು ಗಲಭೆ ಹುಟ್ಟಲು ಮೂಲ ಕಾರಣ. ಪೆಡ್ಲರ್‍ಗಳನ್ನು ಹತ್ತಿಕ್ಕಲು ಮಾದಕ ವಸ್ತು ಮಾರಾಟ ಮಾಡುವವರು ಮತ್ತು ಸೇವಿಸುವವರ ವಿರುದ್ಧ ಕಠಿಣ ಕಾನೂನು ಜಾರಿ ಮಾಡಿದ್ದೇವೆ. ಹೀಗಾಗಿ ಮೊದಲಿನಂತೆ ಇಂತಹ ಪ್ರಕರಣದಲ್ಲಿ ಸಿಲುಕಿ ದವರು ಜಾಮೀನು ಪಡೆದು ಹೊರ ಬರಲಾಗು ತ್ತಿಲ್ಲ. ಅಲ್ಲದೆ, ಗೂಂಡಾ ಕಾಯ್ದೆಯಡಿಯೂ ಬಂಧಿಸಲಾಗುತ್ತಿದೆ ಎಂದರು.

ಮಾದಕ ದ್ರವ್ಯಗಳ ಮಾರಾಟ, ಸಾಗಾಣೆ, ಸೇವನೆ ತಡೆಗಟ್ಟಲು ಹಾಗೂ ನಿಯಂ ತ್ರಿಸಲು ಎನ್‍ಡಿಪಿಎಸ್ ಕಾಯ್ದೆ ಜಾರಿಗೆ ತಂದಿದ್ದು, ಹಾಲಿ ಕಾಯ್ದೆಗೆ ಹೆಚ್ಚಿನ ಬಲ ನೀಡಲು ಸಾಧ್ಯವಾದರೆ, ಪ್ರಸಕ್ತ ಅಧಿವೇ ಶನದಲ್ಲೇ ತಿದ್ದುಪಡಿ ತರುವುದಾಗಿ ಬೊಮ್ಮಾಯಿ ತಿಳಿಸಿದರು. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆವರಣ ಗಳಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ, ಸಾಗಾಣಿಕೆ ತಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಕರ್ತವ್ಯ ನಿಗದಿಪಡಿಸ ಲಾಗಿದೆ. ಕಳೆದ ಹತ್ತು ತಿಂಗಳಲ್ಲೇ ಎನ್‍ಡಿಪಿಎಸ್ ಕಾಯ್ದೆಯಡಿ 3852 ಪ್ರಕರಣ ಗಳನ್ನು ದಾಖಲಿಸಿ 2285 ದೋಷಾ ರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು.

Translate »